Don't Miss!
- News
ದೆಹಲಿ; ವಿಷಾನೀಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ, ಇಬ್ಬರು ಮಕ್ಕಳು
- Sports
ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?
- Education
CUET 2022 Registration : ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಂದು ಕೊನೆಯ ದಿನ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನಮ್ಮನೆ ಮದುವೆ': ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಸಾಮೂಹಿಕ ವಿವಾಹ
ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ತಮ್ಮ ನಟನೆ, ಹಿಟ್ ಸಿನಿಮಾಗಳ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿಯೂ ಜನಪ್ರಿಯರು.
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂಥಹಾ ಮಹನೀಯರು ಸಮಾಜದೆಡೆಗೆ ತಮ್ಮನ್ನು ತೊಡಗಿಸಿಕೊಂಡು ಹಾಕಿಕೊಟ್ಟ ಹಾದಿಯಲ್ಲಿ ಈಗಿನ ಸ್ಟಾರ್ ನಟರು ಸಹ ಸಾಗುತ್ತಿದ್ದಾರೆ. ಇತ್ತೀಚೆಗಷ್ಟೆ ಅಗಲಿದ ಪುನೀತ್ ರಾಜ್‌ಕುಮಾರ್ ಮಾಡಿದ್ದ ಸಮಾಜ ಸೇವೆ ರಾಜ್ಯದಲ್ಲೇ ಅಲ್ಲ ಇಡೀಯ ದೇಶದಲ್ಲಿಯೇ ಚರ್ಚೆಗೆ ಕಾರಣವಾಗಿ ಆ ಮೂಲಕ ನಮ್ಮ ಚಿತ್ರರಂಗಕ್ಕೆ ಹೆಮ್ಮೆ ತಂದುಕೊಟ್ಟಿದೆ.
ನಟ ಸುದೀಪ್ ಸಹ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದೆ. ಸುದೀಪ್ ಅವರ ಆಶೀರ್ವಾದ, ಹಾರೈಕೆ, ಬೆಂಬಲದಿಂದಲೇ ನಡೆಯುತ್ತಿರುವ 'ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ' ಕಳೆದ ಐದು ವರ್ಷಗಳಿಂದಲೂ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಇದೀಗ ಈ ಚಾರಿಟೇಬಲ್ ಸೊಸೈಟಿಗೆ ಐದು ವರ್ಷ ತುಂಬಿದ ಸಂಭ್ರಮಕ್ಕೆಂದು ಸಾಮೂಹಿಕ ವಿವಾಹವನ್ನು ಆಯೋಜಿಸಿದೆ.
ಐದು ಜೋಡಿಗಳಿಗೆ ಸರಳವಾಗಿ ವಿವಾಹ ಮಾಡಲು 'ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ' ಯೋಜನೆ ರೂಪಿಸಿಕೊಂಡಿದ್ದು. ಆರ್ಥಿಕವಾಗಿ ಅಶಕ್ತರು ಸಾಮೂಹಿಕ ವಿವಾಹವಾಗಲು ಅರ್ಜಿ ಹಾಕಿಕೊಂಡಲ್ಲಿ, ನಿಯಮಗಳಿಗೆ ಅನ್ವಯವಾಗಿ ಅವರ ವಿವಾಹವನ್ನು ಫೆಬ್ರವರಿ ತಿಂಗಳಲ್ಲಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯು ನೆರವೇರಿಸುತ್ತದೆ.

ಆರ್ಥಿಕ ಅಶಕ್ತರು ಅರ್ಜಿ ಸಲ್ಲಿಸಬಹುದು
ಚಾರಿಟೇಬಲ್ ಸೊಸೈಟಿಯಿಂದ ಮಾಡಲಾಗುವ ವಿವಾಹ, ಸರಳ ವಿವಾಹವಾಗಿರಲಿದೆ. ಯಾವುದೇ ಆಡಂಭರವಿಲ್ಲದೆ ಸರಳವಾಗಿ ಜೋಡಿಗಳನ್ನು ವಿವಾಹ ಬಂಧಕ್ಕೆ ಒಳಪಡಿಸಲಾಗುತ್ತದೆ. ಆರ್ಥಿಕವಾಗಿ ಅಶಕ್ತರಾಗಿರುವವರು, ಆರ್ಥಿಕವಾಗಿ ಶಕ್ತರಿದ್ದು ಸರಳ ವಿವಾಹ ಆಗುವ ಆದರ್ಶ ಹೊಂದಿರುವವರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯನ್ನು ಜನವರಿ 02ರ ಒಳಗೆ ಸಂಪರ್ಕಿಸಿ ಅಗತ್ಯ ದಾಖಲೆ ಸಲ್ಲಿಸಬೇಕಿದೆ. ಸಂಪರ್ಕ ಸಂಖ್ಯೆ 'ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ' ಫೇಸ್‌ಬುಕ್ ಪುಟದಲ್ಲಿ ಲಭ್ಯವಿದೆ.

