'ವಿಕ್ರಾಂತ್ ರೋಣ' 4ನೇ ದಿನದ ಗಳಿಕೆ ಎಷ್ಟು: 100 ಕೋಟಿ ಕ್ಲಬ್ ಸೇರುತ್ತಾ?

ಸೌತ್ ಸಿನಿಮಾರಂಗದ ಬಹುನೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ ಆಗಿದೆ. ನಿರೀಕ್ಷೆಯಂತೆ ಮೊದಲ ದಿನ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ವಿಕ್ರಾಂತ್ ರೋಣ ಸಿನಿಮಾ ಯಶಸ್ವಿಯಾಗಿದೆ. ಸಿನಿಮಾ ರಿಲೀಸ್ ಆಗಿ 5ನೇ ದಿನಕ್ಕೆ ಕಾಲಿಟ್ಟಿದ್ದು, 4ನೇ ದಿನದ ಗಳಿಕೆ ಲೆಕ್ಕಾಚಾರ ಹೊರ ಬಂದಿದೆ.

ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದು. ವಿಶ್ವದಾದ್ಯಂತ ವಿಕ್ರಂತ್ ರೋಣ ಆರ್ಭಟ ಜುಲೈ 28ಕ್ಕೆ ಶುರುವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ, ಸಿನಿಮಾದ ಗಳಿಕೆಯ ಲೆಕ್ಕಾಚಾರದ ಮೇಲೆ ಹೆಚ್ಚಿನ ಕುತೂಹಲ ಇದ್ದೇ ಇದೆ.

'ವಿಕ್ರಾಂತ್ ರೋಣ' ಸಿನಿಮಾದ ನಾಲ್ಕು ದಿನದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ ಎನ್ನಲಾಗುತ್ತಿದೆ. ಎರಡನೇ ದಿನ ಕೊಂಚ ಮಂಕಾಗಿದ್ದ 'ವಿಕ್ರಾಂತ್ ರೋಣ' 3 ಮತ್ತು 4ನೇ ದಿನಕ್ಕೆ ಉತ್ತಮ ಗಳಿಕೆ ಕಂಡಿದೆ. ನಿರೀಕ್ಷೆಯಂತೆ ಈ ಸಿನಿಮಾದ ಗಳಿಕೆ ವೀಕೆಂಡ್‌ನಲ್ಲಿ ಹೆಚ್ಚಾಗಿದೆ. ಆದರೆ ವೀಕೆಂಡ್ ಬಳಿಕ ಸಿನಿಮಾದ ಹೇಗಿದೆ, 'ವಿಕ್ರಾಂತ್ ರೋಣ'ನ ಅಬ್ಬರ ವಿಶ್ವದಾದ್ಯಂತ ಹೇಗಿದೆ ಎನ್ನುವುದನ್ನು ಮುಂದೆ ಓದಿ...

'ವಿಕ್ರಾಂತ್ ರೋಣ' ಗೆದ್ದನೇ?

'ವಿಕ್ರಾಂತ್ ರೋಣ' ಗೆದ್ದನೇ?

'ವಿಕ್ರಾಂತ್ ರೋಣ' ಸಿನಿಮಾ ಬಾಕ್ಸಾಫೀಸ್ ರೆಕಾರ್ಡ್ ಮುಂದುವರೆಸಿದೆ. ಮೊದಲ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. 'ವಿಕ್ರಾಂತ್ ‌ರೋಣ' ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ, ಬಾಕ್ಸಾಫೀಸ್‌ನಲ್ಲಿಯೂ ಸಿನಿಮಾ ಸದ್ದು ಮಾಡುತ್ತಿದೆ. ಮೊಲದ ದಿನ ಉತ್ತಮ ಓಪನಿಂಗ್ ಪಡೆದುಕೊಂಡ 'ವಿಕ್ರಾಂತ್ ರೋಣ' ಬಾಕ್ಸಾಫೀಸ್ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಚಿತ್ರದ ನಿರ್ಮಾಪಕ ಜಾಕ್ ಮಂಜು ಕೂಡ ಸಿನಿಮಾದ ಕಲೆಕ್ಷನ್ ಬಗ್ಗೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ. ನಾಲ್ಕು ದಿನಕ್ಕೆ ಸಿನಿಮಾ ತಂಡದ ಬಂಡವಾಳ ವಾಪಸ್ ಬಂದಿದೆ ಎನ್ನಲಾಗಿದೆ.

100 ಕೋಟಿ ಗಳಿಕೆ ಕಾಣಲಿದ್ಯಾ?

100 ಕೋಟಿ ಗಳಿಕೆ ಕಾಣಲಿದ್ಯಾ?

