ವಿಶ್ವ ಚಾಂಪಿಯನ್ ಜೊತೆ ಚೆಸ್ ಆಡಿದ ಸುದೀಪ್: 10 ಲಕ್ಷ ದೇಣಿಗೆ ಸಂಗ್ರಹ
ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಎದುರು ಕಿಚ್ಚ ಸುದೀಪ್ ಚೆಸ್ ಆಡಿದ್ದು, ಕಠಿಣ ಸ್ಪರ್ಧೆ ನೀಡಿದ್ದಾರೆ. ನಟನೆ, ನಿರ್ದೇಶನ, ನಿರೂಪಣೆ, ಕ್ರಿಕೆಟ್‌ನಲ್ಲಿ ಸೈ ಎನಿಸಿಕೊಂಡಿರುವ ಸುದೀಪ್ ಈಗ 'ಚೆಸ್ ಮಾಸ್ಟರ್' ಜೊತೆ ಆಟವಾಡಿ ತಮ್ಮ ಚಾಣಕ್ಷತನದ ಮೂಲಕ ಗಮನ ಸೆಳೆದರು.
Recommended Video
ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಚೆಸ್.ಕಾಮ್ ಸಂಸ್ಥೆ 'ಚೆಕ್‌ಮೆಟ್ ಕೋವಿಡ್' ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಬಂದ ಹಣದಿಂದ ಅನೇಕ ಕುಟುಂಬಗಳಿಗೆ ನೆರವು ನೀಡಲಾಗುವುದು ಎಂದು ತಿಳಿಸಿತ್ತು.
ಭಾನುವಾರ ಸಂಜೆ ನಡೆದ ಸೆಲೆಬ್ರಿಟಿ ಆವೃತ್ತಿಯಲ್ಲಿ ನಟ ಸುದೀಪ್, ರಿತೇಶ್‌ದೇಶಮುಖ್, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು. 30 ನಿಮಿಷಗಳ ಕಾಲ ವಿಶ್ವನಾಥನ್ ಆನಂದ್ ಅವರು ಈ ಸೆಲೆಬ್ರಿಟಿಗಳ ಜೊತೆ ಟೈಂಔಟ್‌ನಲ್ಲಿ ಏಕಕಾಲಕ್ಕೆ ಚೆಸ್ ಆಡಿದ್ದಾರೆ. ಮುಂದೆ ಓದಿ...

10 ಲಕ್ಷ ದೇಣಿಗೆ ಸಂಗ್ರಹ
ಚೆಸ್.ಕಾಮ್ ಆಯೋಜಿಸಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು 10 ಲಕ್ಷ ರೂಪಾಯಿ ಇದರಿಂದ ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಈ ಮಹತ್ವದ ಕೆಲಸಕ್ಕೆ ಕೈ ಜೋಡಿಸಿದ ಎಲ್ಲರಿಗೂ ಚೆಸ್.ಕಾಮ್ ಸಂಸ್ಥೆ ಧನ್ಯವಾದ ತಿಳಿಸಿದೆ.

ದಿಗ್ಗಜರ ಜೊತೆ ಆಡಿದ್ದೇ ಅದೃಷ್ಟ
'ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ. ಯಾರು ಹೆಚ್ಚು ಸಮಯ ವಿಶ್ವನಾಥ್ ಅವರೊಂದಿಗೆ ಕಣದಲ್ಲಿರುವ ಇರುತ್ತಾರೆ ಎನ್ನುವುದು ಮುಖ್ಯ. ಇಂತಹ ದಿಗ್ಗಜರ ಜೊತೆ ಆಟವಾಡಲು ಅವಕಾಶ ಸಿಕ್ಕಿದ್ದು ಖುಷಿ' ಎಂದು ನಟ ಸುದೀಪ್ ಆಟದ ಬಳಿಕ ನಡೆದ ಸಂವಾದದಲ್ಲಿ ತಿಳಿಸಿದರು.

ಈ ಅನುಭವ ಜೀವನ ಪೂರ್ತಿ ಇರುತ್ತದೆ
'ನನಗೆ ಆನ್‌ಲೈನ್ ಚೆಸ್ ಬಗ್ಗೆ ಮಾಹಿತಿ ಇರಲಿಲ್ಲ. ಈ ಆಟದಲ್ಲಿ ಸೋಲಿನ ಭಯ ಇರಲಿಲ್ಲ. ಏಕಂದ್ರೆ ನಾವು ಆಡುತ್ತಿರುವುದು ವಿಶ್ವನಾಥ್ ಆನಂದ್ ಎದುರು. ಈ ಅನುಭವ ಜೀವನ ಪೂರ್ತಿ ನೆನಪಿನಲ್ಲಿ ಇರುತ್ತದೆ' ಎಂದು ಅಭಿನಯ ಚಕ್ರವರ್ತಿ ಸಂತಸ ಹಂಚಿಕೊಂಡಿದ್ದಾರೆ.

ಅಮೀರ್ ಖಾನ್ ಜೊತೆ ಚೆಸ್ ಮಾಸ್ಟರ್
ಬಾಲಿವುಡ್ ನಟ ಅಮೀರ್ ಜೊತೆಯೂ ವಿಶ್ವನಾಥ್ ಆನಂದ್ ಚೆಸ್ ಆಡಿದರು. ಈ ವೇಳೆ ಅಮೀರ್ ಖಾನ್‌ಗೆ ಪ್ರಶ್ನೆಯೊಂದು ಎದುರಾಯಿತು. ಆನಂದ್ ಕುರಿತು ಬಯೋಪಿಕ್ ಮಾಡಲು ಇಷ್ಪಪಡ್ತೀರಾ ಎಂದಿದ್ದಕ್ಕೆ, ''ಖಂಡಿತವಾಗಿಯೂ, ಅದಕ್ಕಾಗಿ ಎದುರು ನೋಡುತ್ತಿದ್ದೇನೆ'' ಎಂದು ಹೇಳಿದರು.


Click it and Unblock the Notifications











