For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಮೀಡಿಯಂ' ರಾಜುಗೆ ಕಿಚ್ಚ ಸುದೀಪ್ ಸಾಥ್

  By Suneel
  |

  ಸ್ಯಾಂಡಲ್ ವುಡ್‌ನಲ್ಲಿ ಹೊಸಬರ ಚಿತ್ರಕ್ಕೆ ಸ್ಟಾರ್ ನಟರು ಹಾಡು ಹಾಡುವುದು, ಹಿನ್ನೆಲೆ ಧ್ವನಿ ನೀಡುವುದು ಹಾಗೂ ಗೆಸ್ಟ್ ರೋಲ್ ನಲ್ಲಿ ಅಭಿನಯಿಸುವುದು ಸಾಮಾನ್ಯವಾಗಿದೆ. ಅಂತೆಯೇ ಈಗ 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ನಟ ಗುರುನಂದನ್ ತೀರ ಹೊಸಬರೇನು ಅಲ್ಲದಿದ್ದರೂ ಅವರ ಚಿತ್ರಕ್ಕೆ ಕಿಚ್ಚನ ಸಾಥ್ ಸಿಕ್ಕಿದೆ.

  100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?

  ಹೌದು. ನಟ ಕಿಚ್ಚ ಸುದೀಪ್ ಇತ್ತೀಚೆಗೆತಾನೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದ ಲಂಡನ್ ಭಾಗದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಬೆನ್ನಲ್ಲೇ, ಈಗ ಗುರುನಂದನ್ ಅಭಿನಯದ 'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಅವರದ್ದು ಜಸ್ಟ್ ಗೆಸ್ಟ್‌ ರೋಲ್ ಅಲ್ಲದೇ ಪಾತ್ರ ಕುತೂಹಲಕಾರಿಯಾಗಿದೆಯಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ ಓದಿರಿ..

  5 ದಿನಗಳು ಕಾಲ್‌ ಶೀಟ್ ಕೊಟ್ಟಿದ್ದ ಕಿಚ್ಚ

  5 ದಿನಗಳು ಕಾಲ್‌ ಶೀಟ್ ಕೊಟ್ಟಿದ್ದ ಕಿಚ್ಚ

  ಕೆ ಎ ಸುರೇಶ್ ನಿರ್ಮಾಣದ, ನರೇಶ್ ಕುಮಾರ್ ನಿರ್ದೇಶನದ 'ರಾಜು ಕನ್ನಡ ಮೀಡಿಯಂ' ಚಿತ್ರಕ್ಕಾಗಿ ನಟ ಕಿಚ್ಚ ಸುದೀಪ್ ಐದು ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದರಂತೆ. ಈ ಬಗ್ಗೆ ಇದುವರೆಗೂ ಗುಟ್ಟು ರಟ್ಟು ಮಾಡದ ಚಿತ್ರತಂಡ ಕಳೆದ ನಾಲ್ಕು ದಿನಗಳಿಂದ ಸುದೀಪ್ ಭಾಗದ ಚಿತ್ರೀಕರಣವನ್ನು ಮುಗಿಸಿದೆ.

  ದೊಡ್ಡ ಪಾತ್ರದಲ್ಲಿ ಸುದೀಪ್ ಅಭಿನಯ

  ದೊಡ್ಡ ಪಾತ್ರದಲ್ಲಿ ಸುದೀಪ್ ಅಭಿನಯ

  ಅಂದಹಾಗೆ ಸುದೀಪ್ ರವರು ಗುರುನಂದನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಜಸ್ಟ್ ಗೆಸ್ಟ್‌ ರೋಲ್ ನಲ್ಲಿ ಅಭಿನಯಿಸದೇ ದೊಡ್ಡ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು. ಸುದೀಪ್ ಪಾತ್ರ ಚಿತ್ರದ ಮಧ್ಯಾಂತರದ ನಂತರ ಬರಲಿದ್ದು ಸಿನಿಮಾದ ಅಂತ್ಯದವರೆಗೆ ಅವರ ಪಾತ್ರ ಅತಿ ಮುಖ್ಯವಾದದ್ದಂತೆ.

