For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಸುದೀಪ್ 'ಫ್ಯಾಂಟಮ್' ಸಿನಿಮಾದ ಹಾಡಿನಲ್ಲಿ ವಿಶೇಷ ಅತಿಥಿ; ಯಾರದು?

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹುನಿರೀಕ್ಷೆಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಫ್ಯಾಂಟಮ್ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ಸದ್ಯ ಕೇರಳದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಡಿಸೆಂಬರ್ 9ರಿಂದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು, ಸುದೀಪ್ ಕೇರಳದಿಂದ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಫೋಟೋ ಜೊತೆಗೆ 'ಫ್ಯಾಂಟಮ್ ಕೊನೆಯ ಹಂತದ ಶೂಟಿಂಗ್ ಆರಂಭ. ಚಿತ್ರಕ್ಕಾಗಿ ನಿರ್ಮಿಸಿರುವ ಸೆಟ್ ಮತ್ತು ಸ್ಥಳ ನನಗೆ ತುಂಬಾ ಇಷ್ಟ ಆಯ್ತು''ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಚಿತ್ರಕ್ಕೆ ವಿಶೇಷ ಅತಿಥಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಹೌದು, ಕೇರಳದ ಪ್ರಸಿದ್ಧ ರಘುರಾಮ್ ಎನ್ನುವ ಆನೆ ಈ ಸಿನಿಮಾದಲ್ಲಿ ನಟಿಸುತ್ತಿದೆ. ಮುಂದೆ ಓದಿ..

  ಫ್ಯಾಂಟಮ್ ಕೊನೆಯ ಹಂತದ ಚಿತ್ರೀಕರಣ ಆರಂಭಿಸಿದ ಸುದೀಪ್

  ಫ್ಯಾಂಟಮ್ ಸಿನಿಮಾದಲ್ಲಿ 40 ವರ್ಷದ ರಘುರಾಮ್

  ಫ್ಯಾಂಟಮ್ ಸಿನಿಮಾದಲ್ಲಿ 40 ವರ್ಷದ ರಘುರಾಮ್

  ಚಿತ್ರದ ಹಾಡಿನಲ್ಲಿ 40 ವರ್ಷದ ಜನಪ್ರಿಯ ಆನೆ ರಘುರಾಮ್ ನಟಿಸುತ್ತಿದೆ. ಕೇರಳದ ಜನಪ್ರಿಯ ಆನೆ ಇದಾಗಿದೆ. ಫ್ಯಾಂಟಮ್ ಚಿತ್ರದ ಹಾಡಿನಲ್ಲಿ ಈ ಆನೆಯನ್ನು ಬಳಸಿಕೊಳ್ಳಲಾಗಿದೆ. ಸಂಪೂರ್ಣ ಹಾಡಿನಲ್ಲಿ ಸುದೀಪ್ ಅವರನ್ನು ರಘುರಾಮ್ ಜೊತೆ ನೋಡಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಹಿರಂಗ ಪಡಿಸಿದ್ದಾರೆ.

  ರಾಘುರಾಮ್ ವಿಡಿಯೋ ಶೇರ್ ಮಾಡಿದ ಜಾನಿ ಮಾಸ್ಟರ್

  ರಾಘುರಾಮ್ ವಿಡಿಯೋ ಶೇರ್ ಮಾಡಿದ ಜಾನಿ ಮಾಸ್ಟರ್

  ನೃತ್ಯ ಸಂಯೋಜಕ ಜಾನಿ ಮಾಸ್ಟರ್ ನಿರ್ದೇಶನದಲ್ಲಿ ಫ್ಯಾಂಟಮ್ ಸಿನಿಮಾದ ಈ ವಿಶೇಷ ಹಾಡು ಮೂಡಿಬರುತ್ತಿದೆ. ಒಟ್ಟು 5 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಕಾಡು, ಮಳೆಯ ನಡುವೆ ಈ ಹಾಡನ್ನು ಸೆರೆಹಿಡಿಯಲಾಗುತ್ತಿದೆ. ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಲೊಕೇಶನ್ ನ ವಿಡಿಯೋ ಮಾಡಿ ರಘುರಾಮ್ ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

  ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರಿರಲಿದ್ದಾರೆ? ಇಲ್ಲಿದೆ ಸಂಭಾವ್ಯ ಪಟ್ಟಿ

  ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದ ಹಾಡು

  ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದ ಹಾಡು

  ಅಂದಹಾಗೆ ಈ ಹಾಡು ಫ್ಯಾಂಟಮ್ ಸಿನಿಮಾ ಭಾವನಾತ್ಮಕ ಹಾಡಾಗಿದೆಯಂತೆ. ಆ ಸಾಂಗ್ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿದ್ದು, ಅದ್ಭುತವಾದ ಹಾಡು ಇದಾಗಿದೆಯಂತೆ. ನಟ ಸುದೀಪ್ ವಿಶೇಷ ಕಾಳಜಿ ವಹಿಸಿ ಈ ಹಾಡನ್ನು ಚಿತ್ರೀಕರಿಸುತ್ತಿದ್ದಾರಂತೆ.

  ರಘುರಾಮ್ ಒಂದು ದಿನದ ಖರ್ಚು 1.2 ಲಕ್ಷ ರೂ.

  ಈ ಸಿನಿಮಾಗಾಗಿ ನಿರ್ಮಾಪಕರು ಸಾಕಷ್ಟು ಖರ್ಚು ಮಾಡಿದ್ದಾರೆ. ಸಿನಿಮಾಗಳಲ್ಲಿ ಪ್ರಾಣಿಗಳನ್ನು ಬಳಿಸಿಕೊಳ್ಳಲು ಅನುಮತಿ ಸಿಗುವುದು ತುಂಬಾ ಕಷ್ಟ. ಅಲ್ಲದೆ ಸಾಕಷ್ಟು ಖರ್ಚು ಮಾಡುಬೇಕಾಗುತ್ತೆ. ಫ್ಯಾಂಟಮ್ ಸಿನಿಮಾದಲ್ಲಿ ಬಳಸಿದ ಈ ರಘುರಾಮ್ ಗೆ ಒಂದು ದಿನಕ್ಕೆ ಬರೋಬ್ಬರಿ 1.2 ಲಕ್ಷ ರೂ. ನೀಡುತ್ತಿದ್ದಾರೆ. ಪ್ರಾಣಿಗಳನ್ನು ಬಳಸುವುದು ತುಂಬಾ ದುಬಾರಿ ಮತ್ತು ರಿಸ್ಕ್. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳುತ್ತಿಲ್ಲ. ಬಹುತೇಕರು ಗ್ರಾಫಿಕ್ಸ್ ಮೊರೆ ಹೋಗಿದ್ದಾರೆ. ಆದರೆ ಈ ಹಾಡಿಗೆ ಆನೆಯ ಅವಶ್ಯಕತೆ ತುಂಬಾ ಇದ್ದ ಕಾರಣ ದುಬಾರಿಯಾದರೂ ನಿಜವಾದ ಆನೆಯನ್ನೆ ಬಳಿಸಿಕೊಂಡಿದ್ದಾರೆ.

  ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada
  ಬುರ್ಜ್ ಖಲೀಫಾದಲ್ಲಿ ಹಾಡು ರಿಲೀಸ್?

  ಬುರ್ಜ್ ಖಲೀಫಾದಲ್ಲಿ ಹಾಡು ರಿಲೀಸ್?

  ಇನ್ನು ಚಿತ್ರತಂಡದಿಂದ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಚಿತ್ರದ ಹಾಡನ್ನು ವಿಶ್ವ ಪ್ರಸಿದ್ಧ ಬುರ್ಜ್ ಖಲೀಫಾದಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಫ್ಯಾಂಟಮ್ ಸಿನಿಮಾದ ಹಾಡುಗಳನ್ನು ಅಲ್ಲಿ ರಿಲೀಸ್ ಮಾಡುವ ಮೂಲಕ ಚಿತ್ರತಂಡ ದೊಡ್ಡ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಗುರಿ ಹೊಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  English summary
  Actor Kichcha Sudeep gets 40 year old elephant Raghuram for Phantom song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X