ರಾಜು ಕನ್ನಡ ಮೀಡಿಯಂ ಚಿತ್ರ ವಿಮರ್ಶೆ ಮಾಡಿದ ಕಿಚ್ಚ ಸುದೀಪ್

By Pavithra

ನಟ ಗುರುನಂದನ್ ಅಭಿನಯದ ಸಿನಿಮಾ ರಾಜು ಕನ್ನಡ ಮೀಡಿಯಂ. ಮೂರು ವಾರಗಳ ಹಿಂದೆ ರಾಜ್ಯಾದಂತ್ಯ ಬಿಡುಗಡೆ ಆಗಿರುವ ರಾಜು ಕನ್ನಡ ಮೀಡಿಯಂ ಸಿನಿಮಾಗೆ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಕಿಚ್ಚನ ಪಾತ್ರವನ್ನ ತುಂಬಾ ಎಂಜಾಯ್ ಮಾಡಿದ್ದರು. ಅದಷ್ಟೇ ಅಲ್ಲದೆ ಸಿನಿಮಾ ಬಿಡುಗಡೆ ನಂತರವೂ ಸಿನಿಮಾತಂಡದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು ಕಿಚ್ಚ ಸುದೀಪ್.

ಉತ್ತಮ ವಿಮರ್ಶೆ, ಪ್ರೇಕ್ಷಕರಿಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ರಾಜು ಕನ್ನಡ ಮೀಡಿಯಂ ಸಿನಿಮಾವನ್ನ ಅಭಿನಯ ಚಕ್ರವರ್ತಿ ವಿಮರ್ಶೆ ಮಾಡಿದ್ದಾರೆ. ಹಾಗಾದ್ರೆ ಕಿಚ್ಚನ ಸಿನಿಮಾ ವಿಮರ್ಶೆ ಹೇಗಿದೆ? ಚಿತ್ರದ ಯಾವ ಯಾವ ಅಂಶದ ಬಗ್ಗೆ ಸುದೀಪ್ ಮಾತನಾಡಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿಚ್ಚ ಸುದೀಪ್ ಮಾಡಿದರು ಸಿನಿಮಾ ರಿವ್ಯೂ

ಕಿಚ್ಚ ಸುದೀಪ್ ಮಾಡಿದರು ಸಿನಿಮಾ ರಿವ್ಯೂ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ರಾಜು ಕನ್ನಡ ಮಿಡಿಯಂ ಸಿನಿಮಾದ ಬಗ್ಗೆ ಸುದೀಪ್ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಚಿತ್ರಕಥೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಹಂತ ಹಂತಕ್ಕೂ ಬದಲಾಗುವ ಆಯ್ಕೆ

ಹಂತ ಹಂತಕ್ಕೂ ಬದಲಾಗುವ ಆಯ್ಕೆ

ರಾಜು ಕನ್ನಡ ಮೀಡಿಯಂ ಸಿನಿಮಾದಲ್ಲಿ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜೀವನ ಅಂದರೆ ಏನು ಎನ್ನುವುದನ್ನ ಬಿಡಿಸಿ ಹೇಳಲಾಗಿದೆ. ಈ ಅಂಶ ಕಿಚ್ಚನನ್ನ ಹೆಚ್ಚು ಆಕರ್ಷಣೆ ಮಾಡಿದೆ.

ಜೀವನ ಯಾವಾಗಲೂ ಕಷ್ಟ

ಜೀವನ ಯಾವಾಗಲೂ ಕಷ್ಟ

ಜೀವನದ ಪ್ರಾಮುಖ್ಯತೆ ಬಗ್ಗೆ ಮಾತ್ರವಲ್ಲದೆ ಜೀವನ ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದನ್ನ ತುಂಬಾ ಚೆನ್ನಾಗಿ ವಿವರಿಸಿದ್ದಾರೆ ನಿರ್ದೇಶಕರು. ಈ ವಿಚಾರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ.

ಖುಷಿಯನ್ನ ಹಂಚಿಕೊಂಡ ಕಿಚ್ಚ ಸುದೀಪ್

ಖುಷಿಯನ್ನ ಹಂಚಿಕೊಂಡ ಕಿಚ್ಚ ಸುದೀಪ್

ರಾಜು ಕನ್ನಡ ಮೀಡಿಯಂ ಸಿನಿಮಾದ ಕಥೆ ಸುದೀಪ್ ಅವರಿಗೆ ತುಂಬಾ ಇಷ್ಟವಾಗಿದೆ. ನಿರ್ದೇಶನ ಮತ್ತು ಚಿತ್ರಕಥೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ತಮ್ಮ ಟ್ವಿಟ್ಟರ್ ನಲ್ಲಿ ಚಿತ್ರದ ಬಗ್ಗೆ ಬರೆಯುವ ಬಗ್ಗೆ ವ್ಯಕ್ತ ಪಡಿಸಿದ್ದಾರೆ.

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ

ರಾಜು ಕನ್ನಡ ಮೀಡಿಯಂ ಸಿನಿಮಾ ಇಂದಿಗೂ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನರೇಶ್ ಹಾಗೂ ಗುರುನಂದನ್ ಅವರ ಕಾಂಬಿನೇಶನ್ ಜನರಿಗೆ ಇಷ್ಟವಾಗಿದೆ. ಚಿತ್ರವನ್ನ ಸುರೇಶ್ ನಿರ್ಮಾಣ ಮಾಡಿದ್ದು ಅವಂತಿಕಾ ಶೆಟ್ಟಿ ಮತ್ತು ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ.

More from Filmibeat

English summary
Actor Kichcha Sudeep spoke about the Raju Kannada medium film. Sudeep liked sreenply and story of the movie. sudeep congratulated The film's director and producer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X