ಹೈದರಾಬಾದ್ ನ ದುಬಾರಿ ಏರಿಯಾದಲ್ಲಿ ಮನೆ ಕೊಂಡುಕೊಂಡ ಸುದೀಪ್!?
ಕಿಚ್ಚ ಸುದೀಪ್ ಪ್ರತಿಭೆಗೆ ಕನ್ನಡ ಸಿನಿ ಪ್ರೇಕ್ಷಕರು ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ ಸಿನಿಮಾ ಪ್ರೇಕ್ಷಕರು ಸಹ ಮಾರುಹೊಗಿದ್ದಾರೆ.
ತೆಲುಗಿನಲ್ಲಿ ಐದು ಸಿನಿಮಾಗಳಲ್ಲಿ ನಟಿಸಿರುವ ಸುದೀಪ್, ಹಿಂದಿಯ ನಾಲ್ಕು ಸಿನಿಮಾಗಳಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಲೂ ಸುದೀಪ್ ಅವರನ್ನು ಅರಸಿ ನೆರೆಭಾಷೆಯಿಂದ ಅವಕಾಶಗಳು ಬರುತ್ತಲೇ ಇವೆ.
ಈ ನಡುವೆ ನಟ ಸುದೀಪ್, ನೆರೆಯ ತೆಲಂಗಾಣದ ಹೈದರಾಬಾದ್‌ನ ದುಬಾರಿ ಏರಿಯಾದಲ್ಲಿ ದುಬಾರಿ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತೆಲುಗು ವೆಬ್‌ಪತ್ರಿಕೆಗಳು ಕೆಲವು ಈ ಬಗ್ಗೆ ವರದಿ ಮಾಡಿವೆ.

ನಟ ಸುದೀಪ್ ಅವರು ಹೈದರಾಬಾದ್‌ನ ಗಚ್ಚಿಬೌಲಿ ಏರಿಯಾದಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಫ್ಲ್ಯಾಟ್‌ನ ಮೌಲ್ಯ ಸುಮಾರು ಐದು ಕೊಟಿಗಳು ಎನ್ನಲಾಗುತ್ತಿದೆ.
ಸುದೀಪ್ ಅವರು ಸಿನಿಮಾಗಳ ಚಿತ್ರೀಕರಣಕ್ಕೆ ಆಗಾಗ್ಗೆ ಹೈದರಾಬಾದ್‌ಗೆ ಹೋಗುವುದು ಸಾಮಾನ್ಯ. ಅವರ ಪ್ಯಾಂಟಮ್ ಸಿನಿಮಾದ ಬಹುತೇಕ ಚಿತ್ರೀಕರಣ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿಯೇ ನಡೆದಿತ್ತು. ಬಿಗ್‌ಬಾಸ್ ಚಿತ್ರೀಕರಣವೂ ಬಹುತೇಕ ಅಲ್ಲಿಯೇ ನಡೆಯುತ್ತದೆ.
ಹೀಗಿರುವಾಗ ಸುದೀಪ್ ತಮ್ಮ ವಾಸ್ತವ್ಯದ ಅನುಕೂಲಕ್ಕಾಗಿ ಹೈದರಾಬಾದ್‌ನಲ್ಲಿ ಫ್ಲ್ಯಾಟ್ ಖರೀದಿಸಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸುದೀಪ್ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.


Click it and Unblock the Notifications











