For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ಕರೆ

  By Harshitha
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಶುಕ್ರವಾರ (ಡಿಸೆಂಬರ್ 12) ದೊಡ್ಡ ಹಬ್ಬವಾಗಿತ್ತು. 'ಸ್ಟೈಲ್ ಕಿಂಗ್' ಹುಟ್ಟುಹಬ್ಬ ಒಂದ್ಕಡೆಯಾದರೆ, ಇನ್ನೊಂದ್ಕಡೆ ಬಹುನಿರೀಕ್ಷಿತ 'ಲಿಂಗಾ' ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿತ್ತು.

  ಸಕಲಕಲಾವಲ್ಲಭ ಕಮಲ್ ಹಾಸನ್ ರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿವರೆಗೂ ಭಾರತದ ಗಣ್ಯಾತಿಗಣ್ಯರಿಂದ ರಜನಿಕಾಂತ್ ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ ಹರಿದು ಬರ್ತಿತ್ತು. ಇಂತಹ ಸಂದರ್ಭದಲ್ಲಿ ರಜನಿ, 'ಒಬ್ಬ'ರನ್ನ ಮಿಸ್ ಮಾಡಿಕೊಂಡಿದ್ದಾರೆ. ತಕ್ಷಣ ರಜನಿಗೆ 'ಅವರ' ಹತ್ತಿರ ಮಾತನಾಡುವ ಮನಸ್ಸಾಗಿದೆ. ಇದ್ದಕ್ಕಿದ್ದ ಹಾಗೆ ಅವರಿಗೆ ಫೋನ್ ಮಾಡಿ, ರಜನಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. [ಸುದೀಪ್ ಅನುಭವಿಸುತ್ತಿರುವ 'ನೋವು' ನಿಮಗ್ಗೊತ್ತಾ?]

  ಹಾಗಂದ ಮಾತ್ರಕ್ಕೆ ಅವರು ರಜನಿಯ ಕುಟುಂಬದವರಲ್ಲ. ರಜನಿಯ ಆಪ್ತ ಸ್ನೇಹಿತರಂತೂ ಅಲ್ಲವೇ ಅಲ್ಲ. ಆದರೂ, ರಜನಿಗೆ ಸಡನ್ನಾಗಿ ನೆನಪಾದವರು ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್! ಶೂಟಿಂಗ್ ನಲ್ಲಿ ಬಿಜಿಯಿದ್ದ ಕಿಚ್ಚ ಸುದೀಪ್ ಗೆ ನಿನ್ನೆ ಅನಾಮಧೇಯ ನಂಬರ್ ನಿಂದ ಫೋನ್ ಬಂದಿದೆ. ಅಂತಹ ನಂಬರ್ ಗೆ ಎಂದೂ ಅಟೆಂಡ್ ಮಾಡದ ಸುದೀಪ್, ಅಚಾನಕ್ಕಾಗಿ ಫೋನ್ ರಿಸೀವ್ ಮಾಡಿದ್ದಾರೆ. ಆಗಲೇ ಸುದೀಪ್ ಗೆ ಅಚ್ಚರಿ ಕಾದಿದ್ದು. [ಕಾಲಿವುಡ್ ನಲ್ಲೇ ಸೆಟ್ಲ್ ಆಗ್ತಾರಾ ಕಿಚ್ಚ ಸುದೀಪ್]

  'ತಲೈವಾ' ರಜನಿಕಾಂತ್ ಧ್ವನಿ ಕೇಳಿ ಸುದೀಪ್ ಗೆ ಸರ್ಪ್ರೈಸ್ ಆಗಿದೆ. ಇದನ್ನ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಹಂಚಿಕೊಂಡು ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.

  ರಜನಿಕಾಂತ್ ಮತ್ತು ಸುದೀಪ್ ನಡುವೆ ಬಾಂಧವ್ಯ ಹೇಗಿದೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಸುದೀಪ್ ಅಭಿನಯದ 'ಈಗ' ಚಿತ್ರವನ್ನು ನೋಡಿ ಹಿಂದೊಮ್ಮೆ ರಜನಿ, ಕಿಚ್ಚನಿಗೆ ಭೇಷ್ ಅಂದಿದ್ದರು. ಅದಾದಮೇಲೆ 'ಲಿಂಗಾ' ಧ್ವನಿಸುರುಳಿ ಕಾರ್ಯಕ್ರಮದಲ್ಲೂ ಸುದೀಪ್ ಭಾಗವಹಿಸಿದ್ದರು. [ವಿಜಯ್ ಜೊತೆ ಕಿಚ್ಚ ಸುದೀಪ್ ಟಪ್ಪಾಂಗುಚ್ಚಿ]

  ಹೀಗಿದ್ದರೂ, ಅಷ್ಟಾಗಿ ಯಾರಿಗೂ ಫೋನ್ ಮಾಡದ ರಜನಿ, ಸುದೀಪ್ ಗೆ ಕಾಲ್ ಹಾಕಿದ್ದಾರೆ ಅಂದ್ರೆ, ಅದ್ರಲ್ಲಿ ಏನೋ ವಿಷಯ ಇರಲೇಬೇಕು. ಅದಕ್ಕೆ ಪುಷ್ಠಿ ನೀಡುವಂತೆ ಸುದೀಪ್, ತಮ್ಮ ಟ್ವೀಟ್ ನಲ್ಲಿ ''ನೈಸ್ ಥಿಂಗ್ಸ್ ಇನ್ ಸ್ಟೋರ್'' ಅಂತ ಬಣ್ಣಿಸಿದ್ದಾರೆ. ಹಾಗಾದ್ರೆ, ಸುದೀಪ್ ಗೆ ರಜನಿಯ ಮುಂದಿನ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ಯಾ? ಅದಿನ್ನೂ ಬಹಿರಂಗವಾಗಬೇಕು! (ಫಿಲ್ಮಿಬೀಟ್ ಕನ್ನಡ)

  English summary
  Kichcha Sudeep seems to be lucky for getting a call from Super Star Rajinikanth. Sudeep took his Twitter to share this surprise gift from Thalaiva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X