»   » ತಮಿಳಿನಲ್ಲಿ ಸುದೀಪ್ ಹೆಸರಿಗೆ 'ಈಗ' ಭಾರೀ ಬೇಡಿಕೆ

ತಮಿಳಿನಲ್ಲಿ ಸುದೀಪ್ ಹೆಸರಿಗೆ 'ಈಗ' ಭಾರೀ ಬೇಡಿಕೆ

Posted By:
Subscribe to Filmibeat Kannada
ಕನ್ನಡ ನಟ ಕಿಚ್ಚ ಸುದೀಪ್ ಈಗ ದಕ್ಷಿಣ ಭಾರತದ ದೊಡ್ಡ ಸ್ಟಾರ್ ಎನ್ನುವಂತಾಗಿದ್ದು ಗೊತ್ತೇ ಇದೆ. ತೆಲುಗಿನ ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿಯ ತೆಲುಗಿನ 'ಈಗ' ಹಾಗೂ ತಮಿಳಿನ 'ನಾನ್ ಈ' ಚಿತ್ರಗಳು ಬರುವ ತಿಂಗಳು, ಜುಲೈ 6, 2012 ರಂದು ತೆರೆಗೆ ಬರಲಿವೆ. ಈ ಚಿತ್ರದ ಮೂಲಕ ಸುದೀಪ್ ಸೌತ್ ಇಂಡಿಯಾದಲ್ಲಿ ಪ್ರಕಾಶಿಸಲಿರುವುದು ಈಗ ಜಗಜ್ಜಾಹೀರಾಗಿದೆ.

ಹೇಳಿ ಕೇಳಿ ಚಿತ್ರರಂಗವೆಂಬ ಈ ಬಣ್ಣದ ಲೋಕದಲ್ಲಿ ಗೆಲ್ಲುವ ಕುದುರೆಗೇ ಎಲ್ಲರೂ ಬೆಲೆ ಕಟ್ಟುವವರು ತಾನೇ? ಅದರಂತೆ ಈಗ ಸುದೀಪ್ ಮಾರ್ಕೆಟ್ ವ್ಯಾಲ್ಯೂ ಜಾಸ್ತಿಯಾಗಿದೆ. ಸುದೀಪ್ ಹೆಸರು ಹೇಳಿಕೊಂಡು ವ್ಯವಹಾರ, ವ್ಯಾಪಾರ ಮಾಡುವುದು ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಹಿಂದೆ ಸಾಕಷ್ಟು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಈಗ ಸಾಲುಗಟ್ಟಿ ನಿಂತಿದ್ದಾರೆ.

ಅದರ ಮೊದಲ ಹೆಜ್ಜೆ ಎಂಬಂತೆ, ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸುದೀಪ್ ಅಭಿನಯ ಹಾಗೂ ಪಿ.ಎನ್. ಸತ್ಯ ನಿರ್ದೇಶನದ 'ಗೂಳಿ' ಚಿತ್ರವನ್ನು ಇದೀಗ ತಮಿಳಿಗೆ ಡಬ್ ಮಾಡಲಾಗುತ್ತಿದೆ. ಕನ್ನಡದ 'ಗೂಳಿ'ಗೆ ತಮಿಳಿನ ಹೆಸರು 'ಕೊರುಕು ಪೇಟೈ ಕೂಳಿ'. ಇದನ್ನು ಸುದೀಪ್ ಹೆಸರು 'ಎನ್ ಕ್ಯಾಶ್' ಮಾಡಿಕೊಳ್ಳುತ್ತಿರುವ ಮೊದಲ ಪ್ರಯತ್ನ ಎನ್ನಬಹುದು.

ಕೋಟಿ ರಾಮು ಬ್ಯಾನರ್ ನಲ್ಲಿ ನಿರ್ಮಿಸಲಾಗಿದ್ದ ಈ ಚಿತ್ರ ಕನ್ನಡದಲ್ಲಿ ಭರ್ಜರಿ ಪ್ರಚಾರ ಪಡೆದಿತ್ತು. ಕಿಚ್ಚ ಸುದೀಪ್ ವಿಶಿಷ್ಟ ನಟನೆ, ಕಥೆ, ಸಂಭಾಷಣೆ, ಸಾಹಸ ದೃಶ್ಯಗಳಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಕಿಚ್ಚನ ಅಭಿಮಾನಿಗಳಿಗೆ ಭಾರೀ ಇಷ್ಟವಾಗಿತ್ತಾದರೂ ಚಿತ್ರ ಭಾರೀ ಯಶಸ್ಸನ್ನೇನೂ ಗಳಿಸಿರಲಿಲ್ಲ. ಈ 'ಗೂಳಿ' ಚಿತ್ರಕ್ಕೆ ಮಮತಾ ಮೋಹನದಾಸ್ ನಾಯಕಿಯಾಗಿದ್ದರು.

ಆದರೆ ನಾಲ್ಕು ವರ್ಷಗಳ ನಂತರ ಇದ್ದಕ್ಕಿದ್ದಂತೆ ಈ ಚಿತ್ರವನ್ನು ತಮಿಳಿಗೆ ಡಬ್ ಮಾಡುತ್ತಿರುವುದುರ ಮರ್ಮ ಕೇವಲ ಸದ್ಯದ ಸುದೀಪ್ ಜನಪ್ರಿಯತೆ ಅಷ್ಟೇ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿಯ ತೆಲುಗು 'ಈಗ' ಚಿತ್ರ ತಮಿಳಿನಲ್ಲೂ 'ನಾನ್ ಈ' ಹೆಸರಿನ ಮೂಲಕ ಬಿಡುಗಡೆ ಆಗುತ್ತಿರುವುದರಿಂದ ಅಲ್ಲೂ ಸುದೀಪ್ ಈಗ ಭಾರೀ ಸ್ಟಾರ್ ಎನಿಸಲಿದ್ದಾರೆ.

ಅಷ್ಟೇ ಅಲ್ಲ, ನಾಯಕಿ ಮಮತಾ ಮೋಹನದಾಸ್ ಕೂಡ ತಮಿಳು ಚಿತ್ರರಂಗ ಗುರುತಿಸಿರುವ ಹೀರೋಯಿನ್. ಈ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ಇನ್ನೊಬ್ಬ ನಟ ಕಿಶೋರ್ ಕೂಡ ಅಲ್ಲಿ ಜನಪ್ರಿಯರು. ಹೀಗಾಗಿ, ಅಲ್ಲಿ ಲಾಭ ಮಾಡಿಕೊಳ್ಳಲು ಇದೇ ಸರಿಯಾದ ಕಾಲ ಎಂಬುದು ತಮಿಳಿಗೆ ಡಬ್ ಮಾಡುತ್ತಿರುವ ನಿರ್ಮಾಪಕರ ಲೆಕ್ಕಾಚಾರ. ಈ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. (ಒನ್ ಇಂಡಿಯಾ ಕನ್ನಡ)

English summary
Kannada actor Kichcha Sudeep Movie Gooli dubbed to Tamil after 4 years. Mamatha Mohandas acted as Heroine for this PN Satya Directed movie. Because of Sudeep's present popularity, this development took place. 
 
Please Wait while comments are loading...