ಸಿನಿಮಾ ಮೂರನೆ ದಿನಕ್ಕೆ 75 ಕೋಟಿ ರೂ. ಗಳಿಕೆ ಕಂಡಿದೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಮಾಧ್ಯಮದ ಸಂದರ್ಶನದಲ್ಲಿ ಹಂಚಿಕೊಂಡಿತ್ತು. ಚಿತ್ರಕ್ಕೆ ಸುಮಾರು 94 ಕೋಟಿ ರೂ ಬಂಡವಾಳ ಹೂಡಲಾಗಿದೆ ಎನ್ನಲಾಗಿದೆ. ಈಗ ಸಿನಿಮಾ ಸುಮಾರು 93 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ. ಇನ್ನು ವಿಶ್ವದಾದ್ಯಂತ ಭಾನುವಾರ ಅಂದರೆ ನಾಲ್ಕನೇ ದಿನ 18 ರಿಂದ 20 ಕೋಟಿ ಗಳಿಸಿದೆ ಎನ್ನಲಾಗಿದೆ. ಇದು ಸದ್ಯಕ್ಕೆ ಹರಿದಾಡುತ್ತಿರುವ 'ವಿಕ್ರಾಂತ್ ರೋಣ' ಬಾಕ್ಸಾಫೀಸ್ ಕಲೆಕ್ಷನ್ ವಿಚಾರ.

30%, 40% ಕುಸಿತ!

30%, 40% ಕುಸಿತ!

ಜುಲೈ 28ರಂದು, ಸಿನಿಮಾ ರಿಲೀಸ್ ಆದ ಮೊದಲ ದಿನ ಉತ್ತಮವಾದ ಗಳಿಕೆಯನ್ನು ಕಂಡಿದೆ. ಚಿತ್ರತಂಡದ ಅಧಿಕೃತ ಮಾಹಿತೆಯಂತೆ, ಮೊದಲ ದಿನ ಸಿನಿಮಾ 32 ರಿಂದ 35 ಕೋಟಿ ರೂ. ತನಕ ಗಳಿಕೆ ಮಾಡಿತು. ಇನ್ನು ವಾರಂತ್ಯದಲ್ಲೂ ಕೂಡ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಏನು ಕಂಡು ಬಂದಿಲ್ಲ. ಆದರೆ ಮೊದಲ ವಾರಾಂತ್ಯ ಮುಗಿದ ಮೇಲೆ ಸಿನಿಮಾದ ಗಳಿಕೆ ಮೇಲೆ ದೊಡ್ಡ ಪರಿಣಾಮ ಬೀಡಿದೆ. ಯಾಕೆಂದರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಶೇಕಡಾ 30, 40ಕ್ಕೆ ಕುಸಿದಿದೆ ಎನ್ನುವ ಮಾಹಿತಿ ವಿತರಕ, ಪ್ರದರ್ಶಕ ವಲಯದಿಂದ ಕೇಳಿಬಂದಿದೆ.

'ವಿಕ್ರಾಂತ್ ರೋಣ' 100 ಕೋಟಿ ಗಡಿ ಮುಟ್ಟಲಿದ್ಯಾ?

'ವಿಕ್ರಾಂತ್ ರೋಣ' 100 ಕೋಟಿ ಗಡಿ ಮುಟ್ಟಲಿದ್ಯಾ?

'ವಿಕ್ರಾಂತ್ ರೋಣ' ಸಿನಿಮಾ ಸದ್ಯ 90 ಕೋಟಿಯ ಗಡಿ ದಾಟಿದೆ ಎನ್ನುವ ಬಗ್ಗೆ ವರದಿಗಳು ಬಂದಿವೆ. ಆದರೆ ಸದ್ಯ ಸಿನಿಮಾದ ಮುಂದೆ ಇರುವುದು 100 ಕೋಟಿಯ ಸವಾಲು. ಮೊದಲ ವಾರಾಂತ್ಯದ ಬಳಿಕ ಚಿತ್ರದ ಬಗ್ಗೆ ಇದ್ದ ಕ್ರೇಜ್ ಕಡಿಮೆ ಆಗಿದೆ. ಶೋಗಳ ಸಂಖ್ಯೆ ಕೂಡ ಕಡಿಮೆ ಆಗಿದೆ. ಹಾಗಾಗಿ ಈಗ ಆತಂಕ ಶುರುವಾಗಿದ್ದು, 'ವಿಕ್ರಾಂತ್ ರೋಣ' 100 ಕೋಟಿಯ ಗಡಿ ಮುಟ್ಟಿವುದು ಅನುಮಾನ ಎನ್ನುವ ಅಭಿಪ್ರಾಯಗಳು ಚಿತ್ರರಂಗದಲ್ಲಿ ವ್ಯಕ್ತವಾಗಿದೆ.

More from Filmibeat

English summary
Kichcha Sudeep Starrer Vikrant Rona Day 4 Box Office Collection Report Worldwide, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X