»   » ಕಿಚ್ಚ ಪರಭಾಷೆಗೆ ಹೋಗಿ ಒದೆ ತಿನ್ಬೇಡಿ!

ಕಿಚ್ಚ ಪರಭಾಷೆಗೆ ಹೋಗಿ ಒದೆ ತಿನ್ಬೇಡಿ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಲ್ಲಿ ಬಾಸ್ ಆಗಿ ಮೆರೆದ ಕಿಚ್ಚ ಸುದೀಪ್ ಯಶಸ್ಸಿನ ಅಲೆಯಲ್ಲಿ ತೇಲಿದ ಸುದೀಪ್ ಅವರಿಗೆ ಎಂದೂ ಸಾಧನೆಯಿಂದ ತಲೆ ತಿರುಗಿಲ್ಲ. ಇತ್ತೀಚೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕಪ್ ಎತ್ತಿ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವ ಕಿಚ್ಚ ಅವರು ಮಾಣಿಕ್ಯ ಚಿತ್ರದ ನಂತರ ಯಾವ ಚಿತ್ರ ಮಾಡುತ್ತಾರೆ ಎಂಬ ಕುತೂಹಲ ಇದ್ದೇ ಇದೆ.

ಚಲನಚಿತ್ರ ಕೃಷಿಯಲ್ಲಿ ಮತ್ತೆ ತೊಡಗಿಕೊಂಡಿರುವ ಸುದೀಪ್ ಮೇಲೆ ಮತ್ತೊಮ್ಮೆ ಅವಕಾಶಗಳು ಸುರಿಮಳೆಗೈಯುತ್ತಿವೆ. ಕನ್ನಡದ ದೊಡ್ಡ ದೊಡ್ಡ ನಿರ್ದೇಶಕರು ಸುದೀಪ್ call sheet ಸಿಗದೆ ಪರಿತಪಿಸುವ ಬೆನ್ನಲ್ಲೆ ಪರಭಾಷೆ ನಿರ್ಮಾಪಕ, ನಿರ್ದೇಶಕರ ಜೊತೆ ಸುದೀಪ್ ಮಾತುಕತೆ ನಡೆಯುತ್ತಲೇ ಇದೆ. ಈ ನಡುವೆ ಕಿಚ್ಚ ಸುದೀಪ್ ಅಭಿನಯದ ಬಚ್ಚನ್' ಚಿತ್ರ ಹಿಂದಿ ಆವೃತ್ತಿ, ತೆಲುಗು, ತಮಿಳು ಬಚ್ಚನ್ ಚಿತ್ರ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.

ಖ್ಯಾತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಮತ್ತು ತೆಲುಗಿನ ಎಸ್ ಎಸ್ ರಾಜಮೌಳಿ ಜೊತೆ ಈಗಾಗಲೇ ಕೆಲಸ ಮಾಡಿರುವ ಸುದೀಪ್, ಈಗ ತಮಿಳಿನ ಹೆಸರಾಂತ ನಿರ್ದೇಶಕ ಕೆಎಸ್ ರವಿಕುಮಾರ್ ಚಿತ್ರದಲ್ಲಿ ನಟಿಸುವ ಸುದ್ದಿ ಈಗ ಬಹುತೇಕ ಖಚಿತವಾಗಿದೆ. ತೆಲುಗಿನ 'ಈಗ' ಚಿತ್ರದ ದಕ್ಷಿಣ ಭಾರತದಲ್ಲಿ ಮನೆಮಾತಾಗಿರುವ ಸುದೀಪ್ ಈಗ ಮತ್ತೊಮ್ಮೆ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

ಕಿಚ್ಚ ದಯವಿಟ್ಟು ವಿಲನ್ ಆಗಿ ಕಾಣಿಸಿಕೊಳ್ಳಬೇಡಿ

ತೆಲುಗಿನ ಜನಪ್ರಿಯ ನಟ ಅಲ್ಲರಿ ನರೇಶ್ ಚಿತ್ರವೊಂದರಲ್ಲಿ ನಟಿಸಿದ್ದ ಸುದೀಪ್ ಅವರು ರಾಜಮೌಳಿ ಅವರ ಬಾಹುಬಲಿ ಚಿತ್ರದಲ್ಲಿ ನೆಗಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಕೆಎಸ್ ರವಿಕುಮಾರ್ ಚಿತ್ರದಲ್ಲಿ ರಜನಿ ಕಾಂತ್ ನಾಯಕರಾಗಿದ್ದು, ಕಿಚ್ಚ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದೆ ತಡ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಟ್ವೀಟ್ ಮಳೆಗರೆದು ಕಿಚ್ಚ ದಯವಿಟ್ಟು ವಿಲನ್ ಆಗಿ ಕಾಣಿಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ರಾಜ್ ಮ್ಯೂಸಿಕ್ ಸೇರಿ ಹಲವೆಡೆ ಸುದ್ದಿ

ರಾಜ್ ಮ್ಯೂಸಿಕ್ ಸೇರಿ ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ

ದೀಪು ಅಣ್ಣ ನನ್ನ ಟ್ವೀಟ್ ಗೆ ಉತ್ತರಿಸಿ

ದೀಪು ಅಣ್ಣ ನನ್ನ ಟ್ವೀಟ್ ಗೆ ಉತ್ತರಿಸಿ ಎಂದು ಅಭಿಮಾನಿಗಳಿಂದ ಮನವಿ

ರಜನಿ ಋಣ ತೀರಿಸಲು ಕಿಚ್ಚ ಒಪ್ಪಿಗೆ

ರಜನಿ ಋಣ ತೀರಿಸಲು ಕಿಚ್ಚ ಸುದೀಪ್ ಒಪ್ಪಿಗೆ ನೀಡಿದ್ರಾ? ರವಿಕುಮಾರ್ ಚಿತ್ರಕ್ಕೆ ಸುದೀಪ್ ಹೆಸರನ್ನು ರಜನಿಕಾಂತ್ ಸೂಚಿಸಿದ ಸುದ್ದಿ ಓದಿ

English summary
If the rumors of the tinsel-town are to be believed Sudeep is going to act in a main villain role against none other than Super Star Rajinikanth in a Tamil movie. Again, there are large sector of his fans who are disappointed by this choice. Lot of concerns has been raised in the social networking sites
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada