'777 ಚಾರ್ಲಿ' ಸಿನಿಮಾ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು?

ನಟ ಕಿಚ್ಚ ಸುದೀಪ್ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಫ್ರಿ ಮಾಡಿಕೊಂಡು ಕನ್ನಡದ ಸಿನಿಮಾಗಳನ್ನು ನೋಡುತ್ತಿರುತ್ತಾರೆ. ಅವರು ಉತ್ತಮ ನಟರಾಗಿರುವ ಜೊತೆಗೆ ನಿರ್ದೇಶಕರೂ ಸಹ ಹೌದು. ಹೀಗಾಗಿ ಬೇರೆ ಸಿನಿಮಾಗಳನ್ನು ನೋಡಿ ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಟ್ರೈಲರ್‌ ಅನ್ನು ನಿನ್ನೆಯಷ್ಟೇ (ಮೇ 16 ) ಐದು ಭಾಷೆಗಳಲ್ಲಿ ರಿಲೀಸ್ ಮಾಡಲಾಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯ್ಯೂಟೂಬ್‌ನಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಇದೇ ಸಿನಿಮಾದ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

'777 ಚಾರ್ಲಿ' ಸಿನಿಮಾ ನೋಡಿದ ಕಿಚ್ಚ ಸುದೀಪ್‌ ತಮ್ಮ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. "777 ಚಾರ್ಲಿ ಸಿನಿಮಾದ ಟ್ರೈಲರ್‌ಗಿಂತ ಹೆಚ್ಚಾಗಿ ಸಿನಿಮಾವನ್ನು ನೋಡಿದ್ದೇನೆ. ನನಗೆ ಸಿನಿಮಾದ ಪ್ರತಿಯೊಂದು ಸೀನ್‌ ಬಹಳ ಇಷ್ಟವಾಯಿತು. ಇಂತಹ ಅದ್ಬುತ ಸ್ಕ್ರೀಪ್ ಮಾಡಲು ಬಹಳ ಸಮಯ ಹಾಗೂ ಶ್ರಮವನ್ನು ಸಿನಿಮಾ ತಂಡ ಹಾಕಿದೆ. ಅದಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಬುತವಾಗಿ ಮೂಡಿ ಬಂದಿದೆ. ಹೊಸ ರೀತಿಯ ಸಾಹಸಕ್ಕೆ ಕೈ ಹಾಕಿರುವ ನಿಮ್ಮ ಪ್ರಯತ್ನ ನಿಜಕ್ಕೂ ಚೆನ್ನಾಗಿದೆ. ರಕ್ಷಿತ್ ಶೆಟ್ಟಿ ಹಾಗೂ ಸಿನಿಮಾ ತಂಡದ ಎಲ್ಲರಿಗೂ ನನ್ನ ಬೆಸ್ಟ್ ವಿಶ್‌," ಎಂದು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.ಈ ಹಿಂದೆ ಕೂಡ ಕಿಚ್ಚ ಸುದೀಪ್ ಕನ್ನಡದ ಮತ್ತೊಂದು ಸಿನಿಮಾ 'ಗರುಡ ಗಮನ ವೃಷಭ ವಾಹನ'ವನ್ನು ನೋಡಿ ಮೆಚ್ಚಿಕೊಂಡಿದ್ದರು. ಅಲ್ಲದೆ ಈ ಸಿನಿಮಾದ ಬಗ್ಗೆಯೂ ವಿಮರ್ಶೆಯನ್ನು ಕೂಡ ಬರೆದಿದ್ದರು. "ಒಳ್ಳೆಯ ಚಿತ್ರಕ್ಕಾಗಿ ಕ್ರಿಯೇಟರ್ ಒಬ್ಬ ನಡೆಸುವ ಹುಡುಕಾಟ ನಿರಂತರವಾದುದು. ಸಿನಿಮಾ ಮಾಡುವಾಗ ಎಲ್ಲರಲ್ಲೂ ಉತ್ಸಾಹ ತುಂಬ ಬಲ್ಲ ಚಿತ್ರಕತೆ, ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಭಿನ್ನ ಅನುಭೂತಿ ನೀಡುವ ಚಿತ್ರಕಥೆ" ಎಂದಿದ್ದರು ಸುದೀಪ್. "ಈ ಮಾತುಗಳನ್ನು ನಾನು ಕೇವಲ ನನ್ನ ಅಭಿಪ್ರಾಯ ಎಂದು ಹೇಳುತ್ತಿಲ್ಲ. ಬದಲಿಗೆ ಈ ಸಿನಿಮಾ ನೀಡಿದ ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳ ರೂಪದಲ್ಲಿ ಹೇಳುತ್ತಿದ್ದೇನೆ. ನೀವೊಂದು ಅದ್ಭುತವಾದ ಚಿತ್ರವನ್ನು ಮಾಡಿದ್ದೀರಿ." ಎಂದು ಸಿನಿಮಾ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರು.

Kichcha Sudeep Reviews 777 Charlie, Lauds Rakshit Shetty and Movie Team

ಈ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾವನ್ನು ನೋಡಿ ಸಿನಿಮಾ ಬಗ್ಗೆ ಹಾಡಿ ಹೊಗಳಿದ್ದಾರೆ. 5 ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವ '777 ಚಾರ್ಲಿ' ಸಿನಿಮಾ ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿಯ ಕಾಂಬಿನೇಶನ್‌ ಸಖತ್‌ ಮೂಡಿ ಮಾಡಿದ್ದು, ಪ್ರಾಣಿಗಳನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಈ ಸಿನಿಮಾ ಹತ್ತಿರವಾಗುವುದರಲ್ಲಿ ಅನುಮಾನವೇ ಇಲ್ಲ. ಅಷ್ಟರಮಟ್ಟಿಗೆ ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ತಯಾರು ಮಾಡಿದ್ದಾರೆ.

Kichcha Sudeep Reviews 777 Charlie, Lauds Rakshit Shetty and Movie Team

ಈಗಾಗಲೇ ಸಿನಿಮಾದ ಹಾಡು, ಹಾಗೂ ಟ್ರೈಲರ್‌ಗಳು ಸಿನಿಮಾದ ಮೇಲಿನ ನೀರಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ದಕ್ಷಿಣ ಭಾರತದ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಿದೆ. ಜೂನ್ 10 ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್‌ ಆಗಲಿದ್ದು, ಮತ್ತೊಂದು ದಕ್ಷಿಣ ಭಾರತದ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಧೂಳೆಬ್ಬಿಸುತ್ತಾ ಕಾದು ನೋಡಬೇಕಿದೆ.

More from Filmibeat

English summary
Kichcha Sudeep Reviews 777 Charlie, Lauds Rakshit Shetty. He Said It Takes More Than A Script And Efforts To Make A Film Of This Sort. In Short. Cheers And Best Wishes To The Entire Team For Daring.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X