'ವಿಕ್ರಾಂತ್ ರೋಣ' ಡಬ್ಬಿಂಗ್ ಆರಂಭಿಸಿದ ನಟ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಗೆ ಸಜ್ಜಾಗುತ್ತಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಪ್ರಮುಖ ಕಲಾವಿದರು ತಮ್ಮ ಪಾತ್ರಗಳ ಧ್ವನಿಮುದ್ರಿಕೆ ಮಾಡುತ್ತಿದ್ದಾರೆ. ಇದೀಗ, ವಿಕ್ರಾಂತ್ ರೋಣ ಚಿತ್ರದ ನಾಯಕ ನಟ ಕಿಚ್ಚ ಸುದೀಪ್ ಡಬ್ಬಿಂಗ್ ಶುರು ಮಾಡಿದ್ದಾರೆ.

ಬಹಳ ದಿನದ ನಂತರ ಮತ್ತೆ ಸಿನಿಮಾ ಕೆಲಸಕ್ಕೆ ಚಾಲನೆ ಕೊಟ್ಟಿರುವ ಕಿಚ್ಚ, ವಿಕ್ರಾಂತ್ ರೋಣ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಅನಾರೋಗ್ಯದ ಹಿನ್ನೆಲೆ ತಿಂಗಳಿಗೂ ಅಧಿಕ ಸಮಯ ಸಂಪೂರ್ಣವಾಗಿ ವಿಶ್ರಾಂತಿ ಪಡೆದಿದ್ದರು ಸುದೀಪ್. ಈ ನಡುವೆ ರಿಯಾಲಿಟಿ ಶೋಗೂ ಬ್ರೇಕ್ ಹಾಕಿದ್ದರು. ಈಗ, ಸಂಪೂರ್ಣವಾಗಿ ಗುಣಮುಖರಾದ್ಮೇಲೆ ಟಿವಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದರು. ಅದರ ಜೊತೆಯಲ್ಲಿ ಸಿನಿಮಾ ಕೆಲಸನೂ ಆರಂಭಿಸಿದ್ದಾರೆ. ಮುಂದೆ ಓದಿ....

ಸಿನಿಮಾ ಬಹಳ ಖುಷಿ ತಂದಿದೆ

ಸಿನಿಮಾ ಬಹಳ ಖುಷಿ ತಂದಿದೆ

''ಬಹಳ ದಿನಗಳ ನಂತರ ಸಿನಿಮಾವೊಂದಕ್ಕೆ ನಾನು ಡಬ್ಬಿಂಗ್ ಮಾಡ್ತಿದ್ದೇನೆ. ಕೊನೆಗೂ ವಿಕ್ರಾಂತ್ ರೋಣ ಚಿತ್ರದ ನನ್ನ ಪಾತ್ರಕ್ಕೆ ಧ್ವನಿ ನೀಡಿದೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ನಾವು ಬಯಸಿದಂತೆ ತಯಾರಾಗಿರುವುದು ಸಂತಸ ತಂದಿದೆ'' ಎಂದು ಸುದೀಪ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಡಬ್ಬಿಂಗ್ ಮುಗಿಸಿದ ನೀತಾ ಅಶೋಕ್

ಡಬ್ಬಿಂಗ್ ಮುಗಿಸಿದ ನೀತಾ ಅಶೋಕ್

ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿದ ನಟಿ ನೀತಾ ಅಶೋಕ್ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದರು. ''ಡಬ್ಬಿಂಗ್ ವೇಳೆ ವಿಕ್ರಾಂತ್ ರೋಣ ಸಿನಿಮಾ ನೋಡಿದ ನನಗೆ ನಿರೀಕ್ಷೆ, ಉತ್ಸಾಹ, ಸಂತೋಷ, ಕುತೂಹಲ, ರೋಮಾಂಚನ ಎಲ್ಲವೂ 10,000 ಪಟ್ಟು ಹೆಚ್ಚಾಗಿದೆ. ಅನೂಪ್ ಭಂಡಾರಿ ಸರ್ ನಿಮ್ಮ ಕಲ್ಪನೆಗೆ ನನ್ನ ಸಲ್ಯೂಟ್. ಸಂಪೂರ್ಣವಾಗಿ ಸಿನಿಮಾ ನೋಡಿದ್ಮೇಲೆ ರೋಮಾಂಚನ ಉಂಟಾಗುತ್ತದೆ'' ಎಂದು ನೀತಾ ಅಶೋಕ್ ಬರೆದುಕೊಂಡಿದ್ದರು.

ಜೀವ ನಡುಗುತ್ತೆ ಎಂದಿದ್ದ ರವಿಶಂಕರ್ ಗೌಡ

ಜೀವ ನಡುಗುತ್ತೆ ಎಂದಿದ್ದ ರವಿಶಂಕರ್ ಗೌಡ

ಅದಕ್ಕೂ ಮುಂಚೆ ನಟ ರವಿಶಂಕರ್ ಗೌಡ ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿದ್ದರು. ''ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾದ್ಯವಿಲ್ಲ. ಕುತೂಹಲದ ಮಹಾಪೂರ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲಾ. ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ. ಇಡೀ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ'' ಎಂದಿದ್ದರು.

Recommended Video

ನೀನಾದೇನ ಹಾಡಿಗೆ ಧ್ವನಿಯಾದ ಕೊರಿಯನ್ ಬೆಡಗಿ | Filmibeat Kannada
ಮೊದಲು ಕೋಟಿಗೊಬ್ಬ, ಆಮೇಲೆ ವಿಕ್ರಾಂತ್ ರೋಣ

ಮೊದಲು ಕೋಟಿಗೊಬ್ಬ, ಆಮೇಲೆ ವಿಕ್ರಾಂತ್ ರೋಣ

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಕುರಿತು ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಇದಕ್ಕೂ ಮುಂಚೆ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರಬೇಕಿದೆ. ಈ ಚಿತ್ರದ ರಿಲೀಸ್ ದಿನಾಂಕ ನೋಡಿಕೊಂಡು ವಿಕ್ರಾಂತ್ ರೋಣ ಬಿಡುಗಡೆ ನಿರ್ಧರಿಸುವುದು ಚಿತ್ರತಂಡದ ಯೋಜನೆಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ನಿರೂಪ್ ಭಂಡಾರಿ, ರವಿಶಂಕರ್ ಗೌಡ, ನೀತಾ ಅಶೋಕ್ ನಟಿಸಿದ್ದಾರೆ.

More from Filmibeat

English summary
Kannada actor Kiccha Sudeep starts dubbing for Vikrant Rona Movie. the film directed by Anup Bhandari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X