Max vs UI: ಉಪೇಂದ್ರ ಮೇಲೆ ಸುದೀಪ್ ಫ್ಯಾನ್ಸ್ ಕೆಂಡಾಮಂಡಲ; ಅಷ್ಟಕ್ಕೂ ಏನಾಯ್ತು?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾ ಹಿಟ್ ಆಗಿದೆ. 5 ದಿನಗಳ ಅಂತರದಲ್ಲಿ 'ಮ್ಯಾಕ್ಸ್' ಸಿನಿಮಾ ತೆರೆಗಪ್ಪಳಿಸಿದರೂ ಕಲ್ಕಿ- ಸತ್ಯ ಆರ್ಭಟಕ್ಕೆ ಬ್ರೇಕ್ ಹಾಕುವವರಿಲ್ಲ. ಆದರೂ 'ಯುಐ' ಚಿತ್ರಕ್ಕೆ ಕೊಂಚ ಹಿನ್ನಲೆ ಆಯ್ತಾ? ಎನ್ನುವ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಉಪೇಂದ್ರ ಮೇಲೆ ಸುದೀಪ್ ಅಭಿಮಾನಿಗಳು ಗರಂ ಆಗಿದ್ದಾರೆ.
ವರ್ಷದ ಕೊನೆಗೆ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಶೇಕ್ ಆಗುತ್ತಿದೆ. 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಇತ್ತೀಚೆಗೆ ಸಕ್ಸಸ್ ಮೀಟ್ ಮಾಡಿ 'ಯುಐ' ಟೀಂ ಖುಷಿಪಟ್ಟಿದೆ. ಇದೇ ವೇಳೆ 'ಮ್ಯಾಕ್ಸ್' ಬಗ್ಗೆ ಕೇಳಿದ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದರು. ಆದರೆ ಆ ಬಗ್ಗೆ ಸುದೀಪ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.

'ಯುಐ' ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆ ಆಗಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಫಸ್ಟ್ ವೀಕೆಂಡ್ ಭರ್ಜರಿ ಓಪನಿಂಗ್ ಪಡೆದಿಕೊಂಡಿತ್ತು. ಆದರೆ ಡಿಸೆಂಬರ್ 25ಕ್ಕೆ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಮ್ಯಾಕ್ಸ್' ತೆರೆಗೆ ಬಂತು. ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ವಿಜಯ್ ಕಾರ್ತಿಯೇಯನ್ ಚೊಚ್ಚಲ ನಿರ್ದೇಶನದಲ್ಲೇ ಮ್ಯಾಜಿಕ್ ಮಾಡಿದ್ದಾರೆ.
'ಯುಐ' ಸಕ್ಸಸ್ ಮೀಟ್‌ನಲ್ಲಿ ಇದೇ ವಿಚಾರದ ಬಗ್ಗೆ ಉಪೇಂದ್ರಗೆ ಪ್ರಶ್ನೆ ಎದುರಾಗಿತ್ತು. 'ಮ್ಯಾಕ್ಸ್' ರಿಲೀಸ್ 'ಯುಐ' ಓಟದ ಮೇಲೆ ಎಫೆಕ್ಟ್ ಆಗಿದ್ಯಾ? ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಉಪೇಂದ್ರ "ನಮಗೆ ಯಾವ ಸಿನಿಮಾ ಪಕ್ಕದಲ್ಲಿ ರಿಲೀಸ್ ಆಗಿದೆ ಎನ್ನುವುದೇ ಗೊತ್ತೇಯಿಲ್ಲ. ನಾವು ಮುಂದೆ ನೋಡ್ಕೊಂಡು ಹೋಗ್ತಾ ಇದ್ದೀವಿ ಅಷ್ಟೇ. ನಮಗೆ 'ಯುಐ' ಬಗ್ಗೆ ಮಾತ್ರ ಗೊತ್ತು. ಇದು ಮಾರ್ಕೆಟ್, ನಮ್ಮ ಅಕ್ಕ ಪಕ್ಕ ಯಾರು ಬೇಕಾದರೂ ಅಂಗಡಿ ಇಡಬಹುದು. ತೆಲುಗು, ತಮಿಳು ಸಿನಿಮಾ ಸಹ ಬರ್ತಿರುತ್ತೆ. ಅದಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ಸಿನಿಮಾ ಬಗ್ಗೆ ನಾವು ಮಾತನಾಡ್ತೀವಿ" ಎಂದಿದ್ದಾರೆ.
