»   » ಬ್ಯೂಟಿಫುಲ್ ರೀಮೇಕ್ ನಿರಾಕರಿಸಿದ ಕಿಚ್ಚ ಸುದೀಪ್

ಬ್ಯೂಟಿಫುಲ್ ರೀಮೇಕ್ ನಿರಾಕರಿಸಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಈಗ ಚಿತ್ರದ ಮೂಲಕ ಸೌತ್ ಇಂಡಿಯಾ ಸ್ಟಾರ್ ಆಗಿರುವ ಕನ್ನಡ ನಟ ಕಿಚ್ಚ ಸುದೀಪ್, ಇದೀಗ ತಮಗೆ ಸುರಿಮಳೆ ಆಗುತ್ತಿರುವ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳ ಆಫರ್ ಗಳನ್ನು ಒಪ್ಪಿಕೊಳ್ಳುತ್ತಿಲ್ಲ. ತಾವು ಒಂದೇ ರೀತಿ ಪಾತ್ರಗಳಿಗೆ ಬ್ರಾಂಡ್ ಆಗಬಾರದೆಂಬ ದೃಷ್ಟಿಯಿಂದ ಸುದೀಪ್ ಅಳೆದು, ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ವಿ.ಕೆ. ಪ್ರಕಾಶ್ ನಿರ್ದೇಶನದ ಮಲಯಾಳಂ 'ಬ್ಯೂಟಿಫುಲ್' ಚಿತ್ರದಲ್ಲಿ ಜಯಸೂರ್ಯ, ಅನೂಪ್ ಮೆನನ್, ಮೇಘನಾ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆ ಚಿತ್ರವೀಗ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಿಗೆ ರಿಮೇಕ್ ಆಗಲಿದೆ. ಹಿಂದಿಯಲ್ಲಿ ರಣವೀರ್ ಶೌರಿ, ವಿನಾಯಕ್ ಪಾಠಕ್, ಕೊಂಕಣಾ ಸೇನ್ ಅಭಿನಯಿಸಲಿದ್ದಾರೆ.

ಆದರೆ ತಮಿಳು ಮತ್ತು ತೆಲುಗಿನಲ್ಲಿ ತಾರಾಗಣದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕನ್ನಡದಲ್ಲಿ ಈ ಆಫರ್ ಸುದೀಪ್ ಪಾಲಿಗೆ ಬಂದಿದೆ. ಆದರೆ ಸುದೀಪ್ ಈ ಚಿತ್ರದಲ್ಲಿ ನಟಿಸಲು ಇನ್ನೂ ಒಪ್ಪಿಗೆ ನೀಡಿಲ್ಲ. ಈಗ ಚಿತ್ರದ ಯಶಸ್ಸಿನ ನಂತರ ಸುದೀಪ್ ಅವರಿಗೆ ಬಂದಿರುವ ಬಹಳಷ್ಟು ಆಫರ್ ಗಳಲ್ಲಿ ಸುದೀಪ್ ಇನ್ನೂ ಯಾವುದನ್ನೂ ಆಯ್ಕೆ ಮಾಡಿಕೊಂಡಿಲ್ಲ.

ಸುದೀಪ್ ಇನ್ನೂ ಯಾವುದೇ ಆಫರ್ ಒಪ್ಪಿಕೊಳ್ಳದಿರಲು ಕಾರಣಗಳಲ್ಲಿ ಮೊದಲನೆಯದು 'ಈಗ'ದಲ್ಲಿನ ತಾವು ಮಾಡಿರುವ ವಿಲನ್ ರೋಲ್ ನೋಡಿದವರು, ಮುಂದಿನ ದಿನಗಳಲ್ಲಿ ತಮ್ಮನ್ನು ಅಂತಹುದೇ ಪಾತ್ರಗಳಿಗೆ ಬ್ರಾಂಡ್ ಮಾಡಿಬಿಟ್ಟಾರೆಂಬ ಭೀತಿ. ಎರಡನೆಯದೆಂದರೆ ಈಗಾಗಲೇ ತಾವು ಒಪ್ಪಿಕೊಂಡಿರುವ ಕನ್ನಡ ಚಿತ್ರಗಳ ಕಮಿಟ್ ಮೆಂಟ್. ಹೀಗಾಗಿಯೇ ಮಲಯಾಳಂನಲ್ಲಿ ಸೂಪರ್ ಹಿಟ್  ಆಗಿದ್ದ 'ಬ್ಯೂಟಿಫುಲ್' ರೀಮೇಕ್ ಅವಕಾಶವನ್ನು ಸುದೀಪ್ ಇದುವರೆಗೂ ಒಪ್ಪಿಕೊಂಡಿಲ್ಲ.

ಸದ್ಯಕ್ಕೆ ಚಿರಂಜೀವಿ ಸರ್ಜಾ ನಾಯಕತ್ವದ 'ವರದನಾಯಕ' ಚಿತ್ರದಲ್ಲಿ ಅವರ ಅಣ್ಣನ ಪಾತ್ರದ ಚಿತ್ರೀಕರಣವನ್ನು ಮುಗಿಸಿರುವ ಸುದೀಪ್, ನಾಳೆಯಿಂದ, ಅಂದರೆ 18 ಜುಲೈ 2012 ರಿಂದ ಅವರದೇ ನಾಯಕತ್ವ ಹಾಗೂ ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ನಂತರ ಚಿಂಗಾರಿ ಖ್ಯಾತಿಯ ಎ ಹರ್ಷ ನಿರ್ದೇಶನದ ಚಿತ್ರ ಪ್ರಾರಂಭವಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Kichcha Sudeep Rejected Malayam Remake Beautiful movie Kannada offer. Sudeep is very choosy now in the selection of movies, because the fear of Branding for a same kind of role. His movie Bachchan Shooting Starts from tomorrow, on 18th July 2012.
 
Please Wait while comments are loading...