ಜೋರಾಗಿದೆ ಕಿಚ್ಚ 'ಮ್ಯಾಕ್ಸ್' ಟ್ರೈಲರ್ ಆರ್ಭಟ; ಅಡ್ವಾನ್ಸ್ ಬುಕ್ಕಿಂಗ್ ರೆಸ್ಪಾನ್ಸ್ ಹೇಗಿದೆ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಮತ್ತೊಮ್ಮೆ ಆಂಗ್ರಿ ಯಂಗ್‌ಮ್ಯಾನ್ ಆಗಿ ಕಿಚ್ಚ ಅಬ್ಬರಿಸಿದ್ದಾರೆ. ಚಿತ್ರದುರ್ಗದಲ್ಲಿ ಪ್ರೀ ರಿಲೀಸ್ ಈವೆಂಟ್ ಕೂಡ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮತ್ತೊಂದು ಕಡೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಈಗಾಗಲೇ ಭರ್ಜರಿ ಪ್ರಮೋಷನ್ ಆರಂಭವಾಗಿದೆ. ಶೀಘ್ರದಲ್ಲೇ ತೆಲುಗು, ತಮಿಳಿನಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಲಿದೆ. ಬಹಳ ದಿನಗಳ ಬಳಿಕ ಸುದೀಪ್ ನಟನೆಯ ಸಿನಿಮಾ ತೆರೆಗೆ ಬರುತ್ತಿರುವುದರಿಂದ ಕರ್ನಾಟಕದಲ್ಲಿ ನಿರೀಕ್ಷೆ ಹೆಚ್ಚಿದೆ.

ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ' ಮ್ಯಾಕ್ಸ್' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ಆಯ್ದ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಬೆಂಗಳೂರಿನಲ್ಲಿ ಒಂದೆರಡು ಶೋ ಸೋಲ್ಡೌಟ್ ಆಗಿದ್ದರೆ 8 ಶೋಗಳು ಫಾಸ್ಟ್ ಫಿಲ್ಲಿಂಗ್ ನಡೀತಿದೆ. ಇನ್ನುಳಿದಂತೆ ಸಾಕಷ್ಟು ಕಡೆಗಳಲ್ಲಿ ಬುಕ್ಕಿಂಗ್ ಆರಂಭವಾಗಬೇಕಿದೆ.
ಬುಧವಾರ(ಡಿಸೆಂಬರ್) 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗುತ್ತಿದೆ. ಹಾಗಾಗಿ ಇಂದು ನಾಳೆ ಎಲ್ಲಾ ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಲಿದೆ. ಸದ್ಯದ ಮಟ್ಟಿಗೆ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಇದೆ. ಮೊದಲ ದಿನ ಬರೀ ಬೆಂಗಳೂರಿನಲ್ಲೇ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಸಿನಿಮಾ 15 ಲಕ್ಕಷ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ. ಹೈದರಾಬಾದ್‌ನ ಒಂದು ಚಿತ್ರಮಂದಿರದಲ್ಲಿ ಸಹ ಬುಕ್ಕಿಂಗ್ ಶುರುವಾಗಿದೆ.
ಮುಖ್ಯವಾಗಿ ಕನ್ನಡ ಹಾಗೂ ತಮಿಳಿನಲ್ಲಿ 'ಮ್ಯಾಕ್ಸ್' ಸಿನಿಮಾ ನಿರ್ಮಾಣವಾಗಿದೆ. ಎರಡೂ ಭಾಷೆಯ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ತಮಿಳು ನಿರ್ಮಾಪಕರೇ ಹಣ ಹೂಡಿದ್ದಾರೆ. ಆದರೆ ತಮಿಳಿನಲ್ಲಿ ಇನ್ನು ಬುಕ್ಕಿಂಗ್ ಶುರುವಾಗಿಲ್ಲ. ಅಲ್ಲಿ ದೊಡ್ಡಮಟ್ಟದ ಪ್ರಮೋಷನ್ ಕೂಡ ನಡೀತಿಲ್ಲ. ಇತ್ತೀಚೆಗೆ ಬಂದ 'ಯುಐ' ಚಿತ್ರದ ವಿಚಾರದಲ್ಲಿ ಕೂಡ ಹೀಗೆ ಆಗಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಿಸಿದರೂ ಆ ರೇಂಜಿಂಗ್ ಚಿತ್ರವನ್ನು ದೇಶಾದ್ಯಂತ ತಲುಪಿಸುವ ಪ್ರಯತ್ನ ನಡೀಲಿಲ್ಲ.
ರಾತ್ರಿ 'ಮ್ಯಾಕ್ಸ್' ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಹಗಲಿನಲ್ಲಿ ಶುರು ಆಗಿದ್ದರೆ ಇನ್ನು ಚೆನ್ನಾಗಿ ಬುಕ್ಕಿಂಗ್ ನಡೀತಿತ್ತು ಎನ್ನುವ ವಾದವೂ ಇದೆ. ಆದರೂ ಪ್ಯಾನ್ ಇಂಡಿಯಾ ಸಿನಿಮಾ ರೇಂಜಿಗೆ ಇಲ್ಲ ಎನ್ನುವವರು ಇದ್ದಾರೆ. ಮುಂದೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಮುಗಿಬಿದ್ದು 'ಮ್ಯಾಕ್ಸ್' ಫಸ್ಟ್ ಡೇ ಟಿಕೆಟ್ಸ್ ಕಾಯ್ದಿರಿಸುತ್ತಾರೆ ಎನ್ನಲಾಗ್ತಿದೆ. 'ವಿಕ್ರಾಂತ್ ರೋಣ' ಬಳಿಕ 'ಮ್ಯಾಕ್ಸ್' ಆಗಿ ಕಿಚ್ಚ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಟ್ರೈಲರ್ ವಿಚಾರಕ್ಕೆ ಬಂದರೆ ಬಹಳ ತಡವಾಗಿ ಬಿಡುಗಡೆ ಆಯಿತು. ಮಧ್ಯಾಹ್ನವೇ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡ್ತೀವಿ ಎಂದು ಚಿತ್ರತಂಡ ಘೋಷಿಸಿತ್ತು. ಅಭಿಮಾನಿಗಳು ಕಾದು ಕಾದು ಸುಸ್ತಾದರು. ಕೊನೆಗೆ ಪ್ರೀ-ರಿಲೀಸ್ ಈವೆಂಟ್ ನಡುವೆ ಮ್ಯಾಕ್ಸಿಮಮ್ ಕಿಕ್ ಕೊಡೋಕೆ 'ಮ್ಯಾಕ್ಸ್' ಎಂಟ್ರಿ ಆಯಿತು. ಮೊದಲೇ ನಿರೀಕ್ಷಿಸಿದಂತೆ ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ ಎನ್ನುವುದು ಟ್ರೈಲರ್‌ನಲ್ಲಿ ರಿವೀಲ್ ಆಗಿದೆ.


Click it and Unblock the Notifications










