For Quick Alerts
  ALLOW NOTIFICATIONS  
  For Daily Alerts

  ವಿಕ್ರಾಂತ್ ರೋಣ ಫೆಬ್ರವರಿ 24ಕ್ಕೆ ರಿಲೀಸ್ ಪಕ್ಕಾ!

  |

  ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್​ ರೋಣ' ಚಿತ್ರವು ಒಂದು. ಕೊರೊನಾ ಹೆಚ್ಚಾಗಿ ಲಾಕ್‌ಡೌನ್‌ ಆದ ಕಾರಣ ಸಿನಿಮಾ ಯಾವಾಗ ರಿಲೀಸ್‌ ಎನ್ನುವ ಗೊಂದಲಗಳು ಉಂಟಾಗಿದ್ದವು. ಈಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಮೊದಲಿನ ಯೋಜನೆ ಪ್ರಕಾರ ಸಿನಿಮಾ ಫೆಬ್ರವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

  ಸುದೀಪ್ ನಟನೆಯ ವಿಕ್ರಾಂತ್ ರೋಣ ಫೆಬ್ರವರಿ ೨೪ಕ್ಕೆ ತೆರೆಕಾಣುತ್ತಾ, ಇಲ್ವಾ?

  ಈ ಸಿನಿಮಾವನ್ನು ಪ್ಯಾನ್​ ಇಂಡಿಯಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ನಿಗದಿತ ದಿನಾಂಕ ಫೆಬ್ರವರಿ 24 ಕ್ಕೆ ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ. ಹಾಗಾಗಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆಯಂತೆ. ಈ ವಿಚಾರವನ್ನು ನಿರ್ಮಾಪಕ ಜಾಕ್ ಮಂಜು ಅವರು ಬಹಿರಂಗ ಪಡಿಸಿದ್ದಾರೆ.

  'ರಂಗಿತರಂಗ' ಖ್ಯಾತಿಯ ನಿರ್ಮಾಪಕ ಅನೂಪ್​ ಭಂಡಾರಿ ಈ ಚಿತ್ರ ನಿರ್ದೇಶನ ಮಾಡಿದ್ದು, ಅಡ್ವೆಂಚರ್ ಮತ್ತು ಆಕ್ಷನ್ ಚಿತ್ರದಲ್ಲಿ ಮುಖ್ಯ ಅಂಶ ಆಗಿರಲಿದೆ. ಸದ್ಯ ಕನ್ನಡದಲ್ಲಿ ರಿಲೀಸ್‌ ಆಗುತ್ತಿರುವ ದೊಡ್ಡ ಸಿನಿಮಾ ಇದೆ, ಹಾಗಾಗಿ ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಚಿತ್ರಕ್ಕೆ ಇದೆ. ಈ ಹಿಂದೆ ವಿಕ್ರಾಂತ್ ರೋಣ ಚಿತ್ರಕ್ಕೆ ಓಟಿಟಿಯಿಂದ ರೂ.100 ಕೋಟಿ ಆಫರ್ ಬಂದಿತ್ತು ಎಂದು ನಿರ್ಮಾಪಕರು ಹೇಳಿ ಕೊಂಡಿದ್ದಾರೆ. ಆದರೆ ಈ ಆಫರ್ ಬೇಡ ಎಂದು ಚಿತ್ರತಂಡ ನಿರಾಕರಿಸಿತ್ತು. ಚಿತ್ರವನ್ನು ಓಟಿಟಿ ಬದಲಿದೆ ಚಿತ್ರಮಂದಿರಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು.

  ವಿಕ್ರಾಂತ್ ರೋಣ 3ಡಿ ಸಿನಿಮಾ ಆಗಿರುವ ಕಾರಣ ಸಿನಿಮಾವನ್ನು ಚಿತ್ರ ಮಂದಿರದಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದೆ. ಹಾಗಾಗಿ ಫೆಬ್ರವರಿ 24ಕ್ಕೆ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಕಿಚ್ಚನನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳ ಬಹುದಾಗಿದೆ.

  English summary
  Kichcha Sudeep Starrer Vikranth Rona Movie Release On February 24th: Team Confirm This,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion