Kichcha Sudeep Vs Kumar: ನಿರ್ಮಾಪಕ ಕುಮಾರ್‌ಗೆ ಲೀಗಲ್ ನೋಟಿಸ್.. 10 ಕೋಟಿ ಪರಿಹಾರ ಡಿಮ್ಯಾಂಡ್!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಹಾಗೂ ವಿತರಕ ಎಂ ಎನ್ ಕುಮಾರ್ ಇತ್ತೀಚೆಗೆ ಫಿಲ್ಮ್ ಚೇಂಬರ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಕಿಚ್ಚ ಸುದೀಪ್ ಅಡ್ವಾನ್ಸ್ ಪಡೆದು ಸತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ನಿರ್ಮಾಪಕ ಎಂ ಎನ್ ಕುಮಾರ್‌ಗೆ ಕನ್ನಡ ನಿರ್ಮಾಪಕರುಗಳು ಜೊತೆಯಾಗಿದ್ದರು. ನಿರ್ಮಾಪಕರಾದ ಎಂ ಎನ್ ಸುರೇಶ್, ಪ್ರವೀಣ್ ಕುಮಾರ್ ಹಾಗೂ ಎ. ಗಣೇಶ್ ಸೇರಿದಂತೆ ಹಲವರು ಬೆಂಬಲ ನೀಡಿದ್ದರು.

Kichcha Sudeep Sends Legal Notice to Producers M N Kumar, Seeking Apology and Compensation

ಭೇಷರತ್ ಕ್ಷಮೆ ಕೇಳಬೇಕು

ಕಿಚ್ಚ ಸುದೀಪ್ ಅಡ್ವಾನ್ಸ್ ತೆಗೆದುಕೊಂಡು ಸಿನಿಮಾ ಮಾಡಿ ಕೊಡುವುದಾಗಿ ಹೇಳಿದ್ದರು. ಆದರೆ, ಆರೇಳು ವರ್ಷಗಳಿಂದ ಸತಾಯಿಸುತ್ತಿದ್ದಾರೆ. ಸಿನಿಮಾ ಮಾಡಿಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆಂದು ನಿರ್ಮಾಪಕ ಎಂ ಎನ್ ಕುಮಾರ್ ಆರೋಪ ಮಾಡಿದ್ದರು. ಈ ಸಂಬಂಧ ನಿರ್ಮಾಪಕರಿಗೆ ಕಿಚ್ಚ ಸುದೀಪ್ ಪರ ವಕೀಲರು ನೋಟಿಸ್ ಕಳುಹಿಸಿದ್ದಾರೆ.

ನಿರ್ಮಾಪಕರಾದ ಎಂ ಎನ್ ಕುಮಾರ್ ಹಾಗೂ ಎನ್‌ ಎಂ ಸುರೇಶ್ ಇಬ್ಬರೂ ಮೂರು ದಿನಗಳಲ್ಲಿ ಭೇಷರತ್ ಕ್ಷಮೆಯಾಚಿಸಬೇಕು. ಪ್ರಿಂಟ್ ಹಾಗೂ ವಿಜ್ಯೂವಲ್ ಮೀಡಿಯಾದಲ್ಲಿ ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ಮಾನಹಾನಿಯಾಗುವಂತಹ ಹೇಳಿಕೆಗಳನ್ನು ನೀಡಿದ್ದರಿಂದ ಪರಿಹಾರವಾಗಿ 10 ಕೋಟಿ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.

ಜನವರಿ ತಿಂಗಳಿನಲ್ಲೇ ಕಿಚ್ಚನಿಂದ ಉತ್ತರ

ಕಿಚ್ಚ ಸುದೀಪ್ ತಮ್ಮ ವಕೀಲರ ಮೂಲಕ ನಿರ್ಮಾಪಕ ಎಂ ಎನ್ ಕುಮಾರ್ ಮಾಡಿದ ಸುಳ್ಳು ಆರೋಪಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದ್ರೆ, ಫಿಲ್ಮ್ ಚೇಂಬರ್‌ನಿಂದ ಬರೆದ ಪತ್ರಕ್ಕೆ ಜನವರಿ 17ರಂದೇ ಕಿಚ್ಚ ಸುದೀಪ್ ನಿರ್ಮಾಪಕ ಕುಮಾರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದರು ಎಂದು ಸೌತ್ ಫಸ್ಟ್ ವರದಿ ಮಾಡಿದೆ.

