'ಬಚ್ಚನ್'ಗೆ 10 ವರ್ಷಗಳ ಸಂಭ್ರಮ.. ಕಿಚ್ಚನಿಗೆ ಮಗಳ ಸ್ಪೆಷಲ್ ಗಿಫ್ಟ್: ಧೂಳೆಬ್ಬಿಸಿದ ಸುದೀಪ್ ಪೋಸ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಬಚ್ಚನ್' ಸಿನಿಮಾ ಇದೀಗ 10 ವರ್ಷ ಪೂರೈಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದೀಪಿಯನ್ಸ್ ಇದನ್ನು ನೆನಪಿಸಿಕೊಂಡಿದ್ದಾರೆ. 2013 ಏಪ್ರಿಲ್ 11ರಂದು ತೆರೆಗಪ್ಪಳಿಸಿದ್ದ ಸಿನಿಮಾ ಬಾದ್‌ಶಾ ಅಭಿಮಾನಿಗಳ ಮನ ಗೆದ್ದಿತ್ತು. ಶಶಾಂಕ್ ಈ ಸೈಕಲಾಜಿಕಲ್ ಆಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸುದೀಪ್ ಸ್ಟೈಲಿಶ್ ಲುಕ್‌ನಲ್ಲಿ ನಟಿಸಿ ಗಮನ ಸೆಳೆದಿದ್ದರು.

'ಬಚ್ಚನ್' ಅನ್ನೋ ಪವರ್‌ಫುಲ್ ಟೈಟಲ್‌ನಲ್ಲಿ ನಿರ್ಮಾಣವಾಗಿದ್ದ ಚಿತ್ರದಲ್ಲಿ ಸುದೀಪ್ ಆಂಗ್ರಿ ಯಂಗ್‌ಮ್ಯಾನ್ ಆಗಿ ಅಬ್ಬರಿಸಿದ್ದರು. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರಸಿ ಸಿನಿಮಾ ಕಟ್ಟಿಕೊಡಲಾಗಿತ್ತು. ಸಿನಿಮಾ ದುಬೈ, ಜರ್ಮನಿ ಸೇರಿದಂತೆ ವಿದೇಶಗಳಲ್ಲಿ ರಿಲೀಸ್ ಆಗಿ ಸದ್ದು ಮಾಡಿತ್ತು. ತೆಲುಗು, ತಮಿಳು, ಹಿಂದಿಗೂ ಡಬ್ ಆಗಿ ರಿಲೀಸ್ ಆಗಿದ್ದು ವಿಶೇಷ. ದೇಶಾದ್ಯಂತ 190ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಬಚ್ಚನ್' ದರ್ಬಾರ್ ನಡೆದಿತ್ತು. 3 ಶೇಡ್‌ಗಳಿರೋ ಪಾತ್ರದಲ್ಲಿ ಸುದೀಪ್ ನಟಿಸಿ ಗೆದ್ದಿದ್ದರು.

Kichcha Sudeeps Bachchan Movie Completes 10 Years; sudeep daughter Saanvi has given a special gift

ಇನ್ನು ಸುದೀಪ್ ಚಿತ್ರದಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಉದ್ದನೆಯ ಕೂದಲು ಬಿಟ್ಟು ಹಿಂದೆ ಚಿಕ್ಕದಾಗಿ ಜುಟ್ಟು ಕಟ್ಟಿ ಕಾಣಿಸಿಕೊಂಡಿದ್ದರು. ಈ ಲುಕ್ ಸಖತ್ ವೈರಲ್ ಆಗಿತ್ತು. ಸಿನಿಮಾ 10 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಿಚ್ಚನ 'ಬಚ್ಚನ್' ಲುಕ್‌ನ ಪುತ್ರಿ ಸಾನ್ವಿ ಪೆನ್ಸಿಲ್ ಸ್ಕೆಚ್ ಮಾಡಿದ್ದಾರೆ. ಅದನ್ನು ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು "ತುಂಬಾ ಚೆನ್ನಾಗಿದೆ, ಥ್ಯಾಂಕ್ಯೂ ಬೇಬಿ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುದೀಪ್ ಈ ಫೋಟೊ ಹಂಚಿಕೊಂಡಿದ್ದು ಕೇವಲ 30 ನಿಮಿಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿ ಸದ್ದು ಮಾಡ್ತಿದೆ. ಅಭಿಮಾನಿಗಳು ಕಮೆಂಟ್ಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಅಭಿಮಾನಿಗಳು ಕೂಡ ಈ ಪೆನ್ಸಿಲ್‌ ಸ್ಕೆಚ್‌ನ ತಮ್ಮ ಪೇಜ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ 'ಬಚ್ಚನ್' ಸಿನಿಮಾವನ್ನು ಮೆಲುಕು ಹಾಕುತ್ತಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಹಬ್ಬದ ಸಂಭ್ರಮ ಹೆಚ್ಚಿಸಿತ್ತು.

