For Quick Alerts
  ALLOW NOTIFICATIONS  
  For Daily Alerts

  ರಿತೇಶ್- ಜೆನಿಲಿಯಾ ದಂಪತಿ ಇಂದ ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ!

  |

  ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರಿಗೆ ಎಲ್ಲ ಚಿತ್ರ ರಂಗದಲ್ಲಿಯೂ ಆತ್ಮೀಯ ಸ್ನೇಹಿತರು ಇದ್ದಾರೆ. ಅಂತೆಯೇ ಬಾಲಿವುಡ್‌ನಲ್ಲೂ ತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ದಂಪತಿ ಕೂಡ ಸುದೀಪ್ ಅವರಿಗೆ ಒಳ್ಳೆಯ ಸ್ನೇಹಿತರು. ಈ ಸೆಲೆಬ್ರೆಟಿ ಜೋಡಿ ಆಗಾಗ ಸುದೀಪ್ ಅವರ ಜೊತೆ ಕಾಣಿಸಿಕೊಳ್ಳುತ್ತಿರುತ್ತದೆ. ಈಗ ಮತ್ತೆ ಕಿಚ್ಚನ ವಿಚಾರಕ್ಕೆ ಸುದ್ದಿ ಆಗಿದೆ ಈ ಜೋಡಿ.

  ಕಿಚ್ಚ ಸುದೀಪ್‌ಗೆ ಈ ಜೋಡಿ ವಿಶೇಷವಾದ ಉಡುಗೊರೆ ಕಳುಹಿಸಿದೆ. ಈ ಹಿಂದೆ ಹಲವು ಬಾರಿ ಕಿಚ್ಚ ಸುದೀಪ್ ಜೊತೆಗೆ ಈ ಜೋಡಿ ಕಾಣಿಸಿಕೊಂಡಿದೆ. ತಮ್ಮ ಸ್ನೇಹದ ಬಗ್ಗೆ ಸುದೀಪ್‌ ಕೂಡ ಹೇಳಿಕೊಂಡಿದ್ದಾರೆ. ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಬಾಲಿವುಡ್‌ನಲ್ಲಿ ಇರುವ ಕಿಚ್ಚನ ಆತ್ಮೀಯ ಸ್ನೇಹಿತರು.

  ಇದೀಗ ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಕಿಚ್ಚ ಸುದೀಪ್ ಅವರಿಗೆ ವಿಶೇಷವಾದ ಉಡುಗೊರೆ ಕಳುಹಿಸಿದೆ. ಈ ವಿಚಾರವನ್ನು ನಟ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ. ಜೊತೆಗೆ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.

  ಸಂತಸ ಹಂಚಿಕೊಂಡ ನಟ ಕಿಚ್ಚ ಸುದೀಪ್!

  ಸಂತಸ ಹಂಚಿಕೊಂಡ ನಟ ಕಿಚ್ಚ ಸುದೀಪ್!

  ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಕಿಚ್ಚ ಸುದೀಪ್‌ ಅವರಿಗೆ ನೀಡಿರುವ ಉಡುಗೊರೆ ಬಗ್ಗೆ ಕಿಚ್ಚ ಸುದೀಪ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಸುದೀಪ್ ಖುಷಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ದಂಪತಿಗೆ ಶುಭಾಶಯ ಕೋರಿದ್ದಾರೆ.

  ಗಿಫ್ಟ್‌ ಇಷ್ಟಾ ಆಯಿತು ಎಂದ ಕಿಚ್ಚ ಸುದೀಪ್!

  ಗಿಫ್ಟ್‌ ಇಷ್ಟಾ ಆಯಿತು ಎಂದ ಕಿಚ್ಚ ಸುದೀಪ್!

  ಈ ಉಡುಗೊರೆ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಗಿಫ್ಟ್ ತುಂಬಾ ಇಷ್ಟ ಆಯಿತು ಎಂದು ಬರೆದುಕೊಂಡಿದ್ದಾರೆ. "ಇದು ತುಂಬಾ ಮುದ್ದಾದ ಸರ್ಪ್ರೈಸ್.... ತುಂಬಾ ಇಷ್ಟವಾಯಿತು... ನಿಮ್ಮಿಬ್ಬರಿಗೂ ಶುಭಾಶಯಗಳು". ಎನ್ನುವ ಸಾಲುಗಳನ್ನು ಸುದೀಪ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅವರು ಕಳುಹಿಸಿರುವ ಉಡುಗೊರೆಯ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

  ಇಮ್ಯಾಜಿನ್ ಮೀಟ್ - ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಹೊಸ ಯೋಜನೆ!

