'ಸೂರರೈ ಪೊಟ್ರು' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದು ಹೀಗೆ
ತಮಿಳಿನ 'ಸೂರರೈ ಪೊಟ್ರು' ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.
Recommended Video
ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ ಸಿನಿಮಾವನ್ನು ಹಲವಾರು ಸೆಲೆಬ್ರಿಟಿಗಳು ಸಹ ವೀಕ್ಷಿಸಿದ್ದು, ಸಿನಿಮಾ ಬಗ್ಗೆ ಬಹು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಅದರಲ್ಲಿಯೂ ನಟ ಸೂರ್ಯಾ ಹಾಗೂ ನಟಿ ಅಪರ್ಣಾ ಬಾಲಮುರಳಿ ನಟನೆ ಬಗ್ಗೆ ಶಹಭಾಸ್ ಎಂದಿದ್ದಾರೆ.
ತೆಲುಗಿನ ವಿಜಯ್ ದೇವರಕೊಂಡ, ವೆಂಕಟೇಶ್, ಮಹೇಶ್ ಬಾಬು, ಅಲ್ಲು ಅರ್ಜುನ್, ಮಾಧವನ್ ಇನ್ನೂ ಹಲವಾರು ಮಂದಿ ಸೂರರೈ ಪೊಟ್ರು ಸಿನಿಮಾ ನೋಡಿ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಕನ್ನಡದ ನಟ ಸುದೀಪ್ ಸಹ ಸೂರರೈ ಪೊಟ್ರು ನೋಡಿದ್ದು, ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಸೂರರೈ ಪೊಟ್ರು ನೋಡಿ ಟ್ವೀಟ್ ಮಾಡಿದ ಸುದೀಪ್
ಸೂರರೈ ಪೊಟ್ರು ಸಿನಿಮಾ ನೋಡಿ ಟ್ವೀಟ್ ಮಾಡಿರುವ ಸುದೀಪ್, 'ಸೂರರೈ ಪೊಟ್ರು ಸಿನಿಮಾದಲ್ಲಿ ನಿಮ್ಮ ನಟನೆ ಅದ್ಭುತವಾಗಿದೆ. ನಿಮ್ಮ ನಟನಾ ಪ್ರದರ್ಶನಕ್ಕೆ ಗೌರವ ನೀಡಲೇಬೇಕು, ಅಭಿನಂದನೆಗಳು' ಎಂದಿದ್ದಾರೆ ಸುದೀಪ್.

ಸುದೀಪ್ ಹಾಗೂ ಸೂರ್ಯಾ ಒಳ್ಳೆಯ ಗೆಳೆಯರು
ಸುದೀಪ್ ಹಾಗೂ ಸೂರ್ಯಾ ಒಳ್ಳೆಯ ಸ್ನೇಹಿತರು. ಸೂರ್ಯಾ ನಟನೆಯ ಸಿಂಘಂ2 ಸಿನಿಮಾದ ಕಾರ್ಯಕ್ರಮದಲ್ಲಿ ಸುದೀಪ್ ಅತಿಥಿಯಾಗಿ ಭಾಗವಹಿಸಿದ್ದರು. ಸೂರ್ಯಾ ನಟನೆಯ ಸಿಂಘಂ ಸಿನಿಮಾವನ್ನು ಕೆಂಪೇಗೌಡ ಹೆಸರಲ್ಲಿ ರೀಮೇಕ್ ಮಾಡಿದ್ದರು ಸುದೀಪ್.

ಕ್ಯಾಪ್ಟನ್ ಗೋಪಿನಾಥ್ ಜೀವನದ ಕತೆ
ಸೂರರೈ ಪೊಟ್ರು ಸಿನಿಮಾ ಭರ್ಜರಿ ಹಿಟ್ ಆಗಿದೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರು ಏರ್ ಡೆಕ್ಕನ್ ವಿಮಾನ ಸಂಸ್ಥೆ ಸ್ಥಾಪಿಸಿದ ಸಾಹಸಗಾಥೆಯನ್ನು ಸುಧ ಕೊಂಗರ ತೆರೆಗೆ ಏರಿಸಿದ್ದಾರೆ. ಕಡಿಮೆ ದರದಲ್ಲಿ ವಿಮಾನ ಟಿಕೆಟ್ ನೀಡಿ, ಸಾಮಾನ್ಯರು ವಿಮಾನದಲ್ಲಿ ಹಾರುವಂತೆ ಮಾಡಿದ ಶ್ರೇಯ ಕ್ಯಾಪ್ಟನ್ ಗೋಪಿನಾಥ್ ಅವರದ್ದು.

ಟೀಕೆಗಳೂ ಕೇಳಿಬಂದಿವೆ
'ಸೂರರೈ ಪೊಟ್ರು' ಸಿನಿಮಾದ ಬಗ್ಗೆ ಕೆಲವು ಟೀಕೆಗಳು ಸಹ ವ್ಯಕ್ತವಾಗಿವೆ. ಸಿನಿಮಾದಲ್ಲಿ ಹೆಚ್ಚು ನಾಟಕೀಯತೆ ಬೆರೆಸಲಾಗಿದೆ. 'ಸಿನಿಮಾ ಮಸಾಲೆ'ಗಾಗಿ ಹಲವೆಡೆ ಸತ್ಯವನ್ನು ತಿರುಚಲಾಗಿದೆ ಅಥವಾ ಮರೆಮಾಚಲಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.


Click it and Unblock the Notifications











