twitter
    For Quick Alerts
    ALLOW NOTIFICATIONS  
    For Daily Alerts

    ಈ ಒಂದು ಕೆಲಸ ತಮ್ಮಿಂದ ಬಹಳ ಕಷ್ಟ ಎಂದ ಕಿಚ್ಚ ಸುದೀಪ್!

    |

    'ಅಭಿನಯ ಚಕ್ರವರ್ತಿ' ಎಂಬ ವಿಶೇಷಣ ಹೊಂದಿರುವ ನಟ ಕಿಚ್ಚ ಸುದೀಪ್ ನಟನೆಗೆ ಬಾಲಿವುಡ್ ಸಹ ಫಿದಾ ಆಗಿತ್ತು. ಕನ್ನಡ ಮಾತ್ರವಲ್ಲದೆ ವಿವಿಧ ಭಾಷೆಗಳಿಗೆ ಒಂದು ವಿಶೇಷ ಪಾತ್ರಕ್ಕಾಗಿ ಅವರಿಗೆ ಡಿಮ್ಯಾಂಡ್ ಇದ್ದೇ ಇರುತ್ತದೆ. ಪಾತ್ರಕ್ಕಾಗಿ ಅವರು ತೋರಿಸುವ ಬದ್ಧತೆ ಮತ್ತು ಶ್ರಮ ಇದಕ್ಕೆ ಕಾರಣ. ಈ ಪರಿಶ್ರಮದ ಮೂಲಕ ಪಾತ್ರಕ್ಕೆ ಜೀವ ತುಂಬುವುದು ಅವರ ಪ್ರತಿಭೆ.

    Recommended Video

    ಸುದೀಪ್ ಕೈಯಲ್ಲಿ ಇದೊಂದು ಕೆಲಸ ಮಾತ್ರ ಆಗಲ್ಲ | Kiccha Sudeep | Filmibeat Kannada

    ಎಂತಹ ಭಾವಗಳನ್ನೂ ಪಾತ್ರದ ಒಳಹೊಕ್ಕು ಹೊರಹಾಕುವ ಸುದೀಪ್ ಅವರಿಗೆ ನಟನೆ ಸಲೀಸು. ಆದರೆ ಕ್ಯಾಮೆರಾ ಮುಂದೆ ನಿಂತಾಗ ಒಂದು ಕೆಲಸದ ವಿಚಾರದಲ್ಲಿ ಅವರು ಯಾವಾಗಲೂ ಹಿಂದೆಯಂತೆ. ಎಂತಹ ಸವಾಲುಗಳಿಗಾದರೂ ಸೈ, ಆದರೆ ಇದೊಂದು ಕೆಲಸ ತಮ್ಮಿಂದ ಬಹಳ ಕಷ್ಟ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ವಿದೇಶದಲ್ಲಿರುವ ಕನ್ನಡಿಗರ ಜತೆಗೆ ವಿಡಿಯೋ ಮೂಲಕ ಮಾತುಕತೆ ನಡೆಸಿದ್ದ ಅವರು ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಹುಚ್ಚ ವೆಂಕಟ್ ಚಿಕಿತ್ಸೆಗೆ ನೆರವು ನೀಡಲು ಮುಂದಾದ ಕಿಚ್ಚ ಸುದೀಪ್ಹುಚ್ಚ ವೆಂಕಟ್ ಚಿಕಿತ್ಸೆಗೆ ನೆರವು ನೀಡಲು ಮುಂದಾದ ಕಿಚ್ಚ ಸುದೀಪ್

