twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ: ಹರ್ಲೀನ್ ಹಿಡಿದ ಕ್ಯಾಚ್ ನೋಡಿ ಅವಾಕ್ಕಾದ ಕಿಚ್ಚ ಸುದೀಪ್

    |

    ನಟ ಕಿಚ್ಚ ಸುದೀಪ್ ಒಳ್ಳೆಯ ನಟ ಆಗಿರುವ ಜೊತೆಗೆ ಉತ್ತಮ ಕ್ರೀಡಾಪಟು ಹಾಗೂ ಕ್ರೀಡಾಭಿಮಾನಿಯೂ ಹೌದು.

    Recommended Video

    ಟೀಮ್ ಇಂಡಿಯಾ ಆಟಗಾರ್ತಿಯ ಅತ್ಯದ್ಭುತ ಕ್ಯಾಚ್ ಫುಲ್ ವೈರಲ್ | Filmibeat Kannada

    ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೇರಿದಂತೆ ಇನ್ನೂ ಕೆಲವು ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನ ಪ್ರಮುಖ ಟೂರ್ನಿಗಳನ್ನು ಸಹ ಸದಾ ಗಮನಿಸುತ್ತಿರುತ್ತಾರೆ.

    ಅದರಲ್ಲಿಯೂ ಭಾರತ ತಂಡದ ಮ್ಯಾಚ್‌ಗಳನ್ನು ಸುದೀಪ್ ಸಾಮಾನ್ಯವಾಗಿ ಮಿಸ್ ಮಾಡಿಕೊಳ್ಳುವುದಿಲ್ಲ. ಕ್ರಿಕೆಟ್ ಪಂದ್ಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಜೊತೆಗೆ, ಚೆನ್ನಾಗಿ ಪ್ರದರ್ಶನ ಮಾಡಿದವರನ್ನು ಸಾಮಾಜಿಕ ಜಾಲತಾಣದಲ್ಲಿ ಗುಣಗಾನ ಮಾಡುತ್ತಾರೆ.

    Sudeep Shared Video Of Harleens Brilliant Catch

    ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ನಲ್ಲಿ ಸರಣಿ ಆಡುತ್ತಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ಭಾರತೀಯ ಕ್ರಿಕೆಟರ್ ಹರ್ಲಿನ್ ಡಿಯೋಲ್ ಹಿಡಿದ ಅತ್ಯದ್ಭುತ ಕ್ಯಾಚ್‌ ಸುದೀಪ್ ಅನ್ನು ಸೆಳೆದಿದೆ.

    ಇಂಗ್ಲೆಂಡ್‌ನ ಬ್ಯಾಟ್ಸ್‌ವುಮನ್ ಆಮಿ ಜೋನಸ್ ಜೋರಾಗಿ ಹೊಡೆದ ಚೆಂಡು ಮಿಡ್‌ ಆಫ್‌ನಲ್ಲಿ ಸಿಕ್ಸ್‌ ಬೌಂಡರಿ ದಾಟುವುದರಲ್ಲಿತ್ತು, ಕೂಡಲೇ ಚೆಂಡನ್ನು ಹಾರಿ ಹಿಡಿದ ಹರ್ಲಿನ್ ಬೌಂಡರಿ ಆಗುವುದನ್ನು ತಡೆದರಲ್ಲದೆ ಚೆಂಡನ್ನು ಗಾಳಿಯಲ್ಲಿ ಮೇಲಕ್ಕೆ ಬಿಸಾಡಿ ತಾವು ಬೌಂಡರಿ ಗೆರೆ ದಾಟಿ ಸಮತೋಲನ ಪಡೆದುಕೊಂಡು ಮತ್ತೆ ಬೌಂಡರಿ ಗೆರೆ ಆಚೆಯಿಂದಲೇ ಚಿಮ್ಮಿ ಹಾರಿ ನೆಲಕ್ಕೆ ತಾಗಲಿದ್ದ ಚೆಂಡನ್ನು ವಶಕ್ಕೆ ತೆಗೆದುಕೊಂಡ ಪರಿ ಅತ್ಯದ್ಭುತ. ಮಹಿಳೆಯರ ಕ್ರಿಕೆಟ್ ಬಗ್ಗೆ ಲಘುವಾಗಿ ಮಾತನಾಡುವವರು ಮೂಗಮೇಲೆ ಬೆರಳಿಟ್ಟುಕೊಳ್ಳುವಂತೆ ಹರ್ಲಿನ್ ಆ ಕ್ಯಾಚ್ ಪಡೆದಿದ್ದಾರೆ.

    ಸ್ವತಃ ಕ್ರಿಕೆಟ್ ಆಟಗಾರರಾಗಿರುವ ಸುದೀಪ್‌ಗೆ ಔಟ್‌ ಫೀಲ್ಡ್‌ನಲ್ಲಿ ಹರ್ಲಿನ್ ಪಡೆದ ಆ ಕ್ಯಾಚ್‌ನ ಮಹತ್ವ, ಕ್ಯಾಚ್ ಪಡೆಯಲು ಹರ್ಲಿನ್ ಹಾಕಿರುವ ಶ್ರಮ ಎಲ್ಲದರ ಅರಿವೂ ಇದೆ. ಹಾಗಾಗಿಯೇ ಸುದೀಪ್ ಹರ್ಲಿನ್ ಪಡೆದ ಕ್ಯಾಚ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

    ಸುದೀಪ್ ಮಾತ್ರವೇ ಸಚಿನ್ ತೆಂಡೂಲ್ಕರ್ ಸೇರಿ ಇನ್ನೂ ಹಲವಾರು ಕ್ರಿಕೆಟ್ ಪ್ರೇಮಿಗಳು, ಕ್ರಿಕೆಟ್ ಆಟಗಾರರು ಹರ್ಲಿನ್ ಪಡೆದ ಅದ್ಭುತ ಕ್ಯಾಚ್‌ನ ವಿಡಿಯೋ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿಯೂ ಹರ್ಲಿನ್ ಪಡೆದ ಕ್ಯಾಚ್‌ನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

    ಹರ್ಲಿನ್ ಹೀಗೆ ಅದ್ಭುತ ಕ್ಯಾಚ್ ಪಡೆದಿದ್ದು ಭಾರತೀಯ ತಂಡ ಗೆಲುವಿಗೆ ಕಾರಣವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಹಿಳೆಯರ ತಂಡ 177 ರನ್ ಗಳಿಸಿತು. ರನ್‌ ಬೆನ್ನಿತ್ತಿದ ಭಾರತ ತಂಡಕ್ಕೆ ಮಳೆ ಅಡ್ಡಿಯಾಯ್ತು. ಕೊನೆಗೆ ಡಕ್‌ವರ್ತ್‌ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡಕ್ಕೆ 18 ರನ್‌ಗಳ ಜಯ ಘೋಷಿಸಲಾಯ್ತು.

    English summary
    Sudeep shared video of Indian cricketer Harleen's brilliant catch which she took against England yesterday.
    Saturday, July 10, 2021, 15:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X