'ವಿಕ್ರಾಂತ್ ರೋಣ' ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರ: ವಿಶ್ವದಾದ್ಯಂತ ಕಲೆ ಹಾಕಿದ್ದೆಷ್ಟು?

ಸೌತ್ ಸಿನಿಮಾರಂಗದ ಬಹುನೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ ಆಗಿದೆ. ನಿರೀಕ್ಷೆಯಂತೆ ಮೊದಲ ದಿನ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಯಶಸ್ವಿಯಾಗಿದೆ. 'ವಿಕ್ರಾಂತ್ ರೋಣ' ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದೊಡ್ಡ ಮಟ್ಟದಲ್ಲಿ ಜನ ಸಿನಿಮಾ ನೋಡಿದ್ದಾರೆ.

ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದು. ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಆರ್ಭಟ ಜುಲೈ 28ಕ್ಕೆ ಶುರುವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ, ಸಿನಿಮಾದ ಗಳಿಕೆಯ ಲೆಕ್ಕಾಚಾರದ ಮೇಲೆ ಹೆಚ್ಚಿನ ಕುತೂಹಲ ಇದ್ದೇ ಇದೆ.

'ವಿಕ್ರಾಂತ್ ರೋಣ' ಸಿನಿಮಾದ ಮೊದಲ ದಿನದ ಗಳಿಕೆ ಎಲ್ಲೆಲ್ಲಿ ಎಷ್ಟು ಎನ್ನುವ ಅಂದಾಜಿನ ಲೆಕ್ಕಾಚಾರ ಹೊರ ಬಂದಿದೆ. ಕರ್ನಾಟಕದಲ್ಲೇ ಸುಮಾರು 18 ಕೋಟಿ ರೂ.ಗಿಂತಲೂ ಹೆಚ್ಚಿನ ಗಳಿಕೆ ಕಂಡ 'ವಿಕ್ರಂತ್ ರೋಣ'ನ ಅಬ್ಬರ ವಿಶ್ವದಾದ್ಯಂತ ಹೇಗಿದೆ ಎನ್ನುವುದನ್ನು ಮುಂದೆ ಓದಿ...

'ವಿಕ್ರಾಂತ್ ರೋಣ' ಕಲೆಕ್ಷನ್ 30 ಕೋಟಿ ರೂ. ಪ್ಲಸ್!

'ವಿಕ್ರಾಂತ್ ರೋಣ' ಕಲೆಕ್ಷನ್ 30 ಕೋಟಿ ರೂ. ಪ್ಲಸ್!

'ವಿಕ್ರಾಂತ್ ರೋಣ' ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಅದರಂತೆಯೇ ಮೊದಲ ದಿನ ಸಮಾಧಾನಕರ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ವಿಶ್ವದಾದ್ಯಂತ ಎಷ್ಟು ಗಳಿಕೆ ಕಂಡಿದೆ ಎನ್ನುವ ಬಾಕ್ಸಾಫೀಸ್ ಲೆಕ್ಕಾಚಾರ ಹೊರ ಬಿದ್ದಿದೆ. ಮೊದಲ ದಿನ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸರಿ ಸುಮಾರು 30 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನುವ ಲೆಕ್ಕಾಚಾರ ಹೊರ ಬಿದ್ದಿದೆ.

ಇಂಡಿಯಾದಲ್ಲಿ 'ವಿಕ್ರಾಂತ್ ರೋಣ' ₹25 ಕೋಟಿ ಪ್ಲಸ್!

ಇಂಡಿಯಾದಲ್ಲಿ 'ವಿಕ್ರಾಂತ್ ರೋಣ' ₹25 ಕೋಟಿ ಪ್ಲಸ್!

ಇನ್ನು ಭಾರತದಾದ್ಯಂತ ವಿಕ್ರಾಂತ್ ರೋಣ ಅಬ್ಬರ ಮೊದಲ ದಿನ ಸದ್ದು ಮಾಡಿದೆ. ಮೊದಲ ದಿನ ಸಿನಿಮಾದ ಗಳಿಕೆ ಭಾರತದಲ್ಲಿಯೂ ತಕ್ಕಮಟ್ಟಿಗೆ ಇದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಒಂದು ರೇಂಜಿಗೆ ಗಳಿಕೆ ಕಂಡಿದೆ. 'ವಿಕ್ರಾಂತ್ ರೋಣ' ಮೊದಲ ದಿನ ಭಾರತದಾದ್ಯಂತ ಸುಮಾರು 25 ಕೋಟಿ ರೂ. ವರೆಗೂ ಗಳಿಕೆ ಕಂಡಿದೆ ಎನ್ನುವ ವರದಿ ಬಂದಿದೆ.

ಕರ್ನಾಟಕದಲ್ಲಿ ₹15 ರಿಂದ ₹18 ಕೋಟಿ!

ಕರ್ನಾಟಕದಲ್ಲಿ ₹15 ರಿಂದ ₹18 ಕೋಟಿ!