    ನೃತ್ಯ ಎಂದರೆ ಕಷ್ಟ

    ನೃತ್ಯ ಎಂದರೆ ಕಷ್ಟ

    ನಾನು ದೊಡ್ಡ ನೃತ್ಯಗಾರ ಅಲ್ಲ. ಆದರೆ ಸಿನಿಮಾಗಳಲ್ಲಿ ನೃತ್ಯ ಮಾಡಿದಂತೆ ಇರುತ್ತದೆ. ಒಬ್ಬ ನಟ ಡ್ಯಾನ್ಸರ್ ಆಗಿರುವುದಕ್ಕೂ, ನಟನಾಗಿರುವುದಕ್ಕೂ ಅವುಗಳನ್ನು ಎಂಜಾಯ್ ಮಾಡುತ್ತಾರೆ ಎನ್ನುವುದು ವಿಭಿನ್ನ. ಸಿನಿಮಾ ಶೂಟಿಂಗ್ ಎಂದು ಬಂದಾಗ ನಾನು ಡ್ಯಾನ್ಸ್ ಎಂಜಾಯ್ ಮಾಡಿಯೇ ಇಲ್ಲ. ಸಿನಿಮಾಗಳಲ್ಲಿ ನನಗೆ ಎಲ್ಲ ಕೊರಿಯಾಗ್ರಾಫರ್‌ಗಳು ಬೇಕಾದವರೇ ಇರುತ್ತಾರೆ. ನಾವು ಕಣ್ಣಲ್ಲಿ ಮಾತಾಡಿಕೊಳ್ಳುತ್ತೇವೆ. ಅಲ್ಲಿ ನೂರು ನೂರೈವತ್ತು ಜನ ಒಳ್ಳೆಯ ಡ್ಯಾನ್ಸರ್ ಇರುತ್ತಾರೆ. ನಾನು ಇದುವರೆಗೆ ನಟಿಸಿದ ಸಿನಿಮಾಗಳ ನಟಿಯರೆಲ್ಲರೂ ಒಳ್ಳೆಯ ನೃತ್ಯಪಟುಗಳು. ಇದರಲ್ಲಿ ನಾನು ಒಂದು ಹೆಜ್ಜೆ ಹಿಂದೆ. ಎಲ್ಲರಿಗೂ ಒಂದೊಂದು ಕಷ್ಟ ಇರುತ್ತದೆ. ನನಗೆ ಇದು ಕಷ್ಟ.

    ಪೈಲ್ವಾನ್‌ಗೆ ಹೆಚ್ಚು ಶ್ರಮ ಬೇಕಿತ್ತು

    ಪೈಲ್ವಾನ್‌ಗೆ ಹೆಚ್ಚು ಶ್ರಮ ಬೇಕಿತ್ತು

    'ಪೈಲ್ವಾನ್' ಚಿತ್ರಕ್ಕೆ ನಟನೆ ಮಾತ್ರವಲ್ಲ ಎಕ್ಸ್‌ಟ್ರಾ ಬೇಕು. ನನ್ನಲ್ಲಿ ಆ ಎಕ್ಸ್‌ಟ್ರಾ ಇರಲಿಲ್ಲ. 'ವಿಲನ್' ಚಿತ್ರಕ್ಕೆ ತೂಕ ಹೆಚ್ಚು ಮಾಡಿಕೊಂಡಿದ್ದೆ. ಜಿಮ್‌ಗೆ ಹೋಗಿ ಶರ್ಟ್ ಬಿಚ್ಚಿ ಓಡಿದಾಗ ಶಾಕ್ ಆಯ್ತು, ಹೇಗಿದ್ದೋನು ಹೇಗಾಗಿದ್ದೇನೆ ಎಂದು. ಬಹಳ ಕೆಟ್ಟ ರೀತಿಯಲ್ಲಿ 88-89 ಕೆಜಿಯಷ್ಟು ಹೋಗಿದ್ದೆ. ಅಲ್ಲಿಂದ ವಾಪಸ್ ಬರುವುದು ಸುಲಭವಲ್ಲ. ಆದರೆ ಹೀಗೆ ಬದಲಾಗುವುದು ಮತ್ತು ಅದನ್ನು ಒಪ್ಪಿಕೊಳ್ಳುವುದು ವಿಶೇಷವಲ್ಲ. ನಿರ್ಧರಿಸುವುದು ಸವಾಲು.

    ಕುವೈತ್‌ನ ಸುದೀಪ್ ಅಭಿಮಾನಿಯ ಕನ್ನಡ: ವಿಡಿಯೋ ವೈರಲ್ಕುವೈತ್‌ನ ಸುದೀಪ್ ಅಭಿಮಾನಿಯ ಕನ್ನಡ: ವಿಡಿಯೋ ವೈರಲ್