'ಬಚ್ಚನ್' ಸಿನಿಮಾ ಕಥೆಯನ್ನು ನೆನಪು ಮಾಡಿಕೊಳ್ಳುವುದಾದರೆ ಚಿತ್ರದ ನಾಯಕ ಭರತ್ ಪ್ರೀತಿಸುತ್ತಿರುವ ಹುಡುಗಿ ಅಶ್ವಿನಿ ಬಳ್ಳಾರಿ ಗಣಿ ಮಾಫಿಯಾಗೆ ಬಲಿಯಾಗುತ್ತಾಳೆ. ದುಷ್ಟರು ಆಕೆಯನ್ನು ಜೀವಂತ ಮಣ್ಣು ಮಾಡಿಬಿಡುತ್ತಾರೆ. ಅಲ್ಲಿ ಅವರದ್ದೇ ಸಾಮ್ರಾಜ್ಯ. ಅವರು ಆಡಿದ್ದೇ ಆಟ. ಅವರ ವಿರುದ್ಧ ಹೋದ ಹುಡುಗಿಯನ್ನು ಹೀಗೆ ಸಾಯಿಸಿಬಿಡುತ್ತಾರೆ. ಇದಕ್ಕಾಗಿ ಮುಂದೆ ಭರತ್ ಏನು ಮಾಡ್ತಾನೆ ಅನ್ನೋದು 'ಬಚ್ಚನ್' ಚಿತ್ರದ ಒನ್‌ಲೈನ್ ಸ್ಟೋರಿ. ಎಂ. ಎಲ್ ಪ್ರಸನ್ನ ಬರೆದ ಚಿತ್ರದ ಡೈಲಾಗ್‌ಗಳನ್ನು ಅಭಿಮಾನಿಗಳು ಇನ್ನು ಮರೆತ್ತಿಲ್ಲ.

"ಖುಷಿಯಾಗಿದ್ದಾಗ ದೇವರು ಎಂತೆಂಥವರನ್ನೋ ಸೃಷ್ಟಿಸುತ್ತಾನೆ. ಆದರೆ ಕೋಪ ಬಂದಾಗ ಮಾತ್ರ ನನ್ನಂಥವನನ್ನು ಸೃಷ್ಟಿಸುತ್ತಾನೆ" ಎನ್ನುವ ಡೈಲಾಗ್ ಇವತ್ತಿಗೂ ಸುದೀಪಿಯನ್ಸ್ ಫೇವರಿಟ್ ಎನಿಸಿಕೊಂಡಿದೆ. ವಿ. ಹರಿಕೃಷ್ಣ ಮ್ಯೂಸಿಕ್, ರವಿವರ್ಮಾ ಸ್ಟಂಟ್ಸ್ ಚಿತ್ರಕ್ಕೆ ಪ್ಲಸ್ ಆಗಿತ್ತು. ಟೆಕ್ನಿಕಲಿ ಕೂಡ ಸಿನಿಮಾ ಸಖತ್ ರಿಚ್ ಆಗಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಕಿಚ್ಚ 3ನೇ ಶೇಡ್‌ನಲ್ಲಿ 'ಬಚ್ಚನ್‌' ಚಿತ್ರದ ಅಸಲಿ ಕಥೆ ಬಿಚ್ಚಿಕೊಳ್ಳುತ್ತದೆ.

'ಬಚ್ಚನ್' ಸಿನಿಮಾ ಫಸ್ಟ್ ವೀಕೆಂಡ್‌ನಲ್ಲಿ 5 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಜಾಕಿ ಭಾವನಾ ಮಿಂಚಿದ್ದರು. ಪಾರುಲ್ ಯಾದವ್ ಕೂಡ 2ನೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತೆಲುಗು ನಟ ಜಗಪತಿ ಬಾಬು, ಆರ್ಮುಗ ರವಿಶಂಕರ್, ಜೈ ಜಗದೀಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಉದಯ್ ಕೆ. ಮೆಹ್ತಾ ಸಿನಿಮಾ ನಿರ್ಮಾಣ ಮಾಡಿದ್ದರು.

More from Filmibeat

English summary
Kichcha Sudeep's Bachchan Movie Completes 10 Years; Know Facts about the Movie. Sudeep daughter Saanvi has given a special gift to Father. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X