ಅಭಿಮಾನಿಯ ಪಾಲಿಗೆ ಲವ್ ಗುರು ಆದ ಕಿಚ್ಚ ಸುದೀಪ್

By Pavithra

Recommended Video

ಪ್ರೀತಿ -ಪ್ರೇಮದ ಬಗ್ಗೆ ಕಿಚ್ಚನ ಲೆಸೆನ್ | Filmibeat Kannada

ಕಿಚ್ಚ ಸುದೀಪ್ ಈಗ ಲವ್ ಗುರು ಆಗಿದ್ದಾರೆ. ಅಭಿನಯ ಚಕ್ರವರ್ತಿ ತಮ್ಮ ಅಭಿಮಾನಿಗಳ ಪಾಲಿಗೆ ಲವ್ ಗುರು. ಮುಸ್ಸಂಜೆ ಮಾತು ಸಿನಿಮಾದಲ್ಲಿ ಪ್ರೀತಿ ಹಾಗೂ ಜೀವನದ ಬಗ್ಗೆ ಪಾಠ ಹೇಳಿದ್ದ ಕಿಚ್ವ ಈಗ ನಿಜ‌ಜೀವನದಲ್ಲಿ ತಮ್ಮ ಅಭಿಮಾನಿಯೊಬ್ಬನಿಗೆ ಪ್ರೀತಿ ಬಗ್ಗೆ ಪಾಠ ಹೇಳಿಕೊಟ್ಟಿದ್ದಾರೆ.

ಹಣ ಆಸ್ತಿ ಸೌಂದರ್ಯ ಇಲ್ಲದೆ ಪ್ರೀತಿ‌ ಕಳೆದುಕೊಂಡಿರೋ ಅಭಿಮಾನಿಯೊಬ್ಬ ಟ್ವಿಟರ್ ಮೂಲಕ ‌ಕಿಚ್ಚನ ಬಳಿ ತನ್ನ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನ ನೋಡಿರುವ ಸುದೀಪ್ ಅಭಿಮಾನಿಯ ನೋವಿಗೆ ಔಷಧಿ ಆಗಿದ್ದಾರೆ.

Kichcha Sudeep has Twitter about love and life

ಆದರೆ ಕಿಚ್ಚ ಸುದೀಪ್ ಹೇಳಿರುವ ಮಾತುಗಳು ಅವರ ಒಬ್ಬ ಅಭಿಮಾನಿಗೆ ಮಾತ್ರವಲ್ಲದೆ ಹಲವಾರು ಜನರಿಗೆ ಸ್ಪೂರ್ತಿ ಆಗಲಿದೆ. "ಒಂದೇ ಜೀವನ, ಒಂದೇ ಅವಕಾಶ, ಪ್ರೀತಿ ಕೊಡುವುದು, ಕಿತ್ತುಕೊಳ್ಳುವುದಲ್ಲ. ನಿಮ್ಮ ಪೋಷಕರಿಗೆ ಒಳ್ಳೆಯವರಾಗಿರಿ, ನಿಮ್ಮ ಪ್ರಪಂಚದಲ್ಲಿ ಯಾರಿದ್ದಾರೋ ಅವರ ಜೊತೆ ಪ್ರೀತಿಯಿಂದಿರಿ. ನಿಮ್ಮ ಜೀವನವನ್ನು ಚೆನ್ನಾಗಿ ಮಾಡಿಕೊಳ್ಳು ಸುಮ್ಮನೆ ಸಮಯ ಹಾಳು ಮಾಡಬೇಡಿ" ಎಂದು ಟ್ವಿಟ್ ಮಾಡಿದ್ದಾರೆ.

ಹೌದು ನಿಜಕ್ಕೂ ಇಂತಹ ಮಾತುಗಳು ಕಿಚ್ಚ ಸಾಕಷ್ಟು ಅಭಿಮಾನಿಗಳಿಗೆ ಸ್ಪೂರ್ತಿ ಆಗಲಿದೆ ಸಿನಿಮಾ ಸಂಭಾಷಣೆಯನ್ನೇ ಅಳವಡಿಸಿಕೊಂಡು ಸಾಕಷ್ಟು ಜನರು ತಮ್ಮ ಜೀವನವನ್ನು ಸುಂದರವನ್ನಾಗಿ ಮಾಡಿಕೊಂಡಿರುವಾಗ ಈ ಮಾತುಗಳು ಕೂಡ ಅಭಿಮಾನಿಗಳ ಮನಸ್ಸು ಮುಟ್ಟುವುದರಲ್ಲಿ ಅನುಮಾನವಿಲ್ಲ.

More from Filmibeat

English summary
Kannada actor Kichcha Sudeep has Twitter about love and life. Sudeep's words are inspiring fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X