For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಸ್ಟಾರ್ ನಟನ ಸ್ಫೂರ್ತಿ: ಅಮೆರಿಕದಲ್ಲಿ ಕಾರ್ ನಂಬರ್ ಪ್ಲೇಟ್ ಮೇಲೆ ಕನ್ನಡ

  By ಫಿಲ್ಮ್ ಡೆಸ್ಕ್
  |

  ವಿದೇಶದಲ್ಲಿ ನೆಲೆಸಿದ್ದರೂ ಸಹ ಅನೇಕರು ನಾಡು, ನುಡಿಯನ್ನು ಯಾವತ್ತು ಮರೆಯಲ್ಲ. ದೂರದ ಊರಿನಲ್ಲಿದ್ದರೂ ನಾಡಿನ ಬಗ್ಗೆ ಅಪಾರ ಪ್ರೀತಿ ಹೊಂದಿರುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ.

  ಇದೀಗ ಅಮೆರಿಕದಲ್ಲಿರುವ ಕನ್ನಡಿಗರೊಬ್ಬರು ಕನ್ನಡ ಭಾಷಾಭಿಮಾನ ಮೆರೆದಿದ್ದಾರೆ. ತಮ್ಮ ಕಾರ್ ನಂಬರ್ ಪ್ಲೇಟ್ ಅನ್ನು ಕನ್ನಡ ಅಂತ ಹಾಕಿಸಿದ್ದಾರೆ. ವಿಶೇಷ ಎಂದರೆ ಇದಕ್ಕೆ ಸ್ಫೂರ್ತಿ ಆಗಿದ್ದು, ಕನ್ನಡದ ಸ್ಟಾರ್ ನಟ ಸುದೀಪ್ ಎಂದು ಹೇಳಿಕೊಂಡಿದ್ದಾರೆ.

  ಸುದೀಪ್ ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಅನ್ನು ದುಬೈನ ಬುರ್ಜ್ ಖಲೀಫಾ ಮೇಲೆ ಪ್ರದರ್ಶನ ಮಾಡಿದ್ದರು. ಟೀಸರ್ ಪ್ರದರ್ಶನಕ್ಕೂ ಮೊದಲು ಬುರ್ಜ್ ಖಲೀಫಾ ಮೇಲೆ ಕನ್ನಡದ ಬಾವುಟ ರಾರಾಜಿಸಿತ್ತು. ಇದನ್ನು ನೋಡಿ ಸ್ಫೂರ್ತಿಯಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕನ್ನಡಿಗ ಕಾರಿನ ಮೇಲೆ ಕನ್ನಡ ಎಂದು ನಾಮ ಫಲಕ ಹಾಕಿಸಿದ್ದಾರೆ.

  'ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು': ಸುದೀಪ್ ಹೀಗೆ ಹೇಳಿದ್ಯಾಕೆ?

  ಅಂದಹಾಗೆ ಕೆಲವು ದೇಶಗಳಲ್ಲಿ ಕಾರಿನ ಮೇಲೆ ನಂಬರ್ ಬದಲು ಇಷ್ಟದ ಹೆಸರಗಳನ್ನು ಇಟ್ಟುಕೊಳ್ಳಬಹುದು. ಅದರಂತೆ ಕನ್ನಡಿಗರೊಬ್ಬರು ಕನ್ನಡ ಎಂದು ನಂಬರ್ ಪ್ಲೇಟ್ ಮೇಲೆ ಹಾಕಿಸಿಕೊಂಡು ಭಾಷಾಭಿಮಾನ ಮೆರೆದಿದ್ದಾರೆ.

  ಶಂಕರ್ ಎನ್ನುವವರು ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕಿಚ್ಚ ಸುದೀಪ್ ಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಬುರ್ಜ್ ಖಲೀಫಾ ಮೇಲೆ ಕನ್ನಡ ಬಾವುಟ ನೋಡಿ ಕಿಚ್ಚ ಸುದೀಪ್ ಅವರಿಂದ ಸ್ಫೂರ್ತಿ ಪಡೆದು ಕಾರಿಗೆ ಕನ್ನಡ ಎಂದು ಪ್ಲೇಟ್ ಹಾಕಿರುವುದಾಗಿ ಬರೆದುಕೊಂಡಿದ್ದಾರೆ.

  ಕಾರಿನ ಫೋಟೋವನ್ನು ನೋಡಿ ಇಷ್ಟಪಟ್ಟ ಕಿಚ್ಚ ನಮಸ್ಕಾರದ ಇಮೋಜಿ ಹಾಕಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗನ ಭಾಷಾಭಿಮಾನಕ್ಕೆ ಕನ್ನಡಿಗರು ಮನಸೋತಿದ್ದಾರೆ.

  Bigg Boss Kannada season 8 : ಸುದೀಪ್ ಕನ್ಫ್ಯೂಸ್ ಆಗಿದ್ದನ್ನು ನಾನು ನೋಡೆ ಇಲ್ಲ | Filmibeat Kannada

  ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಸೀಸನ್ 8ರಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಾಂತ್ ರೋಣ ಚಿತ್ರೀಕರಣ ಮುಗಿಸಿರುವ ಕಿಚ್ಚ ಹಾಡಿನ ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದಾರೆ. ವಿಕ್ರಾಂತ್ ರೋಣ ಬಳಿಕ ಸುದೀಪ್ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಕಿಚ್ಚನ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

  English summary
  Kannada Actor Kichcha Sudeep New York Fan's Car Number Written as Kannada

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X