ಈ ವರ್ಷ 'ಮ್ಯಾಕ್ಸ್' ಮರೆತುಬಿಡಿ; ಮತ್ತೆ ಅದೇ ರಾಗ ಅದೇ ಹಾಡು!

ಸ್ಟಾರ್ ನಟರು ವರ್ಷಕ್ಕೆ ಮೂರು ಸಿನಿಮಾ ಮಾಡಬೇಕು ಎನ್ನುವ ಕೂಗು ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಆದರೆ ಕೆಲವರು ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸುದೀಪ್ ನಟನೆಯ 'ಮ್ಯಾಕ್ಸ್' ಈ ಸಿನಿಮಾ ತೆರೆಗೆ ಬರುವುದು ಬಹುತೇಕ ಅನುಮಾನ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ತಯಾರಿ ನಡೀತಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗ್ತಿದೆ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಸದ್ಯಕ್ಕಂತೂ ಸಿನಿಮಾ ತೆರೆಗೆ ಬರಲ್ಲ ಎನ್ನುವುದು ಗೊತ್ತಾಗುತ್ತಿದೆ.

kichcha Sudeep fans upset over delay in MAX movie release

ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್ ತನು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಸುನಿಲ್, ಸುಕೃತಾ ವಾಗ್ಲೆ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಚಿತ್ರದಲ್ಲಿ ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಮ್ಯಾಕ್ಸ್' ಚಿತ್ರಕ್ಕಿದೆ.

'ವಿಕ್ರಾಂತ್ ರೋಣ' ಸಿನಿಮಾ ಬಳಿಕ ನಟ ಸುದೀಪ್ ಒಂದು ವರ್ಷ ಬಿಡುವು ಪಡೆದರು. ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ಆದರೆ ಈ ಅವಧಿಯಲ್ಲಿ 3 ಕಥೆಗಳನ್ನು ಕೇಳಿ ಫೈನಲ್ ಮಾಡಿದ್ದು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಸದ್ಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣ ಮುಗಿದಿದೆ. ಹೊಸ ಸಿನಿಮಾ ಶುರುವಾಗಿಲ್ಲ. ಅದ್ಯಾಕೋ 'ಮ್ಯಾಕ್ಸ್' ರಿಲೀಸ್ ತಡವಾಗುತ್ತಿದೆ.

kichcha Sudeep fans upset over delay in MAX movie release

ಈ ವರ್ಷ ಸುದೀಪ್ ಹುಟ್ಟುಹಬ್ಬಕ್ಕೆ 'ಮ್ಯಾಕ್ಸ್' ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಸಾಧ್ಯವಾಗಲಿಲ್ಲ. ಬಳಿಕ ಅಕ್ಟೋಬರ್, ನವೆಂಬರ್ ಎನ್ನುವ ಚರ್ಚೆ ನಡೀತು. ಕೊನೆಗೊಂದು ದಿನ ರಿಲೀಸ್ ಡೇಟ್ ಘೋಷಣೆ ಮಾಡುವುದಾಗಿ ಸ್ವತಃ ನಿರ್ಮಾಪಕರೇ ಹೇಳಿ ಕೊನೆ ಕ್ಷಣದಲ್ಲಿ ಸೈಲೆಂಟ್ ಆಗಿದ್ದರು.

ಡಿಸೆಂಬರ್‌ನಲ್ಲಿ 'ಪುಷ್ಪ'-2 ಹಾಗೂ 'ಯುಐ' ಚಿತ್ರಗಳು ತೆರೆಗೆ ಬರ್ತಿವೆ. ಹಾಗಾಗಿ ಈ ವರ್ಷ 'ಮ್ಯಾಕ್ಸ್' ರಿಲೀಸ್ ಸಾಧ್ಯವೇ ಇಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ. ಆದರೆ ತೆಲುಗು, ತಮಿಳಿನ ದೊಡ್ಡ ದೊಡ್ಡ ಚಿತ್ರಗಳು ಸುಗ್ಗಿ ಹಬ್ಬದ ರೇಸ್‌ನಲ್ಲಿವೆ. 'ಮ್ಯಾಕ್ಸ್' ಕೂಡ ಈ ಲಿಸ್ಟ್ ಸೇರುತ್ತಾನಾ? ಎನ್ನುವ ಪ್ರಶ್ನೆ ಮೂಡಿದೆ.

ಸಂಕ್ರಾಂತಿ ಬಿಟ್ಟರೆ ಶಿವರಾತ್ರಿ ವೇಳೆಗೆ ಸಿನಿಮಾ ರಿಲೀಸ್ ಆಗಬಹುದು ಎನ್ನುವ ಊಹಾಪೋಹ ಕೂಡ ಇದೆ. ಒಟ್ಟಾರೆ 'ವಿಕ್ರಾಂತ್ ರೋಣ' ಸಿನಿಮಾ ಬಂದು ಎರಡೂವರೆ ವರ್ಷ ಕಳೆದರೂ ಸುದೀಪ್ ನಟನೆಯ ಹೊಸ ಸಿನಿಮಾ ಬರದೇ ಇರುವುದು ವಿಪರ್ಯಾಸವೇ ಸರಿ.

ಒಂದೂವರೆ ವರ್ಷದ ಹಿಂದೆ ಸೆಟ್ಟೇರಿದ 'ಮ್ಯಾಕ್ಸ್' ಇಷ್ಟು ತಡವಾಗುತ್ತಿದೆ. ಇನ್ನು ಸುದೀಪ್ ನಟನೆಯ ಮತ್ತೊಂದು ಸಿನಿಮಾ ಯಾವಾಗ ಶುರುವಾಗುತ್ತೋ, ಯಾವಾಗ ತೆರೆಗೆ ಬರುತ್ತೋ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. 'ಮ್ಯಾಕ್ಸ್' ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ.

ಒಂದು ರಾತ್ರಿಯಲ್ಲಿ ನಡೆಯುವ ಆಕ್ಷನ್ ಥ್ರಿಲ್ಲರ್ ಕಥೆ 'ಮ್ಯಾಕ್ಸ್' ಎನ್ನಲಾಗ್ತಿದೆ. ಈಗಾಗಲೇ ಟೀಸರ್, ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಬಿಗ್‌ಬಾಸ್ ಶೋ ನಿರೂಪಣೆ ಇದೇ ಕೊನೆ, ಮುಂದಿನ ವರ್ಷದಿಂದ ನಾನು ಬಿಗ್‌ಬಾಸ್ ನಡೆಸಿಕೊಡಲ್ಲ ಎಂದು ಕಿಚ್ಚ ಹೇಳಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಬೇಗ ಬೇಗ ಸಿನಿಮಾ ಮಾಡ್ತಾರಾ ಕಾದು ನೋಡಬೇಕಿದೆ. ಅಭಿಮಾನಿಗಳು ತೆರೆಮೇಲೆ ಕಿಚ್ಚನನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Fans Frustrated over kichcha Sudeep starrer Max Movie delay;
Read more about: filmibeat original sudeep max
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X