For Quick Alerts
  ALLOW NOTIFICATIONS  
  For Daily Alerts

  ಮಲೇಷಿಯಾದಲ್ಲಿ ಕಿಚ್ಚನ ಫ್ಯಾಮಿಲಿ ಟ್ರಿಪ್

  By Pavithra
  |
  6 ದಿನ ಜಾಲಿ ಆಗಿ ಕಿಚ್ಚ ಯಾರ ಜೊತೆ ಇದ್ರು ನೋಡಿ | Oneindia Kannada

  ಬೇಸಿಗೆ ಶುರುವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ರಜಾ ಸಿಕ್ಕಿ ಮಜಾ ಮಾಡುವ ಮೂಡ್ ನಲ್ಲಿದ್ದಾರೆ. ಮಗಳನ್ನ ತುಂಬಾ ಪ್ರೀತಿ ಮಾಡುವ ಕಿಚ್ಚ ಸುದೀಪ್ ತಮ್ಮ ಫ್ಯಾಮಿಲಿ ಜೊತೆ ರಜೆಯ ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಚಿತ್ರೀಕರಣದ ಬ್ರೇಕ್ ಇದ್ದ ಕಾರಣ ಸುದೀಪ್, ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಆರು ದಿನಗಳ ಪ್ರವಾಸ ಮುಗಿಸಿ ಬಂದಿದ್ದಾರೆ.

  ಮಲೇಷಿಯಾದ ಸುಂದರ ತಾಣಗಳನ್ನ ಈ ಬಾರಿಯ ಪ್ರವಾಸದಲ್ಲಿ ಕಿಚ್ಚ ಅಂಡ್ ಫ್ಯಾಮಿಲಿ ಸುತ್ತಾಡಿ ಬಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಮಗಳ ಜೊತೆ ಇರುವ ಫೋಟೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

  'ದಿ ವಿಲನ್' ಟೀಸರ್ ಬರೋ ಮೊದಲೇ ಪ್ರೇಮ್ ಕೊಟ್ಟ ಗುಡ್ ನ್ಯೂಸ್ 'ದಿ ವಿಲನ್' ಟೀಸರ್ ಬರೋ ಮೊದಲೇ ಪ್ರೇಮ್ ಕೊಟ್ಟ ಗುಡ್ ನ್ಯೂಸ್

  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಕಿಚ್ಚ ಮೊದಲಿಗೆ ಬಿಡುವು ಮಾಡಿಕೊಂಡು ಮಗಳನ್ನ ಜಪಾನ್ ಸುತ್ತಿಸುವ ಆಸೆಯನ್ನ ಹೊಂದಿದ್ದರಂತೆ. ಆದರೆ ಚಿತ್ರೀಕರಣದಲ್ಲಿ ಬ್ರೇಕ್ ಇಲ್ಲದ ಕಾರಣ ಕೇವಲ ಆರು ದಿನಗಳಲ್ಲಿ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಸದ್ಯ ಮಲೇಷಿಯಾದಲ್ಲಿ ತೆಗೆದು ಕೊಂಡಿರುವ ಸುದೀಪ್ ಫ್ಯಾಮಿಲಿ ಫೋಟೋ ಸಖತ್ ವೈರಲ್ ಆಗಿದೆ.

  ಕಿಚ್ಚನಿಗೆ ಮಗಳೆಂದರೆ ತುಂಬಾ ಪ್ರೀತಿ. ಇತ್ತೀಚಿನ ದಿನಗಳಲ್ಲಿ ಮಗಳ ಫ್ರೆಂಡ್ಸ್ ಬರ್ತಡೇ ಪಾರ್ಟಿ. ಮಗಳ ಶಾಲೆಯ ಕಾರ್ಯಕ್ರಮಗಳಲ್ಲಿ ಸುದೀಪ್ ಹಾಗೂ ಪ್ರಿಯಾ ಇಬ್ಬರು ಭಾಗಿ ಆಗುತ್ತಿದ್ದಾರೆ. ಅದ್ಹಾಂಗೆ ಕಿಚ್ಚನ ಮಗಳು ಶಾಲೆಯಲ್ಲಿ ಟಾಪರ್ ಸ್ಥಾನ ಪಡೆದುಕೊಂಡಿದ್ದಾಳೆ.

  'ಮಾಣಿಕ್ಯ'ದ ಮಧುರ ನೆನಪುಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್'ಮಾಣಿಕ್ಯ'ದ ಮಧುರ ನೆನಪುಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್

  English summary
  Kannada actor Kichcha Sudeep has completed his trip to Malaysia with his family. Sudeep's photo taken with his wife and daughter in Malaysia is viral on Facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X