ಕಿಚ್ಚನ ಪೈಲ್ವಾನ್ ಸೆಟ್ ನಲ್ಲಿ ಡಾ ರಾಜ್, ವಿಷ್ಣು, ಶಂಕರ್ ನಾಗ್
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೆಬ್ಬುಲಿ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ಆರ್ ಆರ್ ಆರ್ ಮೂಷನ್ಸ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯ ವಿಶೇಷತೆ ಏನಪ್ಪಾ ಅಂದ್ರೆ ಪೈಲ್ವಾನ್ ಸೆಟ್ ನಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ , ರವಿಚಂದ್ರನ್ ಹಾಗೂ ವಜ್ರಮುನಿ ಕಾಣಿಸಿಕೊಂಡಿದ್ದಾರೆ.
ಹಾಗಂತ ಪೈಲ್ವಾನ್ ಸಿನಿಮಾದಲ್ಲಿ ಇವೆರೆಲ್ಲರೂ ಅಭಿನಯ ಮಾಡುತ್ತಿಲ್ಲ. ಚೆನೈ ನಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗುವ ಮುನ್ನ ಕಿಚ್ಚ ಸುದೀಪ್ ಪೈಲ್ವಾನ್ ಸಿಗ್ನೇಚರ್ ಪೋಸ್ ನೊಂದಿಗೆ ಎರಡು ಫೋಟೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಆ ಫೋಟೋ ಹಿಂಬದಿಯಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ , ರವಿಚಂದ್ರನ್ ಹಾಗೂ ವಜ್ರಮುನಿ ಸೇರಿದಂತೆ ಇನ್ನೂ ಅನೇಕರ ಬಾವ ಚಿತ್ರಗಳಿವೆ. ಕಳೆದ ಬಾರಿ ಶಂಕರ್ ನಾಗ್ ಕಾಲೋನಿ ಅಂತಿರುವ ಫೋಟೋವನ್ನ ಅಪ್ಲೋಡ್ ಮಾಡಿದ ಕಿಚ್ಚ ಸುದೀಪ್ ಈಗ ಅಭಿಮಾನಿಗಳಿಗೆ ಸ್ಪೂರ್ತಿ ಆಗುವಂತಹ ಸಿಗ್ನೇಚರ್ ಪೋಸ್ ಫೋಟೋ ಹಾಕಿದ್ದಾರೆ.

ಸದ್ಯ ಮೊದಲ ಶೆಡ್ಯೂಲ್ ಮುಗಿಸಿ ಬೆಂಗಳೂರಿನತ್ತ ಬರುತ್ತಿರುವ ಚಿತ್ರತಂಡ ಸಿನಿಮಾ ಆರಂಭದಿಂದಲೂ ಅಭಿಮಾನಿಗಳ ಮಧ್ಯೆ ಚಿತ್ರದ ಸುದ್ದಿ ಸದಾ ಚಾಲ್ತಿ ಇರುವಂತೆ ಕಾಪಾಡಿಕೊಳ್ಳುತ್ತಿದೆ. ಒಟ್ಟಾರೆ ಈ ಪೋಸ್ ಮುಂದಿನ ದಿನಗಳಲ್ಲಿ ಟ್ರೇಂಡ್ ಸೆಟ್ ಮಾಡುವುದಂತು ಗ್ಯಾರೆಂಟಿ.


Click it and Unblock the Notifications











