For Quick Alerts
  ALLOW NOTIFICATIONS  
  For Daily Alerts

  ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಸುದೀಪ್; ಈಗ ಹೇಗಿದ್ದಾರೆ?

  |

  ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಕಿಚ್ಚ ಕಳೆದ ಎರಡು ವಾರಗಳಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸುದೀಪ್‌ಗೆ ಏನಾಗಿದೆ, ಹೇಗಿದ್ದಾರೆ ಎಂದು ಅಭಿಮಾನಿಗಳು ಆತಂಕ ಪಟ್ಟುಕೊಂಡಿದ್ದರು. ಬೇಗ ಗುಣಮಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

  ಆರೋಗ್ಯದ ಬಗ್ಗೆ ಮಾಹಿತಿ ಶೇರ್ ಮಾಡಿದ ಕಿಚ್ಚ ಸುದೀಪ್ | Filmibeat Kannada

  ಇದೀಗ ಕಿಚ್ಚ ತನ್ನ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗ ಆರೋಗ್ಯವಾಗಿ ಇದ್ದೀನಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ಅಷ್ಟೆಯಲ್ಲ ಈ ವಾರ ರಿಯಾಲಿಟಿ ಶೋ ನಿರೂಪಣೆಯಲ್ಲಿ ಕಾಣಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ.

  ಸುದೀಪ್ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಅಭಿಮಾನಿಗಳುಸುದೀಪ್ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಅಭಿಮಾನಿಗಳು

  ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, 'ನನಗಾಗಿ ಪ್ರಾರ್ಥಿಸಿದ ಮತ್ತು ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನಾನು ಈಗ ಉತ್ತವಾಗಿದ್ದೇನೆ. ನಾನು ಈ ವಾರ ನಿರೂಪಣೆಗೆ ಹಾಜರಾಗಲು ಎದುರು ನೋಡುತ್ತಿದ್ದೇನೆ. ನನಗೆ ಚಿಕಿತ್ಸೆ ನೀಡಿದ ಡಾ.ವೆಂಕಟೇಶ್ ಮತ್ತು ಡಾ.ವಿನಯ್ ಅವರಿಗೆ ಧನ್ಯವಾದಗಳು' ಎಂದಿದ್ದಾರೆ.

  'ನನಗಾಗಿ ದೇವಸ್ಥಾನದಲ್ಲಿ ಪೂಜೆ ಮಾಡಿದ, ಪ್ರಾರ್ಥಿಸಿದ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇನೆ. ಎಲ್ಲರಿಗೂ ಲವ್ ಯೂ' ಎಂದು ಹೇಳಿದ್ದಾರೆ.

  ಸುದೀಪ್ ಮಾತನ್ನು ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ವಾರದ ಕೊನೆಯಲ್ಲಿ ಕಿಚ್ಚನನ್ನು ನೋಡಲು ಕಾತರರಾಗಿದ್ದಾರೆ. ಕಳೆದ ವಾರ ಟ್ವೀಟ್ ಮಾಡಿ ಇನ್ನು ಚೇತರಿಸಿಕೊಳ್ಳಲು ಸಮಯ ಬೇಕು ಎಂದು ಹೇಳಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ಅಭಿಮಾನಿಗಳಿಗೆ ದರ್ಶನ ನೀಡಲು ಸಜ್ಜಾಗಿದ್ದಾರೆ.

  ಕಿಚ್ಚನ ಆರೋಗ್ಯಕ್ಕಾಗಿ ಸಾಕಷ್ಟು ಮಂದಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ನೆಚ್ಚಿನ ನಟ ಬೇಗ ಗಣಮುಖರಾಗಲಿ ಎಂದು ವಿಶೇಷ ಪೂಜೆ ಮಾಡಿಸಿ ಪ್ರಾರ್ಥಿಸಿದ್ದಾರೆ. ಅಭಿಮಾನಿಗಳ ಪೂಜೆಯ ಫೋಟೋವನ್ನು ಸುದೀಪ್ ಶೇರ್ ಮಾಡಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ವಿಕ್ರಾಂತ್ ರೋಣ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ಬಿಡುಗಡೆಯ ದಿನಾಂಕದಲ್ಲಿ ವ್ಯತ್ಯಾಸವಾದರೂ ಅಚ್ಚರಿ ಇಲ್ಲ.

  English summary
  Sudeep updates about his health,ready to attend Bigg Boss Kannada Weekend Episode this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X