'ವಿಕ್ರಾಂತ್ ರೋಣ' 2ನೇ ದಿನದ ಗಳಿಕೆ ಲೆಕ್ಕಾಚಾರ!

ಸೌತ್ ಸಿನಿಮಾರಂಗದ ಬಹುನೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ ಆಗಿದೆ. ನಿರೀಕ್ಷೆಯಂತೆ ಮೊದಲ ದಿನ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ವಿಕ್ರಾಂತ್ ರೋಣ ಸಿನಿಮಾ ಯಶಸ್ವಿಯಾಗಿದೆ. ಸಿನಿಮಾ ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಎತಡನೇ ದಿನದ ಗಳಿಕೆ ಲೆಕ್ಕಾಚಾರ ಹೊರ ಬಂದಿದೆ.

Recommended Video

Vikrant Rona Day 2 Collection | 2ನೇ ದಿನದ ಗಳಿಕೆ ಹೇಗಿದೆ . | Kiccha Sudeep Filmibeat Kannada

ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದು. ವಿಶ್ವದಾದ್ಯಂತ ವಿಕ್ರಂತ್ ರೋಣ ಆರ್ಭಟ ಜುಲೈ 28ಕ್ಕೆ ಶುರುವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ, ಸಿನಿಮಾದ ಗಳಿಕೆಯ ಲೆಕ್ಕಾಚಾರದ ಮೇಲೆ ಹೆಚ್ಚಿನ ಕುತೂಹಲ ಇದ್ದೇ ಇದೆ.

ವಿಕ್ರಾಂತ್ ರೋಣ ಸಿನಿಮಾದ ಎರನೇ ದಿನದ ಗಳಿಕೆ ಕೊಂಚ ಕುಂದಿದೆ. ಕರ್ನಾಟಕದಲ್ಲೇ ಮೊದಲ ದಿನದ ಗಳಿಕೆಯಲ್ಲಿ ಅರ್ಧದಷ್ಟು ಕುಸಿದಿದೆ. ಇನ್ನು ವೀಕೆಂಡ್‌ನಲ್ಲಿ ಈ ಗಳಿಕೆಯ ಲೆಕ್ಕ ಹೆಚ್ಚಾಗವ ಸಾಧ್ಯತೆ ಇದೆ. ವಿಕ್ರಾಂತ್ ರೋಣನ ಅಬ್ಬರ ವಿಶ್ವದಾದ್ಯಂತ ಹೇಗಿದೆ ಎನ್ನುವುದನ್ನು ಮುಂದೆ ಓದಿ...

ವಿಶ್ವದಾದ್ಯಂತ ₹45 ಕೋಟಿ ಪ್ಲಸ್!

ವಿಶ್ವದಾದ್ಯಂತ ₹45 ಕೋಟಿ ಪ್ಲಸ್!

'ವಿಕ್ರಾಂತ್ ರೋಣ' ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಅದರಂತೆಯೇ ಮೊದಲ ದಿನ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ವಿಶ್ವದಾದ್ಯಂತ ಎಷ್ಟು ಗಳಿಕೆ ಕಂಡಿದೆ ಎನ್ನುವ ಬಾಕ್ಸಾಫೀಸ್ ಲೆಕ್ಕಾಚಾರ ಹೊರ ಬಿದ್ದಿದೆ. ಎರಡನೇ ದಿನ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸರಿ ಸುಮಾರು ₹45 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನಲಾಗಿದೆ. ಮೊದಲ ದಿನ ವಿಕ್ರಾಂತ್ ರೋಣ ₹35 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದ್ದು, ಎರಡನೇ ದಿನಕ್ಕೆ ₹45 ರಿಂದ ₹47 ಕೋಟಿ ರೂ ತನಕ ಗಳಿಸಿದೆ.

2ನೇ ದಿನದ ಗಳಿಕೆ ₹12 ರಿಂದ ₹14 ಕೋಟಿ!

2ನೇ ದಿನದ ಗಳಿಕೆ ₹12 ರಿಂದ ₹14 ಕೋಟಿ!

ಇನ್ನು ಭಾರತದಾದ್ಯಂತ ವಿಕ್ರಾಂತ್ ರೋಣ ಅಬ್ಬರ ಮೊದಲ ದಿನಕ್ಕಿಂತಕ್ಕೂ ಎರಡನೇ ದಿನ ಕೊಂಚ ಕುಂದಿದೆ. ಎರಡನೇ ದಿನ ಈ ಸಿನಿಮಾ ಒಟ್ಟಾರೆ ₹12 ರಿಂದ ₹14 ಕೋಟಿ ರೂ ತನಕ ಮಾತ್ರ ಗಳಿಕೆ ಕಂಡಿದೆ. ಹಾಗಾಗಿ ಎರಡೂ ದಿನದ ಒಟ್ಟಾರೆ ಗಳಿಕೆ ಲೆಕ್ಕಾ ₹50 ಕೋಟಿಯ ಗಡಿ ಮುಟ್ಟಲು ಸಾಧ್ಯವಾಗಿಲ್ಲಿ. ಎರಡನೇ ದಿನ ಭಾರತದಾದ್ಯಂತ 10 ಕೋಟಿ ರೂ ತನಕ ಗಳಿಕೆ ಕಂಡಿದೆ. ಇನ್ನು ಕರ್ನಾಟಕದಲ್ಲಿ ಸುಮಾರು ₹7 ಕೋಟಿ ಗಳಿಕೆ ಕಂಡಿದೆ ಎನ್ನುವ ಮಾಹಿತಿ ಇದೆ.