    ನನ್ನ ಜೀವನ ಶೈಲಿ ಬದದಲಾಯಿತು

    ನನ್ನ ಜೀವನ ಶೈಲಿ ಬದದಲಾಯಿತು

    ಈ ಪಾತ್ರಕ್ಕಾಗಿ ನಾನು ಸಾಕಷ್ಟು ಸಮಯ ತೆಗೆದುಕೊಂಡೆ. ಏಕೆಂದರೆ ತೆರೆಯ ಮೇಲೆ ಗ್ರಾಫಿಕ್ಸ್ ಮೂಲಕ ದೇಹ ತೋರಿಸಬಹುದು. ಆದರೆ ಸೆಟ್‌ನಲ್ಲಿ ಎಲ್ಲರೂ ನೋಡುತ್ತಾರಲ್ಲ. ಸೆಟ್‌ನಲ್ಲಿ ಜೂನಿಯರ್ಸ್ ನೋಡಿ ಹೀರೋ ಹೇಗಿದ್ದಾರೆ ಎಂದರೆ? ಇದೆಲ್ಲ ತಲೇಲಿ ಬರುತ್ತಿತ್ತು. ಇದು ಬಹಳ ಮೈಂಡ್ ಗೇಮ್. ರಾತ್ರಿ ಮಲಗಲು ಆಗುತ್ತಿರಲಿಲ್ಲ. ಬೆಳಗೆದ್ದರೆ ಜಿಮ್. ಹೀಗೆ ತಯಾರಿ ನಡೆಸಿದ್ದೆ. ಮನೆಯಲ್ಲಿ ಅದಕ್ಕೆ ಬೆಂಬಲ. ಇಂದು ನನಗೆ ಆತ್ಮವಿಶ್ವಾಸ ಮೂಡಿಸಿರುವುದು ಎಂದರೆ ಆ ಸಿನಿಮಾ ಮಾಡಿದ್ದು. ಅದರಿಂದಾಗಿ ನನ್ನ ಜೀವನಶೈಲಿ, ದಿನಚರಿ ಬದಲಾಗಿದೆ ಎಂದು ಸುದೀಪ್ ಹೇಳಿದ್ದಾರೆ.

    ಸಿನಿಮಾ ಎಂದರೆ ಚಿತ್ರಮಂದಿರದ ಕತ್ತಲೆ

    ಸಿನಿಮಾ ಎಂದರೆ ಚಿತ್ರಮಂದಿರದ ಕತ್ತಲೆ

    ಈಗ ವೆಬ್ ಸೀರೀಸ್‌ಗಳಿಗೆ ತುಂಬಾ ಜನ ಕೈಹಾಕುತ್ತಿದ್ದಾರೆ. ಸಮಯ ಬದಲಾಗುವುದನ್ನು ಒಪ್ಪಿಕೊಳ್ಳಬೇಕು. ಆದರೆ ಸಿನಿಮಾ ಎನ್ನುವುದರಲ್ಲಿ ಜನರು ಚಿತ್ರಮಂದರಕ್ಕೇ ಬರಬೇಕು. ಕತ್ತಲಲ್ಲಿ ತೊಡೆಯ ಮೇಲೆ ಪಾಪ್‌ಕಾರ್ನ್ ಇಟ್ಟುಕೊಂಡು ನೋಡುವುದೇ ಚೆಂದ. ಡಿಜಿಟಲ್ ಎನ್ನುವುದು ಸುಂದರ ವಿಭಾಗ. ಯಾವಾಗ ಬೇಕಾದರೂ ದುಡ್ಡು ಕೊಟ್ಟು ನೋಡಬಹುದು. ಸಿನಿಮಾ ಹಾಗೆ ಅಲ್ಲ. ಅದು ನೀವು ಕುಟುಂಬದ ಜತೆ ಔಟಿಂಗ್ ಹೋಗುವ ಅವಕಾಶ. ನಿಮ್ಮ ದೈನಂದಿನ ಜೀವನದಿಂದ ಸ್ವಲ್ಪ ದೂರ ಹೋಗಲು. ಅಲ್ಲಿ ನೀವು ಮತ್ತು ಸಿನಿಮಾ ಮಾತ್ರ. ಸಿನಿಮಾ ಒಂದು ರೀತಿ ಪ್ರಾರ್ಥನೆಯಂತೆ. ಪ್ರಾರ್ಥಿಸುವಾಗ ಕಣ್ಣುಮುಚ್ಚಿಕೊಳ್ಳುತ್ತೇವೆ. ಸಿನಿಮಾ ಆನಂದಿಸುವಾಗ ಆ ಕತ್ತಲೆ ಇರಬೇಕು ಎಂದು ಅವರು ಹೇಳಿದ್ದಾರೆ.

    ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿಲ್ಲ ಸುದೀಪ್: ಕನ್ನಡದ ಮತ್ತೊಬ್ಬ ಸ್ಟಾರ್ ನಟ ಅಭಿನಯಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಿಲ್ಲ ಸುದೀಪ್: ಕನ್ನಡದ ಮತ್ತೊಬ್ಬ ಸ್ಟಾರ್ ನಟ ಅಭಿನಯ

    English summary
    Actor Kichcha Sudeep told, dancing in movies is the most difficult thing for him.
    Saturday, June 20, 2020, 17:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X