'ಪೈಲ್ವಾನ್' ಸಿನಿಮಾದ ಹೊಸ ರಿಲೀಸ್ ಡೇಟ್ ಬಹಿರಂಗ

Recommended Video

Pailwan Movie: ಅಬ್ಬರಿಸೋದಿಕ್ಕೆ ರೆಡಿಯಾದ ಕಿಚ್ಚ ಸುದೀಪ್ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ರಿಲೀಸ್ ಡೇಟ್ ಇನ್ನು ಅಂತಿಮವಾಗಿಲ್ಲ. ಆಗಸ್ಟ್ 9ಕ್ಕೆ ತೆರೆಗೆ ಬರಬೇಕಾಗಿದ್ದ 'ಪೈಲ್ವಾನ್' ಮುಂದಕ್ಕೆ ಹೋಗುತ್ತಲೆ ಇದೆ. ಬೇರೆ ಭಾಷೆಯ ದೊಡ್ಡ ಸಿನಿಮಾಗಳ ರಿಲೀಸ್ ಡೇಟನ್ನು ತಪ್ಪಿಸಿಕೊಂಡು ತೆರೆಗೆ ಬರಲು ಕಾಯುತ್ತಿರುವ 'ಪೈಲ್ವಾನ್'ಗೆ ಇನ್ನು ಉತ್ತಮ ದಿನ ಸಿಕ್ಕಿಲ್ಲ.

ಆಗಸ್ಟ್ 9ರಿಂದ ಆಗಸ್ಟ್ 29ಕ್ಕೆ ಜಿಗಿದಿದ್ದ 'ಪೈಲ್ವಾನ್' ಈಗ ಮತ್ತೆ ಮುಂದೆಕ್ಕೆ ಹೋಗಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿತ್ತು. ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ, ಜೊತೆಗೆ ಗಣೇಶ ಹಬ್ಬಕ್ಕೆ ಸರಿಯಾಗಿ 'ಪೈಲ್ವಾನ್' ಎಂಟ್ರಿ ಕೊಡಲು ಸಕಲತಯಾರಿಗಳನ್ನು ಮಾಡಿಕೊಳ್ಳುತ್ತಿತ್ತು.

ಆದ್ರೆ ಆಗಸ್ಟ್ 30ಕ್ಕೆ ತೆಲುಗು ಸ್ಟಾರ್ ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾ ಎಂಟ್ರಿ ಕೊಡುತ್ತಿರುವುದರಿಂದ ಪೈಲ್ವಾನ್ ರಿಲೀಸ್ ಅತಂತ್ರವಾಗಿದೆ. 'ಸಾಹೋ' ಕೂಡ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಪೈಲ್ವಾನ್ ಕೂಡ ಐದು ಭಾಷೆಯಲ್ಲಿ ಎಂಟ್ರಿ ಕೊಡುತ್ತಿದೆ. ಹಾಗಾಗಿ ಸಾಹೋ ರಿಲೀಸ್ ಡೇಟ್ ಅನ್ನು ನೋಡಿಕೊಂಡು ಪೈಲ್ವಾನ್ ತೆರೆಗೆ ಬರಲು ಕಾಯುತ್ತಿದೆ. ಪೈಲ್ವಾನ್ ಚಿತ್ರತಂಡಕ್ಕೆ ಈಗ ಮತ್ತೊಂದು ಹೊಸ ಡೇಟ್ ಸಿಕ್ಕಿದೆ. ಮುಂದೆ ಓದಿ..

ಸೆಪ್ಟಂಬರ್ 12ಕ್ಕೆ ಪೈಲ್ವಾನ್ ತೆರೆಗೆ?

ಸೆಪ್ಟಂಬರ್ 12ಕ್ಕೆ ಪೈಲ್ವಾನ್ ತೆರೆಗೆ?

ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಪೈಲ್ವಾನ್ ಸಿನಿಮಾಗೆ ಮತ್ತೊಂದು ಹೊಸ ಡೇಟ್ ಸಿಕ್ಕಿದೆ. ಆಗಸ್ಟ್ ಇಂದ ಈಗ ಪೈಲ್ವಾನ್ ಸೆಪ್ಟಂಬರ್ ಗೆ ಜಂಪ್ ಆಗಿದೆ. ಸೆಪ್ಟಂಬರ್ 12ಕ್ಕೆ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಪೈಲ್ವಾನ್ ಸೆಪ್ಟಂಬರ್ 12ಕ್ಕೆ ತೆರೆಗೆ ಬರಲಿದೆ. ಆದ್ರೆ ಈ ಬಗ್ಗೆ ಇನ್ನು ಚಿತ್ರತಂಡ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

ಆಡಿಯೋ ರಿಲೀಸ್ ಡೇಟ್ ಮುಂದಕ್ಕೆ

ಆಡಿಯೋ ರಿಲೀಸ್ ಡೇಟ್ ಮುಂದಕ್ಕೆ

ಇನ್ನು ಆಡಿಯೋ ರಿಲೀಸ್ ಡೇಟ್ ಕೂಡ ಮುಂದೆಕ್ಕೆ ಹೋಗಿದೆ. ಈಗಾಗಲೆ ನಿಗದಿಯಾಗಿರುವ ಪ್ರಕಾರ ಪೈಲ್ವಾನ್ ಹಾಡುಗಳು ಜುಲೈ 27ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೀಗ ಆಡಿಯೋ ರಿಲೀಸ್ ಗೂ ದಿನಾಂಕ ಹುಡುಕುತ್ತಿದೆ ಚಿತ್ರತಂಡ. ಮದಕರಿ ನಾಯಕನ ನಾಡಲ್ಲಿ ಪೈಲ್ವಾನ್ ಹಾಡುಗಳು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೆ ಚಿತ್ರದಿಂದ ಟೈಟಲ್ ಸಾಂಗ್ ಮತ್ತು ಒಂದು ರೋಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ.

ಆಗಸ್ಟ್ 30ಕ್ಕೆ ಸಾಹೋ ರಿಲೀಸ್

ಆಗಸ್ಟ್ 30ಕ್ಕೆ ಸಾಹೋ ರಿಲೀಸ್

ಪ್ರಭಾಸ್ ಅಭಿನಯದ ಸೋಹೋ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೀಗ ಸಾಹೋ ಆಗಸ್ಟ್ 30ಕ್ಕೆ ತೆರೆಗೆ ಬರುವುದಾಗಿ ಅಧಿಕೃತವಾಗಿ ಹೇಳಿದೆ ಚಿತ್ರತಂಡ. ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಸಾಹೋ ಚಿತ್ರದಿಂದ ಪೈಲ್ವಾನ್ ರಿಲೀಸ್ ಡೇಟ್ ಅತಂತ್ರವಾಗಿದೆ. ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಗೆ ಪ್ಲಾನ್ ಮಾಡಿ ಕೊಂಡಿರುವುದರಿಂದ ಮುಖ್ಯವಾಗಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಲಿದೆ. ಹಾಗಾಗಿ ಸಾಹೋ ರಿಲೀಸ್ ಆದ್ಮೇಲೆಯೆ ಪೈಲ್ವಾನ್ ಎಂಟ್ರಿ ಕೊಡಲಿದೆ.

ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಪೈಲ್ವಾನ್

ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಪೈಲ್ವಾನ್

ಪೈಲ್ವಾನ್ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಚಿತ್ರದ ಗ್ರಾಫಿಕ್ಸ್ ಕೆಲಸಗಳು ಭರದಿಂದ ನಡೆಯುತ್ತಿದ್ದು ಕೊನೆಯ ಹಂತದಲ್ಲಿದೆ. ಪೈಲ್ವಾನ್ ಕೃಷ್ಣ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಆರ್ ಆರ್ ಆರ್ ಮೋಷನ್ ಪಿಕ್ಚರ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ಏಕಕಾಲಕ್ಕೆ ಪೈಲ್ವಾನ್ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ.

More from Filmibeat

English summary
Kannada actor Kichcha Sudeep starrer Pailwaan come up with a new relase date. Pailwan likely to be released on september 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X