ಈ ಬಗ್ಗೆ ನಿರ್ಮಾಪಕ ಎಂ ಎನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿಲ್ಲ. "ಜನವರಿ 17ರಂದು ಕಳುಹಿಸಿದ ಲೀಗರ್ ನೋಟಿಸ್‌ನಿಂದ ಭಯ ಬಿದ್ದಿರೋ ನಿರ್ಮಾಪಕ ಎಂಎನ್ ಕುಮಾರ್ ಕಾನೂನು ಬಾಹಿರವಾಗಿ ಹಾಗೂ ಮಾನಹಾನಿಯಾಗುವಂತಹ ಆರೋಪಗಳನ್ನು ಮಾಡಿದ್ದಾರೆ. ಆದರೆ, ಅಂದು ಕಿಚ್ಚ ಸುದೀಪ್ ಈ ಇದನ್ನು ಕಾರ್ಯಗತಗೊಳಿಸಿರಲಿಲ್ಲ. ಜುಲೈ 3ರಂದು ನಿರ್ಮಾಪಕರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪ ಶಾಕಿಂಗ್ ಆಗಿದೆ" ಎಂದು ಲೀಗಲ್ ನೋಟಿಸ್‌ನಲ್ಲಿ ಹೇಳಲಾಗಿದೆ.

Kichcha Sudeep Sends Legal Notice to Producers M N Kumar, Seeking Apology and Compensation

"ಆತ್ಮಹತ್ಯೆ ಬೆದರಿಕೆ ಹಾಕಿದ್ದರು"

ಇದೇ ಪತ್ರಿಕಾಗೋಷ್ಠಿಯಲ್ಲಿ ಮತ್ತೊಬ್ಬ ನಿರ್ಮಾಪಕ ಎನ್ ಎಂ ಸುರೇಶ್ ಕೊಟ್ಟ ಹೇಳಿಕೆಗಳ ವಿರುದ್ಧ ನೋಟಿಸ್ ಕಳುಹಿಸಲಾಗಿದೆ. ನಿರ್ಮಾಪಕ ಎಂಎನ್ ಕುಮಾರ್ ಸಾಲಗಾರರ ಕಾಟದಿಂದ ಕುಗ್ಗಿದ್ದು, ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನ ಪಟ್ದಿದ್ದರು ಎಂದು ಕುಟುಂಬಗಳು ಹೇಳಿವೆ. ಈ ಬೆನ್ನಲ್ಲೇ ಮತ್ತೆ ಇಂತಹ ಪ್ರಯತ್ನಕ್ಕೆ ಮುಂದಾದರೇ ಸುದೀಪ್ ಅವರೇ ಕಾರಣವೆಂದು ಕುಮಾರ್ ಮಗ ಹೇಳಿದ್ದಾರೆಂದು ನಿರ್ಮಾಪಕರ ಎಮ್ಎನ್‌ ಸುರೇಶ್ ಹೇಳಿದ್ದರು.

ಇಂತಹ ಹೇಳಿಕೆಗಳು ಇಮೇಜ್ ಮೇಲೆ ಹಾಗೂ ಮನಸ್ಸಿನ ಮೇಲೆ ಒತ್ತಡ ಬಿದ್ದಿದೆ. ಅಲ್ಲದೆ ತನ್ನ ಕುಟುಂಬ ಮಾನಸಿಕವಾಗಿ ಕುಗ್ಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾಗಿ ನಿರ್ಮಾಪಕರಿಬ್ಬರಿಗೆ ನೀಡಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

More from Filmibeat

English summary
Kichcha Sudeep Sends Legal Notice to Producers M N Kumar, Seeking Apology and Compensation, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X