'ಯುಐ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬೇರೆ ಸಿನಿಮಾ ಬಗ್ಗೆ ಮಾತು ಬೇಡ ಎನ್ನುವ ಅರ್ಥದಲ್ಲಿ ಉಪೇಂದ್ರ ಮಾತನಾಡಿದ್ದಾರೆ ಎನ್ನುವುದು ಕೆಲವರ ವಾದ. ಸುಖಾಸುಮ್ಮನೆಗೆ 'ಮ್ಯಾಕ್ಸ್' ಬಗ್ಗೆ ಮಾತನಾಡಿ ಯಾಕೆ ಚರ್ಚೆಗೆ ದಾರಿ ಮಾಡಿಕೊಡಬೇಕು ಎನ್ನುವುದು ಉಪ್ಪಿ ಅಭಿಪ್ರಾಯ ಎನ್ನುವಂತಿದೆ. ಆದರೆ ಸುದೀಪ್ ಫ್ಯಾನ್ಸ್ ಈ ಬಗ್ಗೆ ಅಸಮಾಧಾಣ ಹೊರ ಹಾಕಿದ್ದಾರೆ.
'ಮ್ಯಾಕ್ಸ್' ಸಿನಿಮಾ ಬಗ್ಗೆ ಉಪೇಂದ್ರ ಅವರಿಗೆ ಗೊತ್ತೇಯಿಲ್ವಾ? ಎರಡೂ ನಮ್ಮ ಸಿನಿಮಾ, ಎರಡನ್ನೂ ನೋಡಿ ಗೆಲ್ಲಿಸಿ ಎಂದು ಹೇಳಬಹುದಿತ್ತು. ಆದರೆ ಈ ರೀತಿ ಮಾತನಾಡಬಾರದಿತ್ತು ಎಂದು ಸುದೀಪಿಯನ್ಸ್ ಬೇಸರ ಹೊರ ಹಾಕುತ್ತಿದ್ದಾರೆ. ನಿಮ್ಮ 'ಯುಐ' ಸಿನಿಮಾಗೆ ಶುಭ ಕೋರಿ ಸುದೀಪ್ ಸರ್ ಟ್ವೀಟ್ ಮಾಡಿದ್ದರು. ಸಿನಿಮಾ ಕೂಡ ನೋಡಿ ಬೆಂಬಲಿಸಿದ್ದರು. ಆದರೆ ಈಗ ನೀವು ನೋಡಿದರೆ ಹೀಗೆ ಮಾತನಾಡುತ್ತಿದ್ದೀರಾ? ನಿಮ್ 'ಯುಐ' ಚಿತ್ರಕ್ಕೆ ಹಿನ್ನಡೆ ಆಗಿದೆ ಎಂದು ಹೀಗೆ ಪ್ರತಿಕ್ರಿಯಿಸುತ್ತೀರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಒಟ್ಟಾರೆ ಉಪೇಂದ್ರ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಉಪೇಂದ್ರ ಅಭಿಮಾನಿಗಳು ಇದಕ್ಕೆ ಸ್ಪಷ್ಟನೆ ಕೊಟ್ಟು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಸುದೀಪ್ ಫ್ಯಾನ್ಸ್ ಇದನ್ನು ಒಪ್ಪಲು ಸಿದ್ಧರಿಲ್ಲ. ವೇದಿಕೆ ಯಾವುದೇ ಇರಲಿ, 'ಮ್ಯಾಕ್ಸ್' ಪರ ಉಪ್ಪಿ ಒಂದು ಮಾತು ಹೇಳಬಹುದಿತ್ತು ಎನ್ನುತ್ತಿದ್ದಾರೆ.
'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ತೆಲುಗು, ತಮಿಳಿಗೂ ಡಬ್ ಆಗಿ ರಿಲೀಸ್ ಆಗಿದೆ. ತಮಿಳು, ಆಂಧ್ರ, ತೆಲಂಗಾಣದಲ್ಲಿ ಕೂಡ ತಕ್ಕಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿದೆ. ತಮಿಳು ನಿರ್ಮಾಪಕರು 'ಮ್ಯಾಕ್ಸ್' ಚಿತ್ರ ನಿರ್ಮಿಸಿದ್ದಾರೆ. ಹಾಗಾಗಿ ತಮಿಳುನಾಡಿನಲ್ಲಿ ದೊಡ್ಡದಾಗಿಯೇ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದವರು ಮೆಚ್ಚಿ ಕೊಂಡಾಡುತ್ತಿದ್ದಾರೆ.


Click it and Unblock the Notifications