  ಇಮ್ಯಾಜಿನ್ ಮೀಟ್ - ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಹೊಸ ಯೋಜನೆ!

  ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಅವರು 'ಇಮ್ಯಾಜಿನ್ ಮೀಟ್‌' ಎನ್ನುವ ಹೆಸರಿನಲ್ಲಿ ಹೊಸ ಆಹಾರ ವ್ಯಾಪಾರವನ್ನು ಆರಂಭಿಸಿದ್ದಾರೆ. ಇದೇ ಯೋಜನೆಯ ವತಿಯಿಂದ ಕಿಚ್ಚ ಸುದೀಪ್‌ ಅವರಿಗೆ ಉಡುಗೊರೆಯನ್ನು ಕಳುಹಿಸಲಾಗಿದೆ.

  ಇಮ್ಯಾಜಿನ್ ಮೀಟ್ ಎನ್ನುವಂತಹ ಹೆಸರಿನೊಂದಿಗೆ ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಆಹಾರ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಮೂಲ ಧ್ಯೇಯ ಪ್ಲಾಂಟ್ ಬೇಸ್ಡ್ ಮೀಟ್. ಅಂದರೆ ಮಾಂಸಹಾರದ ಹಾಗಿರುವ ಸಸ್ಯಹಾರ ಎನ್ನುವ ಅರ್ಥ ಬರುತ್ತದೆ. ಈ ಮೂಲಕ ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ತಮ್ಮ ಹೊಸ ವ್ಯಾಪಾರವನ್ನು ಆರಂಭಿಸಿದ್ದಾರೆ. ಈ ಯೋಜನೆ ಶುರು ಮಾಡಬೇಕು ಎನ್ನುವುದು ಈ ಜೋಡಿಯ ಮೂರು ವರ್ಷಗಳ ಕನಸು. ಈಗ ಅದು ಸಾಕಾರಗೊಂಡಿದೆ. ಅಮೇರಿಕಾ, ಭಾರತ ಮತ್ತು ಜರ್ಮನ್ ದೇಶಗಳಲ್ಲಿ ಈ ವ್ಯಾಪಾರವನ್ನು ವಿಸ್ತರಿಸಲಾಗಿದೆ. ಈಗ ಕಿಚ್ಚ ಸುದೀಪ್‌ ಅವರಿಗೂ ಕೂಡ ತಮ್ಮ ಇಮ್ಯಾಜಿನ್ ಮೀಟ್ ರುಚಿ ತೋರಿಸಲು ಈ ಜೋಡಿ ಮುಂದಾಗಿದ್ದು, ಉಡುಗೊರೆ ಕಳುಹಿಸಿದೆ.

  ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ದಂಪತಿಗೆ ಭರ್ಜರಿ ಔತಣ ನೀಡಿದ್ದ ಕಿಚ್ಚ!

  ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ದಂಪತಿಗೆ ಭರ್ಜರಿ ಔತಣ ನೀಡಿದ್ದ ಕಿಚ್ಚ!

  ಇನ್ನು ಈ ಹಿಂದೆ ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಕಿಚ್ಚ ಸುದೀಪ್ ಈ ದಂಪತಿಗಳಿಗೆ ಭರ್ಜರಿ ಔತಣ ಕೂಟವನ್ನು ಏರ್ಪಡಿಸಿದ್ದರು. ಬೆಂಗಳೂರಿನ ಸುದೀಪ್ ನಿವಾಸದಲ್ಲಿ ರಿತೇಶ್ ದೇಶ್‌ ಮುಖ್ ಹಾಗೂ ಜೆನಿಲಿಯಾ ಫೆಬ್ರವರಿ 13ರಂದು ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಜೋಡಿಗೆ ಸಸ್ಯಹಾರಿ ಊಟವನ್ನು ಮಾಡಿ ಬಡಿಸಿದ್ದರು ನಟ ಕಿಚ್ಚ ಸುದೀಪ್. ಆ ಸಂದರ್ಭದ ಫೊಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

  ಇನ್ನು ಸುದೀಪ್‌ಗೆ ಕೇವಲ ಬಾಲಿವುಡ್ ಮಾತ್ರವಲ್ಲ ಬಹು ಭಾಷೆಗಳಲ್ಲಿ ಕೂಡ ಸ್ನೇಹಿತರಿದ್ದಾರೆ. ಸಲ್ಮಾನ್ ಖಾನ್ ಅವರಿಂದ ಹಿಡಿದು ಸಾಕಷ್ಟು ಸ್ನೇಹಿತರು ಇದ್ದಾರೆ.

  English summary
  Kichcha Sudeep Received Special Gift from Bollywood Friends Riteish Deshmukh and Genelia

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X