»   » ಸೆಂಚುರಿ ಮುಗಿಸಿ ದಾಖಲೆ ಬರೆದ ಸುದೀಪ್ 'ಮಾಣಿಕ್ಯ'

ಸೆಂಚುರಿ ಮುಗಿಸಿ ದಾಖಲೆ ಬರೆದ ಸುದೀಪ್ 'ಮಾಣಿಕ್ಯ'

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಸೆಂಚುರಿ, ಆಫ್ ಸೆಂಚುರಿ ಬಾರಿಸುವ ಚಿತ್ರಗಳು ಬಹಳ ಅಪರೂಪವಾಗುತ್ತಿವೆ. ಇದೀಗ ಆ ಅಪರೂಪದ ಸಂಗತಿಗೆ ಕಿಚ್ಚ ಸುದೀಪ್ ಅಭಿನಯದ 'ಮಾಣಿಕ್ಯ' ಚಿತ್ರ ಪಾತ್ರವಾಗಿದೆ.

ಮೇ.1 ಕಾರ್ಮಿಕರ ದಿನಾಚರಣೆಯಂದು ತೆರೆಕಂಡ ಚಿತ್ರ ಸರಿಸುಮಾರು 245ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಇದೀಗ ಶತದಿನೋತ್ಸವ ಕಂಡಿದೆ. ಚಿತ್ರ ರೀಮೇಕ್ ಆದರೂ ತಮ್ಮದೇ ಶೈಲಿಯಲ್ಲಿ ಸುದೀಪ್ ತೆರೆಗೆ ತಂದಿದ್ದಾರೆ. [ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ']

Kannada movie Maanikya

ಇದೇ ಮೊದಲ ಬಾರಿಗೆ ಸುದೀಪ್ ಹಾಗೂ ಕ್ರೇಜಿಸ್ಟಾರ್ ಜೊತೆಯಾಗಿ ಅಭಿನಯಿಸುವ ಮೂಲಕ ಮತ್ತೊಂದು ಹಿಟ್ ಜೊಡಿ ಕನ್ನಡಕ್ಕೆ ಸಿಕ್ಕಂತಾಗಿದೆ. ಸುದೀಪ್ ಗೆ ತಂದೆಯಾಗಿ ರವಿಚಂದ್ರನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರದು ತಂದೆಯ ಪಾತ್ರವಾದರೂ ಅಷ್ಟೇ ವೆಯ್ಟೇಜ್ ನೀಡಲಾಗಿತ್ತು.

ಚಿತ್ರ ತೆರೆಕಂಡ ಮೂರು ದಿನಕ್ಕೇ ರು.3 ಕೋಟಿ ಬಾಚುವ ಮೂಲಕ ಹೊಸ ದಾಖಲೆ ಬರೆದಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರದ ದಾಖಲೆಯನ್ನು ಮಾಣಿಕ್ಯ ಅಳಿಸಿಹಾಕಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರ ಮೊದಲ ವಾರಾಂತ್ಯದಲ್ಲಿ ರು.5 ಕೋಟಿ ಕಲೆಕ್ಷನ್ ಮಾಡಿತ್ತು.

ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಮಾಣಿಕ್ಯ ಚಿತ್ರ ಪೈಸಾ ವಸೂಲಿ ಮಾಡಿದೆ. ಈ ಚಿತ್ರವನ್ನು ಎಂ.ಎನ್.ಕುಮಾರ್, ಕಿಚ್ಚ ಕ್ರಿಯೇಷನ್ಸ್ ಹಾಗೂ ಕೊಲ್ಲಾ ಪ್ರವೀಣ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಿಸಲಾಗಿದೆ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಚಿತ್ರದ ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿಯಾಗಿದೆ.

English summary
Sudeep is one of the biggest stars in the Kannada Film Industry and nobody doubts that. His stardom is reaching greater heights day by day. On August 8th, his movie Maanikya will complete 100 days in theater.
Please Wait while comments are loading...