For Quick Alerts
  ALLOW NOTIFICATIONS  
  For Daily Alerts

  ನಟ ಸುದೀಪ್ ಮೊಟ್ಟ ಮೊದಲ ರೀಲ್ಸ್, ಹುಚ್ಚೆದ್ದು ಕುಣಿದ ಫ್ಯಾನ್ಸ್!

  |

  ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವುದು ಕಾಮನ್. ಅದರಲ್ಲೂ ನಟಿಯರು ನಾನಾ ಹಾಡುಗಳಿಗೆ, ಡೈಲಾಗ್‌ಗಳಿಗೆ ರೀಲ್ಸ್ ಮಾಡುವುದರಲ್ಲಿ ಎತ್ತಿದ ಕೈ. ಈ ರೀಲ್ಸ್ ವಿಭಾಗದಲ್ಲಿ ನಟರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಅದರಲ್ಲೂ ಸ್ಟಾರ್ ನಟರು ರೀಲ್ಸ್ ವಿಡಿಯೋ ಮಾಡಿದ ಉದಾಹರಣೆಗಳು ಬಹಳ ಕಡಿಮೆ.

  ಆದರೆ ಈಗ ಕನ್ನಡದ ನಟ ಕಿಚ್ಚ ಸುದೀಪ್ ರೀಲ್ಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮೊಟ್ಟ ಮೊದಲಬಾರಿಗೆ ಸುದೀಪ್ ರೀಲ್ಸ್ ಮಾಡಿದ್ದಾರೆ. ತಮ್ಮ ಸಿನಿಮಾ ವಿಕ್ರಾಂತ್ ರೋಣ ಚಿತ್ರದ 'ಗಡಂಗ್ ರಕ್ಕಮ್ಮ' ಹಾಡಿಗೆ ಹೆಜ್ಜೆ ಹಾಕಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.

  ನಟಿ ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಕಿಚ್ಚ ಸುದೀಪ್!ನಟಿ ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಕಿಚ್ಚ ಸುದೀಪ್!

  'ಗಡಂಗ್ ರಕ್ಕಮ್ಮ' ಹಾಡಿನಲ್ಲಿ ಇರುವ ಟ್ಯೂನ್‌ಗೆ ನಟ ಸುದೀಪ್ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರೀಲ್ಸ್ ಮಾಡಿದ್ದು ಅಭಿಮಾನಿಳಿಗೆ ಖುಷಿ ಕೊಟ್ಟಿದೆ. ಸುದೀಪ್ ರೀಲ್ಸ್ ಮಾಡೋದಕ್ಕೆ ಮುಖ್ಯ ಕಾರಣ ನಟಿ ಜಾಕ್ವೆಲಿನ್. ಕನ್ನಡದಲ್ಲಿ ಜಾಕ್ವೆಲಿನ್ ಮಾತನಾಡಿದ್ದಕ್ಕೆ ಸುದೀಪ್ ರೀಲ್ಸ್ ಮಾಡಿದ್ದಾರೆ.

  ತೆಲುಗಿನಲ್ಲಿ 'ಗಡಂಗ್ ರಕ್ಕಮ್ಮಾ' ಕಮಾಲ್!ತೆಲುಗಿನಲ್ಲಿ 'ಗಡಂಗ್ ರಕ್ಕಮ್ಮಾ' ಕಮಾಲ್!

  ಜಾಕ್ವೆಲಿನ್ ಚಾಲೆಂಜ್ ಸ್ವೀಕರಿಸಿದ ಕಿಚ್ಚ!

  ನಟ ಸುದೀಪ್ ಜಾಕ್ವೆಲಿನ್ ಮಾತಿನಂತೆ ಮೊದಲಬಾರಿಗೆ ರೀಲ್ಸ್ ಮಾಡಿದ್ದಾರೆ. 'ವಿಕ್ರಾಂತ್ ರೋಣ' ಚಿತ್ರದ ರಕ್ಕಮ್ಮ ಹಾಡಿನಲ್ಲಿ ಇರುವ ಟ್ಯೂನ್‌ಗೆ ಸುದೀಪ್ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಕಿಚ್ಚನ ಅಭಿಮಾನಿಗಳಂತೂ ಕಿಚ್ಚನಂತೆ ರೀಲ್ಸ್ ಮಾಡುತ್ತಾ ಕುಣಿದು ಕುಪ್ಪಳಿಸುತ್ತಾರೆ.