ಇನ್ನು 'ವಿಕ್ರಾಂತ್ ರೋಣ' ಕಲೆಕ್ಷನ್‌ನಲ್ಲಿ ಹೆಚ್ಚಿನ ಪಾಲು ಕರ್ನಾಟಕದ್ದೇ. ಮೊದಲ ದಿನ ಕರುನಾಡಿನ ಜನ 'ವಿಕ್ರಾಂತ್ ರೋಣ' ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿಯೇ 'ವಿಕ್ರಾಂತ್ ರೋಣ' ಅತಿ ಹೆಚ್ಚು ಗಳಿಕೆಯನ್ನು ಕಂಡಿದೆ. ಕರ್ನಾಟಕದಲ್ಲಿ ಒಟ್ಟಾರೆ 'ವಿಕ್ರಾಂತ್ ರೋಣ' ಗಳಿಸಿರುವ ಮೊತ್ತ ಸುಮಾರು 15 ರಿಂದ 18 ಕೋಟಿ ರೂ. ಎನ್ನಲಾಗಿದೆ.

ಹಿಂದಿ, ತೆಲುಗು, ತೆಲುಗು ಕಲೆಕ್ಷನ್ ಎಷ್ಟು?

ಹಿಂದಿ, ತೆಲುಗು, ತೆಲುಗು ಕಲೆಕ್ಷನ್ ಎಷ್ಟು?

ಕರ್ನಾಟಕ ಬಿಟ್ಟರೆ 'ವಿಕ್ರಾಂತ್ ರೋಣ' ಚಿತ್ರಕ್ಕೆ ಹೆಚ್ಚಿನ ಕ್ರೇಜ್ ಇದ್ದಿದ್ದು ತೆಲುಗಿನಲ್ಲಿ. ಹಾಗಾಗಿ ಆಂಧ್ರ ತೆಲಂಗಾಣದಲ್ಲಿ ಈ ಸಿನಿಮಾ ಸುಮಾರು ₹2 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನಲಾಗಿದೆ. ಇನ್ನುಳಿದಂತೆ ಕೇರಳ, ತಮಿಳುನಾಡಿನಲ್ಲಿ 1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ. ಜೊತೆಗೆ ಉತ್ತರದಲ್ಲೂ ಒಂದಷ್ಟು ಸಿನಿಮಾದ ಗಳಿಕೆ ಕೋಟಿ ಲೆಕ್ಕದಲ್ಲಿ ಇದೆ. ಇನ್ನುಳಿದಂತೆ ವಿದೇಶಗಳಿಂದ ಒಂದಷ್ಟು ಕಲೆಕ್ಷನ್ ಮಾಡಿಕೊಂಡಿದೆ 'ವಿಕ್ರಾಂತ್ ರೋಣ'. ಇದನ್ನೆಲ್ಲಾ ಸೇರಿ ಮೊದಲ ದಿನ 'ವಿಕ್ರಾಂತ್ ರೋಣ' ಗಳಿಸಿದ್ದು ಸುಮಾರು 30 ಕೋಟಿ ರೂ. ಎನ್ನಲಾಗಿದೆ.

ವಿಕ್ರಾಂತ್ ರೋಣ ಬಜೆಟ್ ₹94 ಕೋಟಿ!

ವಿಕ್ರಾಂತ್ ರೋಣ ಬಜೆಟ್ ₹94 ಕೋಟಿ!

'ವಿಕ್ರಾಂತ್ ರೋಣ' ಸಿನಿಮಾ ಗುರುವಾರ ತೆರೆಗೆ ಬಂದಿದೆ. ಹಾಗಾಗಿ ಗಳಿಕೆಯಲ್ಲಿ ದೊಡ್ಡ ಮಟ್ಟದ ದಾಖಲೆ ಕಂಡುಬಂದಿಲ್ಲ. ಆದರೆ ಈ ಸಿನಿಮಾ ಮೊದಲ ವೀಕೆಂಡ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುವ ಅವಕಾಶವಿದೆ. ಮೊದಲ ವೀಕೆಂಡ್ ಬಳಿಕ ಸಿನಿಮಾದ ಗಳಿಕೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಇನ್ನು ಈ ಚಿತ್ರಕ್ಕೆ ಸುಮಾರು ₹94 ಕೋಟಿ ತನಕ ಬಂಡವಾಳ ಹೂಡಲಾಗಿದೆ ಎನ್ನಲಾಗಿದೆ. ಮೊದಲ ವಾರಂತ್ಯದಲ್ಲಿ ಈ ಚಿತ್ರ ಬಂಡವಾಳವನ್ನು ಹಿಂದಿರುಗಿಸುವ ಸಾಧ್ಯತೆ ಇದೆ.

More from Filmibeat

English summary
Kichcha Sudeep Starrer Vikrant Rona Day 1 Box Office Collection Report Worldwide,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X