twitter
    For Quick Alerts
    ALLOW NOTIFICATIONS  
    For Daily Alerts

    ಪಾಕಿಸ್ತಾನದಲ್ಲೂ ರಿಲೀಸ್ ಆಗುತ್ತಾ 'ವಿಕ್ರಾಂತ್ ರೋಣ'? ನಿರ್ಮಾಪಕರು ಹೇಳಿದ್ದೇನು?

    |

    'ವಿಕ್ರಾಂತ್ ರೋಣ' ಸಿನಿಮಾ ಅದ್ಯಾವಾಗ ನೋಡುತ್ತೇವೋ ಅಂತ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ ನಿರ್ಮಾಣ ಸಂಸ್ಥೆ ಆ ಸಿನಿಮಾವನ್ನು ವಿಶ್ವದ ಮೂಲೆ ಮೂಲೆಯಲ್ಲಿರುವ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನ ಪಡುತ್ತಿದೆ.

    ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಭಾರತವೂ ಸೇರಿದಂತೆ ವಿದೇಶದಲ್ಲಿಯೂ ಬಿಡುಗಡೆ ಮಾಡುತ್ತಿದ್ದಾರೆ. ಹಲವು ದಿನಗಳ ಹಿಂದೆನೇ ವಿದೇಶದಲ್ಲಿ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ಅಭಿಮಾನಿಗಳು ಕೊನೆಗೂ ನಿರಾಳ: 'ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಆರಂಭ!ಅಭಿಮಾನಿಗಳು ಕೊನೆಗೂ ನಿರಾಳ: 'ವಿಕ್ರಾಂತ್ ರೋಣ' ಅಡ್ವಾನ್ಸ್ ಬುಕಿಂಗ್ ಆರಂಭ!

    ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಲ್ಲಿ ಬಿಡುಗಡೆಯಾಗುತ್ತೆ ಅನ್ನುವ ಕುತೂಹಲ ಸಹಜ. ನಿರ್ಮಾಪಕ ಜಾಕ್ ಮಂಜು ವಿದೇಶದಲ್ಲಿ ರಿಲೀಸ್ ಮಾಡುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

    ದರ್ಶನ್ 'ಕುರುಕ್ಷೇತ್ರ' ನಂತರ ಸುದೀಪ್ 'ವಿಕ್ರಾಂತ್ ರೋಣ': ಬಯಲಾಯ್ತು 3D ವರ್ಷನ್ ಸೀಕ್ರೇಟ್ಸ್!ದರ್ಶನ್ 'ಕುರುಕ್ಷೇತ್ರ' ನಂತರ ಸುದೀಪ್ 'ವಿಕ್ರಾಂತ್ ರೋಣ': ಬಯಲಾಯ್ತು 3D ವರ್ಷನ್ ಸೀಕ್ರೇಟ್ಸ್!

    ವಿದೇಶದಲ್ಲಿ ಎಲ್ಲೆಲ್ಲಿ 'ವಿಕ್ರಾಂತ್ ರೋಣ' ರಿಲೀಸ್

    ವಿದೇಶದಲ್ಲಿ ಎಲ್ಲೆಲ್ಲಿ 'ವಿಕ್ರಾಂತ್ ರೋಣ' ರಿಲೀಸ್

    ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' (ಜುಲೈ 28)ರಂದು ಬಿಡುಗಡೆಯಾಗುತ್ತಿದೆ. ಪ್ಯಾನ್ ಸಿನಿಮಾ ಆಗಿರೋದ್ರಿಂದ ವಿದೇಶದಲ್ಲೂ ಏಕಕಾಲಕ್ಕೆ ರಿಲೀಸ್ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಿರ್ಮಾಪಕ ಜಾಕ್ ಮಂಜು ಸುಮಾರು 26 ರಿಂದ 27 ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ವರ್ಲ್ಡ್‌ ವೈಡ್ ರೇಂಜ್‌ನಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಬಹುತೇಕ ಕಡೆ ಟಿಕೆಟ್ ಬುಕಿಂಗ್ ಮಾಡುವ ವಿಚಾರದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನದಲ್ಲಿ ವಿಕ್ರಾಂತ್ ರೋಣ?

