For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ-3' ಬಗ್ಗೆ ಇಂಟ್ರೆಸ್ಟಿಂಗ್ ಅಪ್ ಡೇಟ್ ನೀಡಿದ ಕಿಚ್ಚ ಸುದೀಪ್

  |

  ಕಿಚ್ಚ ಸುದೀಪ್ ಸದ್ಯ ಎರಡು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕೋಟಿಗೊಬ್ಬ ಪ್ರಾಂಜೈಸಿಯ 3ನೇ ಸರಣಿ ಮತ್ತು ಬಹುನಿರೀಕ್ಷೆಯ 'ವಿಕ್ರಾಂತ್ ರೋಣ' ಸಿನಿಮಾ. ಈಗಾಗಲೇ ಈ ಎರಡು ಸಿನಿಮಾಗಳ ಕೆಲಸ ಬಹುತೇಕ ಮುಕ್ತಾಯವಾಗಿದೆ. ಇತ್ತೀಚಿಗಷ್ಟೆ 'ವಿಕ್ರಾಂತ್ ರೋಣ' ಸಿನಿಮಾದ ಹೈ ವೋಲ್ಟೇಜ್ ಹಾಡನ್ನು ಸೆರೆಹಿಡಿಯಲಾಗಿದೆ. ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಿಚ್ಚನ ಜೊತೆ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ.

  ಇದರ ಬೆನ್ನಲ್ಲೇ ಈಗ ಅಭಿನಯ ಚಕ್ರವರ್ತಿ 'ಕೋಟಿಗೊಬ್ಬ-3' ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ 'ಕೋಟಿಗೊಬ್ಬ-3' ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

  ಅನೂಪ್ ಭಂಡಾರಿ ಕೆಲಸ ಕಂಡು ದೊಡ್ಡ ಹೊಗಳಿಕೆ ಮಾತಾಡಿದ ಜಾಕ್ವೆಲಿನ್ಅನೂಪ್ ಭಂಡಾರಿ ಕೆಲಸ ಕಂಡು ದೊಡ್ಡ ಹೊಗಳಿಕೆ ಮಾತಾಡಿದ ಜಾಕ್ವೆಲಿನ್

  ಅಂದಹಾಗೆ ಸುದೀಪ್ ಡಬ್ಬಿಂಗ್ ಮುಗಿದರೆ 'ಕೋಟಿಗೊಬ್ಬ-3' ಸಿನಿಮಾದ ಸಂಪೂರ್ಣ ಕೆಲಸ ಮುಕ್ತಾಯವಾಗಲಿದೆ. ಈ ಬಗ್ಗೆ ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ತನ್ನ ಭಾಗದ ಡಬ್ಬಿಂಗ್ ಕೆಲಸ ಪ್ರಾರಂಭ ಮಾಡಿರುವುದಾಗೆ ಹೇಳಿದ್ದಾರೆ. ಎಲ್ಲರೂ ಅವರವರ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ. ಆದರೀಗ ನಾನು ಮುಗಿಸುತ್ತಿರುವುದಾಗಿ ಸುದೀಪ್ ಹೇಳಿದ್ದಾರೆ.


  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಡೇಟ್ ನೀಡಿರುವ ಕಿಚ್ಚ, "ಮತ್ತೊಮ್ಮೆ ಮೈಕ್ ಮುಂದೆ. ಆದರೆ ಈ ಬಾರಿ ಕೋಟಿಗೊಬ್ಬ-3 ಡಬ್ಬಿಂಗ್ ಗಾಗಿ. ಸತ್ಯ ಮತ್ತು ಶಿವನ ಫನ್ ಸಮಯವಾಗಿದೆ. ಪ್ರತಿಯೊಬ್ಬರು ತಮ್ಮ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ. ಹಿನ್ನಲೆ ಸ್ಕೋರ್ ಕೂಡ. ನನ್ನ ಭಾಗದ ಡಬ್ಬಿಂಗ್ ಮುಗಿಯುವುದರಿಂದ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯುತ್ತದೆ. ಶೀಘ್ರದಲ್ಲೇ ಬಿಡುಗಡೆ ಆಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.

  ಅಂದಹಾಗೆ 'ಕೋಟಿಗೊಬ್ಬ-3' ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಸಿನಿಮಾ. ಮೊದಲು ಮತ್ತು ಎರಡನೇ ಭಾಗದಂತೆ 3ನೇ ಭಾಗದಲ್ಲೂ ಕಿಚ್ಚ 2 ಶೇಡ್ ಗಳಲ್ಲಿ ಮಿಂಚಿದ್ದಾರೆ. ಕಿಚ್ಚನಿಗೆ ನಾಯಕಿಯಾಗಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪ್ರೇಮಂ ಸುಂದರಿ ಕನ್ನಡದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  ಇದೀಗ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಸಿನಿಮಾ ಬಿಡುಗಡೆಯಾಗಲಿದೆ ಎನ್ನುವಷ್ಟೊತ್ತಿಗೆ ಕೊರೊನಾ ಅಬ್ಬರ ಜಾಸ್ತಿಯಾಗಿ, ಚಿತ್ರಮಂದಿರಗಳನ್ನು ಮುಚ್ಚಬೇಕಾಯಿತು. ಯಾವಾಗ ಶೇ. 100 ಭರ್ತಿಗೆ ಅವಕಾಶ ಸಿಗುತ್ತೋ ಆಗ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಸೂರಪ್ಪ ಬಾಬು ಈ ಹಿಂದೆ ಹೇಳಿದ್ದರು. ಸದ್ಯ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದದರಿಂದ ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.

  English summary
  Actor Kichcha Sudeep Starts Voice Over for Kotigobba 3 Movie. He Shares update on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X