'ಬಿಗ್ ಬಾಸ್‌' ಬದಲಾಗಬೇಕು ಎಂದು ಕೆಲ ಸಲಹೆಯನ್ನು ನೀಡಿದ ಸುದೀಪ್, ಮುಂದಿನ ವರ್ಷ ನಿರೂಪಣೆ ಮಾಡ್ತಾರಾ ಇಲ್ವಾ..?

ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು. ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಸುದೀಪ್ ತಾವು ಅತ್ಯುತ್ತಮ ನಿರೂಪಕ ಕೂಡ ಹೌದು ಎನ್ನುವುದನ್ನು ಕಳೆದ ಹತ್ತು ವರ್ಷಗಳ ಹಿಂದೆಯೇ ಸಾಬೀತು ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.

ಇಂಥಾ ಸುದೀಪ್ ಮುಂದಿನ ವರ್ಷದಿಂದ ನಾನು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎನ್ನುವ ಬಾಂಬ್ ಎಸೆದಾಗ ಅನೇಕರು, ಆಶ್ಚರ್ಯಗೊಂಡಿದ್ದರು. ಯಾಕೆ ಈ ದಿಢೀರ್ ನಿರ್ಧಾರ ಎಂದು ಪ್ರಶ್ನೆಯನ್ನು ಮಾಡಿದ್ದರು. ಇನ್ನೂ.. ಸುದೀಪ್ ಗೌರವ ಇಲ್ಲದ ಕಡೆ ಒಂದು ಕ್ಷಣ ಕೂಡ ಇರುವವರಲ್ಲ. ಯಾಕೆಂದರೆ ಸುದೀಪ್ ವ್ಯಕ್ತಿಯಾಗಿ ಗಳಿಸಿರುವ ಜನಪ್ರಿಯತೆಯ ಅಂಥದ್ದು.

Kichcha Sudeep host of BBK says Kannada Bigg Boss needs to improve compared to other languages

ಹೀಗಾಗಿಯೇ ಬಿಗ್ ಬಾಸ್‌ನಲ್ಲಿ ಸುದೀಪ್ ಅವರನ್ನು ಅಗೌರವಿಸಲಾಗಿದೆಯಾ ಎಂಬ ಅನುಮಾನ ಕಾಡಲು ಶುರು ಮಾಡಿತ್ತು. ಬಿಗ್ ಬಾಸ್ ಆಯೋಜಕರ ನಡಾವಳಿಯಿಂದ ಬೇಸತ್ತು ಸುದೀಪ್ ಈ ನಿರ್ಧಾರವನ್ನು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಈ ಎಲ್ಲ ವಿಚಾರಗಳಿಗೆ ಸ್ಪಷ್ಟವಾದ ಉತ್ತರವನ್ನು ಸುದೀಪ್ ನೀಡದಿದ್ದರೂ ಬಿಗ್ ಬಾಸ್‌ನಲ್ಲಿ ಕೆಲ ಬದಲಾವಣೆಯಾಗಬೇಕೆಂದು ಸುದೀಪ್ ಹೇಳಿದ್ದಾರೆ. ಮುಂದಿನ ವರ್ಷದಿಂದ ಬಿಗ್ ಬಾಸ್‌ ತನ್ನನ್ನೂ ಹೇಗೆ ಸುಧಾರಿಸಿಕೊಳ್ಳಬಹುದೆಂದು ಕೆಲ ಸಲಹೆಯನ್ನು ನೀಡಿದ್ದಾರೆ.

ಹೌದು, ಬಹುತೇಕರಿಗೆ ಗೊತ್ತಿರುವಂತೆ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಈ ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಸುದೀಪ್ ಅನೇಕ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿದ್ದಾರೆ. ಚಿತ್ರದ ವಿಶೇಷತೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಮ್ಯಾಕ್ಸ್ ಯಾಕೆ ವಿಭಿನ್ನ-ವಿನೂತನ ಎನ್ನುವುದಕ್ಕೆ ಉತ್ತರವನ್ನು ಕೊಡುತ್ತಿದ್ದಾರೆ. ಹೀಗೆ ನ್ಯೂಸ್‌18 ಕನ್ನಡ ಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.