    ಪಾಕಿಸ್ತಾನದಲ್ಲಿ ವಿಕ್ರಾಂತ್ ರೋಣ?

    "27 ರಿಂದ 28 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ನೂ ಎರಡು ಮೂರು ದೇಶ ಕನ್ಫರ್ಮ್ ಆಗಬೇಕಿದೆ. ನೇಪಾಳ ನಿನ್ನೆ ತಾನೇ ಕನ್ಫರ್ಮ್ ಆಯ್ತು. ಪಾಕಿಸ್ತಾನದಲ್ಲಿ ರಿಲೀಸ್ ಮಾಡುವ ಕೆಲಸ ಕೂಡ ನಡೆಯುತ್ತಿದೆ. ಮೂರು ತಿಂಗಳಿನಿಂದ ಭಾರತೀಯ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಪಾಕಿಸ್ತಾನದಲ್ಲೂ ರಿಲೀಸ್ ಮಾಡುವುದಕ್ಕೆ ಮಾತುಕತೆ ನಡೆಯುತ್ತಿದೆ." ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ.

    ಎಷ್ಟು ಥಿಯೇಟರ್‌ಗಳಲ್ಲಿ 'ವಿಕ್ರಾಂತ್ ರೋಣ'?

    ಎಷ್ಟು ಥಿಯೇಟರ್‌ಗಳಲ್ಲಿ 'ವಿಕ್ರಾಂತ್ ರೋಣ'?

    'ವಿಕ್ರಾಂತ್ ರೋಣ' ವಿಶ್ವದಾದ್ಯಂತ ಏಕಕಾಲಕ್ಕೆ 3200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗುತ್ತಿದೆ. ಆರು ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಲ್ಲಿ ಎಷ್ಟೆಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗದೆ ಇದ್ದರೂ, ಕರ್ನಾಟಕದಲ್ಲಿ 425ಕ್ಕೂ ಅಧಿಕ ಥಿಯೇಟರ್‌ಗಳು ಫಿಕ್ಸ್ ಆಗಿದೆ. ಇನ್ನು ಹಿಂದಿ ವರ್ಷನ್ 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಾಗೇ ತೆಲುಗಿನಲ್ಲಿ 350 ಸ್ಕ್ರೀನ್, 27 ದೇಶಗಳಲ್ಲಿ 800 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

    3D ಮೋಡಿ

    3D ಮೋಡಿ

    ಕಿಚ್ಚನ ಸಿನಿಮಾ 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ 3ಡಿಯಲ್ಲಿ ಬಿಡುಗಡೆಯಾಗುತ್ತಿರುವುದು ಕಿಕ್ ಕೊಟ್ಟಿದೆ. 3ಡಿಯಲ್ಲಿಯೇ ಸಿನಿಮಾ ನೋಡಲು ಹೆಚ್ಚು ಆಸ್ತಿ ತೋರುತ್ತಿದ್ದಾರೆ. ಈ ಕಾರಣಕ್ಕೆ ಜುಲೈ 28ಕ್ಕೆ 2ಡಿ ಅಥವಾ 3ಡಿ ಯಾವುದಕ್ಕೆ ಎಷ್ಟು ರೆಸ್ಪಾನ್ಸ್ ಸಿಗುತ್ತೆ ಎನ್ನುವುದು ಗೊತ್ತಾಗಲಿದೆ. ಸದ್ಯ, ಸಿನಿಮಾ ಹಾಡು ಹಾಗೂ ಟ್ರೈಲರ್ ರಿಲೀಸ್ ಪ್ರೇಕ್ಷಕರನ್ನು ಸೆಳೆದಿವೆ.

    Recommended Video

    ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet

    English summary
    Kichcha Sudeep Starrer Vikrant Rona Movie Will Release In Pakistan Also, Know More.
    Tuesday, July 26, 2022, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X