ಹಿಂದಿಯಲ್ಲಿ 2ನೇ ದಿನ ಗಳಿಸಿದ್ದು ₹75 ಲಕ್ಷ!

ಹಿಂದಿಯಲ್ಲಿ 2ನೇ ದಿನ ಗಳಿಸಿದ್ದು ₹75 ಲಕ್ಷ!

ಕರ್ನಾಟಕ ಬಿಟ್ಟರೆ ವಿಕ್ರಾಂತ್ ರೋಣ ಆಂಧ್ರ, ತೆಲಂಗಾಣದಲ್ಲಿ, ತಮಿಳುನಾಡು, ಕೇರಳ, ಮತ್ತು ಹಿಂದಿ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಕುಂದಿದೆ. ಮೊದಲ ದಿನ ₹1 ಕೋಟಿ ಗಳಿಕೆ ಕಂಡಿದ್ದು ಎರಡನೇ ದಿನಕ್ಕೆ ಗಳಿಕೆಯ ಲೆಕ್ಕ ಲಕ್ಷಗಳಲ್ಲಿ ಇದೆ. ಹಿಂದಿ ಬಾಕ್ಸಾಫೀಸ್‌ನಲ್ಲಿ ಎರಡನೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಸುಮಾರು ₹75 ಲಕ್ಷದಷ್ಟು ಮಾತ್ರವೇ ಕಲೆ ಹಾಕಿದೆ. ಮೊದಲ ದಿನ ಹಿಂದಿಯಲ್ಲಿ ₹1 ಕೋಟಿ ರೂ ಗಳಿಕೆ ಕಂಡಿತ್ತು.

ವಾರಾಂತ್ಯದಲ್ಲಿ ವಿಕ್ರಾಂತ್ ರೋಣ ಜಾದು!

ವಾರಾಂತ್ಯದಲ್ಲಿ ವಿಕ್ರಾಂತ್ ರೋಣ ಜಾದು!

ವಿಕ್ರಾಂತ್ ರೋಣ ಸಿನಿಮಾ ಗುರುವಾರ ತೆರೆಗೆ ಬಂದಿದೆ. ಹಾಗಾಗಿ ಗಳಿಕೆಯಲ್ಲಿ ದೊಡ್ಡ ಮಟ್ಟದ ದಾಖಲೆ ಕಂಡುಬಂದಿಲ್ಲ. ಇದರ ಪರಿಣಾಮ ಎರಡನೇ ದಿನ ಶುಕ್ರವಾರವು ಕೂಡ ಕಲೆಕ್ಷನ್ ಕುಂದಿದೆ. ಆದರೆ ವಾರಾಂತ್ಯದಲ್ಲಿ ಚಿತ್ರದ ಗಳಿಕೆಯ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ. ಹಾಗಾಗಿ ಸೋವಾರದ ತನಕ ಎಷ್ಟು ಗಳಿಕೆ ಆಗಲಿದೆ ಎನ್ನುವುದರ ಮೇಲೆ ಸಿನಿಮಾದ ಯಶಸ್ಸು ನಿಂತಿದೆ.

ವಿಕ್ರಾಂತ್ ರೋಣ ಗೆಲುವಿಗೆ ಇನ್ನೆಷ್ಟು ಬೇಕು?

ವಿಕ್ರಾಂತ್ ರೋಣ ಗೆಲುವಿಗೆ ಇನ್ನೆಷ್ಟು ಬೇಕು?

ವಿಕ್ರಂತ್ ರೋಣ ಸಿನಿಮಾ ಬಾಕ್ಸಾಫಿಸ್ ಲೆಕ್ಕ ಬಿಟ್ಟರೆ ಈಗಗಲೇ ಹಲವು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಬೇಕು ಅಂದರೆ ಸುಮಾರು 75 ಕೋಟಿ ರೂ ಅಧಿಕ ಮೊತ್ತವನ್ನು ಕಲೆ ಹಾಕಬೇಕಾಗುತ್ತದೆ. ಯಾಕೆಂದರೆ ಈ ಚಿತ್ರಕ್ಕೆ ಸುಮಾರು ₹94 ಕೋಟಿ ತನಕ ಬಂಡವಾಳ ಹೂಡಲಾಗಿದೆ. ಮೊದಲ ವಾರಂತ್ಯದ ನಂತರ ಚಿತ್ರ ಬಂಡವಾಳವನ್ನು ಹಿಂದಿರುಗಿಸುವ ಸಾಧ್ಯತೆ ಇದೆ.

More from Filmibeat

English summary
Kichcha Sudeep Starrer Vikrant Rona Day 2 Box Office Collection Report Worldwide, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X