  ಐದು ಗೆಟಪ್‌ಗಳಲ್ಲಿ ಸುದೀಪ್ ಅಭಿನಯ

  ಐದು ಗೆಟಪ್‌ಗಳಲ್ಲಿ ಸುದೀಪ್ ಅಭಿನಯ

  ಇನ್ನೊಂದು ವಿಶೇಷತೆ ಎಂದರೆ ಸುದೀಪ್ ರವರು 'ರಾಜು ಕನ್ನಡ ಮೀಡಿಯಂ'ನಲ್ಲಿ 5 ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದ್ದರಿಂದ ಕೇವಲ ಕಾಸ್ಟ್ಯೂಮ್‌ಗಾಗಿಯೇ ಚಿತ್ರತಂಡ 5-6 ಲಕ್ಷ ವೆಚ್ಚ ಮಾಡಿದೆಯಂತೆ. ಈ ಸಿನಿಮಾದಲ್ಲಿ ನಟಿಸಲು ಸುದೀಪ್ ಕೇವಲ 5 ದಿನಗಳ ಕಾಲ್‌ ಶೀಟ್ ಕೊಟ್ಟಿದ್ದ ಕಾರಣ ಚಿತ್ರತಂಡ ಬೆಂಗಳೂರಿನ ಈಗಲ್ ಟನ್ ರೆಸಾರ್ಟ್‌ ಮತ್ತು ಯಲಹಂಕದ ರೆಸಾರ್ಟ್‌ನಲ್ಲಿ ಹಗಲು ರಾತ್ರಿ ಶೂಟ್ ಮಾಡಿದೆಯಂತೆ. ಅಂದಹಾಗೆ ಅವರ ಭಾಗದ ಚಿತ್ರೀಕರಣ ಇಂದು ಮುಗಿಯಲಿದೆಯಂತೆ.

  ಸುದೀಪ್ ಪಾತ್ರ ಏನು?

  ಸುದೀಪ್ ಪಾತ್ರ ಏನು?

  ಚಿತ್ರದಲ್ಲಿ ಸುದೀಪ್ ರವರು ಹೀರೋಗೆ ಮಾದರಿಯಾಗಿ. ಜೀವನಕ್ಕೆ ಸ್ಫೂರ್ತಿ ತುಂಬುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಚಿತ್ರತಂಡದ ಬಗ್ಗೆ ಸುದೀಪ್ ಮನದಾಳದ ಮಾತು

  ಚಿತ್ರತಂಡದ ಬಗ್ಗೆ ಸುದೀಪ್ ಮನದಾಳದ ಮಾತು

  ಐದು ದಿನಗಳ ಕಾಲ 'ರಾಜು ಕನ್ನಡ ಮೀಡಿಯಂ' ಚಿತ್ರತಂಡದೊಂದಿಗೆ ವರ್ಕ್ ಮಾಡಿದ ಸುದೀಪ್ ರವರು, "'ರಾಜು ಕನ್ನಡ ಮೀಡಿಯಂ' ಅದ್ಭುತ ಜನರನ್ನು ಒಳಗೊಂಡ ಚಿತ್ರತಂಡ. ಅವರ ವಿನಯಕ್ಕೆ, ನೀಡಿದ ಸತ್ಕಾರಕ್ಕೆ ನಾನು ವಿನಮ್ರನಾಗಿರುತ್ತೇನೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ' ಎಂದು ಟ್ವೀಟ್ ಮಾಡಿದ್ದಾರೆ.

  ಚಿತ್ರದಲ್ಲಿ ಮೂವರು ನಾಯಕಿಯರು

  ಚಿತ್ರದಲ್ಲಿ ಮೂವರು ನಾಯಕಿಯರು

  'ರಾಜು ಕನ್ನಡ ಮೀಡಿಯಂ'ನಲ್ಲಿ ಗುರುನಂದನ್ ಗೆ ಮೂವರು ನಾಯಕಿಯರಿದ್ದು ಆಶಿಕಾ ರಂಗನಾಥ್, ಅವಂತಿಕಾ ಶೆಟ್ಟಿ ಮತ್ತು ರಷ್ಯಾ ಮೂಲದ ಬೆಡಗಿಯೊಬ್ಬರು ನಟಿಸಿದ್ದಾರೆ. ಚಿತ್ರತಂಡ ಸದ್ಯದಲ್ಲೇ ಆಡಿಯೋ ಬಿಡುಗಡೆ ಮಾಡಲಿದೆ.

  English summary
  Kannada Actor Kichcha Sudeep Playing a role in Gurunandan starrer 'Raju Kannada Medium' movie. This movie directed by Naresh Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X