  ರೀಲ್ಸ್ ಬದಲು ಕನ್ನಡ ಕಲಿಸಿದ ಕಿಚ್ಚ!

  ಕಿಚ್ಚ ಸುದೀಪ್‌ಗೆ ಜಾಕ್ವೆಲಿನ್ ವಿಡಿಯೋ ಮೂಲಕ, ರೀಲ್ಸ್ ಮಾಡುವ ಬೇಡಿಕೆ ಮುಂದಿಡುತ್ತಾರೆ. ಆದರೆ ಸುದೀಪ್ ಅಷ್ಟು ಸುಲಭಕ್ಕೆ ರೀಲ್ಸ್ ಮಾಡಿಲ್ಲ. ಬದಲಿಗೆ ನಟಿ ಜಾಕ್ವೆಲಿನ್‌ಗೆ ಕನ್ನಡವನ್ನು ಹೇಳಿ ಕೊಟ್ಟಿದ್ದಾರೆ. ಜಾಕ್ವೆಲಿನ್ ಕನ್ನಡದಲ್ಲಿ ಮಾತನಾಡಿದ ಬಳಿಕವೆ ರೀಲ್ಸ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಜಾಕ್ವೆಲಿನ್ ಕೂಡ ತಪ್ಪಿಲ್ಲದೆ ಸುದೀಪ್ ಹೇಳಿಕೊಟ್ಟ ಕನ್ನಡವನ್ನು ಹಾಗೆ ಮಾತನಾಡಿದ್ದಾರೆ.

  'ವಿಕ್ರಾಂತ್ ರೋಣ' ಅಬ್ಬರದ ಪ್ರಚಾರ ಶುರು!

  'ವಿಕ್ರಾಂತ್ ರೋಣ' ಅಬ್ಬರದ ಪ್ರಚಾರ ಶುರು!

  ಈ ರೀಲ್ಸ್ ಮಾಡುವುದು ಎಲ್ಲಾ, 'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರದ ಭಾಗವಾಗಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಎರಡು ತಿಂಗಳು ಮೊದಲೆ ಸಿನಿಮಾ ತಂಡ ಶುರು ಮಾಡಿಕೊಂಡಿದೆ. ಆದರೂ ನಟ ಸುದೀಪ್ ಮಾಡಿರುವ ಈ ರೀಲ್ಸ್ ಮೆಚ್ಚುಗೆಗೆ ಪಾತ್ರವಾಗಿದೆ. ಹಾಡಿನಲ್ಲಿ ಇರುವಂತೆಯೇ ಕಾಸ್ಟ್ಯೂಂ ತೊಟ್ಟು ಸುದೀಪ್ ರೀಲ್ಸ್ ಮಾಡಿದ್ದು, ಅಭಿಮಾನಿಗಳು ಕಿಚ್ಚನನ್ನು ಅನುಕರಿಸುತ್ತಿದ್ದಾರೆ.

  ಪ್ಯಾನ್ ವರ್ಲ್ಡ್ ಸಿನಿಮಾ 'ವಿಕ್ರಾಂತ್ ರೋಣ'!

  ಪ್ಯಾನ್ ವರ್ಲ್ಡ್ ಸಿನಿಮಾ 'ವಿಕ್ರಾಂತ್ ರೋಣ'!

  ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಇಂಗ್ಲೀಷ್‌ನಲ್ಲಿ ಕೂಡ ರಿಲೀಸ್ ಆಗುತ್ತದೆ. ಇನ್ನು ಜರ್ಮನ್ ಮತ್ತು ಇನ್ನಿತರ ವಿದೇಶಿ ಭಾಷೆಯಲ್ಲಿ ಕೂಡ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಹಾಗಾಗಿ ಇದನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಕರೆಯಬಹುದು. ಜುಲೈ 28ಕ್ಕೆ ತೆರೆಯ ಮೇಲೆ ಕಿಚ್ಚನ ಅಬ್ಬರ ಹೇಗೆ ಇರಲಿದೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನವಿದೆ. ಸುದೀಪ್ ಜೊತೆಗೆ ನೀತ ಅಶೋಕ್, ನಿರುಪ್ ಬಂಡಾರಿ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳಲಿದ್ದಾರೆ.

  English summary
  Kichcha Sudeep First Ever Reel From Vikrant Rona Song, Video Viral In Social Media

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X