ಫೆಬ್ರವರಿ 14ರಂದು ವಿವಾಹ
ಸಲ್ಲಿಸಲಾದ ದಾಖಲೆಗಳನ್ನು ಚಾರಿಟೇಬಲ್ ಸೊಸೈಟಿಯ ಸದಸ್ಯರು ಪರಿಶೀಲನೆ ನಡೆಸಿ, ಕಾನೂನು ರಿತ್ಯ ವಿವಾಹವನ್ನು ಮಾಡುತ್ತಾರೆ. ವಿವಾಹವು ಫೆಬ್ರವರಿ 14 ರಂದು ನಡೆಯಲಿದೆ. ಈ ಸಾಮೂಹಿಕ ವಿವಾಹ ಮಾಡಲು ಚಾರಿಟೇಬಲ್ ಸೊಸೈಟಿಗೆ ಯಾವುದೇ ಹಣ ನೀಡಬೇಕಿಲ್ಲ. ಈ ಬಗ್ಗೆ ಸೊಸೈಟಿಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದು, ಈ ಮದುವೆಗೆ ಮಾತ್ರವೇ ಅಲ್ಲ ಯಾವುದೇ ವ್ಯಕ್ತಿಗಳಿಂದ, ಯಾವುದೇ ರೀತಿಯಲ್ಲಿ ಸೊಸೈಟಿಯು ಹಣ ಪಡೆಯುವುದಿಲ್ಲ ಎಂದು ವಿಡಿಯೋ ಸಂದೇಶದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಔತಣ ಕೂಟ ಆಯೋಜನೆ
ಇದು ಮಾತ್ರವೇ ಅಲ್ಲದೆ, ಚಾರಿಟೇಬಲ್ ಸೊಸೈಟಿ ಐದು ವರ್ಷ ಪೂರೈಸಿದ ಸವಿ ಸಂದರ್ಭದ ನೆನಪಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಸದಸ್ಯರು ಕಿಚ್ಚನ ಅಭಿಮಾನಿಗಳಿಗೆ ಔತಣ ಕೂಟ ಆಯೋಜಿಸುವ ಕಾರ್ಯಕ್ರಮವನ್ನೂ ಸೊಸೈಟಿ ಯೋಜಿಸಿದೆ. ಈ ಬಗ್ಗೆ ಹಾಗೂ 'ನಮ್ಮನೆ ಮದುವೆ' ಸಾಮೂಹಿಕ ವಿವಾಹದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸೊಸೈಟಿಯ ಸದಸ್ಯರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳಲಿದ್ದಾರೆ.

ಕೋವಿಡ್ ಸಮಯದಲ್ಲಿ ಉತ್ತಮ ಕಾರ್ಯ
ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯು ಹಲವು ವರ್ಷಗಳಿಂದಲೂ ಸಮಾಜ ಮುಖಿ ಕಾರ್ಯ ಮಾಡುತ್ತಾ ಬರುತ್ತಿದೆ. ವಿಶೇಷವಾಗಿ ಬಡ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕೆಲಸ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಸಹ ಚಿತ್ರರಂಗದ ಎಲ್ಲ ಹಿರಿಯ ನಟ-ನಟಿಯರಿಗೆ ಆಹಾರ, ಅಗತ್ಯ ಔಷಧಿಗಳು ಇನ್ನಿತರೆ ಸಹಾಯವನ್ನು ಸುದೀಪ್ ಪಡೆಯಿಂದ ನೀಡಿತ್ತು ಈ ಸೊಸೈಟಿ. ಜೊತೆಗೆ ಆಮ್ಲಜನಕ ಸಿಲಿಂಡರ್ ನೀಡಿಕೆ ಕೆಲಸವನ್ನು ಸಹ ಈ ತಂಡ ಮಾಡಿದ್ದು ವಿಶೇಷ.