Vikrant Rona Release Date : 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕ ಪ್ರಕಟ: ಡೆವಿಲ್ ಆಗಮನಕ್ಕೆ ಸಜ್ಜಾಗಿ!

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕ ಯುಗಾದಿಯ ಶುಭ ಸಂದರ್ಭದಲ್ಲಿ ಘೋಷಿಸಲಾಗಿದೆ.

ಈ ಹಿಂದೆಯೇ ಸಿನಿಮಾದ ದಿನಾಂಕ ಪ್ರಕಟ ಮಾಡಲಾಗಿತ್ತು, ಆದರೆ ಕೋವಿಡ್ ಕಾರಣದಿಂದಾಗಿ ಬಿಡುಗಡೆ ಮುಂದೂಡಲ್ಪಟ್ಟು, ಈಗ ಹೊಸ ದಿನಾಂಕ ಘೋಷಿಸಲಾಗಿದ್ದು, ಅದ್ಧೂರಿಯಾಗಿ 'ವಿಕ್ರಾಂತ್ ರೋಣ' ತೆರೆಗೆ ಬರಲಿದೆ.

ಸಿನಿಮಾ ಎಂದು ಬಿಡುಗಡೆ ಆಗಲಿದೆ ಎಂಬುದನ್ನು ತಿಳಿಸಲು ಇಂದು ರಿಲೀಸ್ ಡೇಟ್ ಟೀಸರ್ ಅನ್ನೇ ಚಿತ್ರತಂಡ ಬಿಡುಗಡೆ ಮಾಡಿದೆ. ಟೀಸರ್‌ನಲ್ಲಿ ನಿರ್ದೇಶಕ ಅನುಪ್ ಭಂಡಾರಿ ಪುತ್ರಿ ಸುದೀಪ್ ಪಾತ್ರ ವಿಕ್ರಾಂತ್ ರೋಣನ ಬಗ್ಗೆ ಪರೋಕ್ಷವಾಗಿ ವರ್ಣನೆ ಮಾಡುವ ದೃಶ್ಯ ಸುದೀಪ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

Kichcha Sudeep Starrer Vikrant Rona Movie Releasing on July 28 Worldwide

ಹುಲಿಗಿಂತಲೂ ಭಯಾನಕ, ಚಿರತೆಗಿಂತಲೂ ವೇಗ, ಅವ ಬಂದರೆ ಇದ್ದವರಿಗೆಲ್ಲ ಹೆದರಿಕೆ ಆಗುತ್ತದೆ ಯಾರವನು? ಅವನೇ ಡೆವಿಲ್, ಆ ಡೆವಿಲ್ಲೇ 'ವಿಕ್ರಾಂತ್ ರೋಣ'. ಈ ಅದ್ಧೂರಿ ಪ್ಯಾನ್ ಇಂಡಿಯಾ ಸಿನಿಮಾವು ಜುಲೈ 28 ಕ್ಕೆ ವಿಶ್ವದಾದ್ಯಂತ 3ಡಿಯಲ್ಲಿ ಬಿಡುಗಡೆ ಆಗಲಿದೆ.

Recommended Video

Vikrant Rona Teaser | ಟೀಸರ್ ನಿಂದ ಗಮನ ಸೆಳೆದ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ | Sudeep | Anup Bhandari

ಸಮುದ್ರದಲ್ಲಿ ದೊಡ್ಡ ದೋಣಿಯೊಂದರಲ್ಲಿ ಕಡಲ್ಗಳ್ಳರ ಎದುರುಗೊಳ್ಳುವ ಸುದೀಪ್‌ರ ದೃಶ್ಯ, ದುಷ್ಟರೊಂದಿಗೆ ಅವರು ಕಾದಾಡುತ್ತಿರುವ ಕೆಲವು ಸಣ್ಣ ತುಣುಕುಗಳು ಸಹ ರಿಲೀಸ್ ಡೇಟ್ ಟೀಸರ್‌ನಲ್ಲಿದೆ. ಸುದೀಪ್ ಕಣ್ಣಿನ ಮೇಲೆ ಬ್ಯಾಟರಿಯ ಬೆಳಕು ಹಾದು ಹೋಗುವ ದೃಶ್ಯವಂತೂ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡುತ್ತಿದೆ.

'ವಿಕ್ರಾಂತ್ ರೋಣ' ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇಂದಿನ ರಿಲೀಸ್ ಡೇಟ್ ಟೀಸರ್ ಅನ್ನು ನಟ ಚಿರಂಜೀವಿ, ಮೋಹನ್‌ಲಾಲ್, ಸಲ್ಮಾನ್ ಖಾನ್ ಹಾಗೂ ತಮಿಳಿನ ಸಿಂಭು ಅವರುಗಳು ಬಿಡುಗಡೆ ಮಾಡಿದ್ದು ವಿಶೇಷ. ಕನ್ನಡದ ಟೀಸರ್ ಅನ್ನು ಸುದೀಪ್ ಬಿಡುಗಡೆ ಮಾಡಿದರು.

'ವಿಕ್ರಾಂತ್ ರೋಣ' ಸಿನಿಮಾ ಬಹಳ ಭಿನ್ನ ಹಾಗೂ ಕುತೂಹಲಕಾರಿ ಕತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿ ಸುದೀಪ್‌ರದ್ದು ಡೆವಿಲ್ ಪಾತ್ರ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಕುತೂಹಲಕಾರಿ ಸಾಹಸ ಮಯ ಯಾತ್ರೆಯೂ ಇರಲಿದೆ.

ಸಿನಿಮಾವನ್ನು 'ರಂಗಿತರಂಗ' ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದು, ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್, ರವಿಶಂಕರ್ ಗೌಡ, ಮಧೂಸೂದನ್ ರಾವ್, ವಾಸುಕಿ ವೈಭವ್ ಇನ್ನೂ ಹಲವರು ನಟಿಸಿದ್ದಾರೆ. ಒಂದು ವಿಶೇಷ ಪಾತ್ರ ಹಾಗೂ ಹಾಡಿನಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Sudeep starer Vikranth Rona movie releasing on July 28 in 3D in Kannada, Tamil, Telugu, Malayalam, English and Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X