ನ್ಯೂಸ್ 18 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಬಿಗ್ ಬಾಸ್ ಕುರಿತು ಮಾತನಾಡಿರುವ ಸುದೀಪ್, ಅಕ್ಕ-ಪಕ್ಕದ ಬಿಗ್ ಬಾಸ್ ಜೊತೆ ಕನ್ನಡದ ಬಿಗ್ ಬಾಸ್‌ನ ಹೋಲಿಕೆ ಮಾಡಿದಾಗ ಏನೋ ಕೊರತೆ ಇದೆ ಎಂದು ನನಗೆ ಅನ್ಸುತ್ತೆ ಎಂದು ಹೇಳಿರುವ ಸುದೀಪ್ ಕೊರತೆ ನೀಗಿಸಿಕೊಂಡು ಸ್ವಲ್ಪ ಚೆನ್ನಾಗಿ ಆಗಬೇಕು ಎಂದು ಹೇಳಿದ್ದಾರೆ. ಹಾಗಂಥ ವೀಕ್ಷಕರ ಪೈಕಿಯಲ್ಲಿ ಅಥವಾ ಟಿಆರ್‌ಪಿ ವಿಚಾರದಲ್ಲಿ ಅಲ್ಲ ಚಾನೆಲ್ ಪೈಕಿ ಕೂಡ ಅಲ್ಲ ಬದಲಿಗೆ ಅಲ್ಲಿ ಅದಕ್ಕೆ ಸಂಬಂಧಿಸಿದಂತೆ ಮೇಲೆ ಯಾರೆಲ್ಲ ಇದ್ದಾರೆ ಅವರೆಲ್ಲ ಕನ್ನಡಕ್ಕೆ ತುಸು ಹೆಚ್ಚಿನ ಆದ್ಯತೆಯನ್ನು ನೀಡಿದರೆ ಅದಕ್ಕೆ ಸಿಗಬೇಕಾದ ಸ್ಥಾನ-ಮಾನ-ಗೌರವ ಸಿಗುತ್ತೆ ಎಂದು ನನಗೆ ಅನ್ಸುತ್ತೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಸುದೀಪ್ ಅವರ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟು ಹಾಕಿದೆ. ಮುಂದಿನ ವರ್ಷ ನಿಜಕ್ಕೂ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲವಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಕೆಲ ದಿನಗಳ ಹಿಂದೆ ಸುದೀಪ್ ಮತ್ತು ಬಿಗ್ ಬಾಸ್ ನಡುವೆ ಮನಸ್ತಾಪ ಭುಗಿಲೆದ್ದು ಆ ನಂತರ ವಿವಾದಕ್ಕೀಡಾದಾಗ ಬಿಗ್ ಬಾಸ್ ಆಯೋಜಕರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಾಗಿ ಹೇಳಿದ್ಧಾರೆ ಎಂದು ಹೇಳಲಾಗಿತ್ತು. ರೂಪೇಶ್ ರಾಜಣ್ಣ ಕೂಡ ಈ ವಿಚಾರವನ್ನು ಹೇಳಿದ್ದರು. ಈ ಹಿನ್ನೆಲೆ ಬಿಗ್ ಬಾಸ್‌ನಿಂದ ದೂರವಾಗುವುದಾಗಿ ಹೇಳಿದ್ದ ಸುದೀಪ್, ತಮ್ಮ ಮನಸು ಬದಲಿಸುತ್ತಾರೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಈಗ ಸುದೀಪ್ ಬಿಗ್ ಬಾಸ್‌ಗೆ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ಮುಂದಿನ ವರ್ಷ ಯಾವುದೇ ಕಾರಣಕ್ಕೂ ಸುದೀಪ್ ಬಿಗ್ ಬಾಸ್ ನಿರೂಪಣೆಯನ್ನು ಮಾಡುವುದಿಲ್ಲ ಇದಕ್ಕೆ ಸುದೀಪ್ ಮ್ಯಾಕ್ಸ್ ಚಿತ್ರದ ಪ್ರಚಾರದ ಸಮಯದಲ್ಲಿ ಆಡಿದ ಈ ಮಾತುಗಳೇ ಸಾಕ್ಷಿ ಎನ್ನುವ ಅಭಿಪ್ರಾಯ ಸದ್ಯಕ್ಕೆ ವ್ಯಕ್ತವಾಗುತ್ತಿದೆ.

More from Filmibeat

Read more about: kichcha sudeep bigg boss biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X