For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಬಗ್ಗೆ ಕಿಚ್ಚ ಸುದೀಪ್ ಹೀಗೆ ಹೇಳಿದರೇ!

  |

  ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರಿಬ್ಬರೂ ಕನ್ನಡದ ಅಮೂಲ್ಯ ಆಸ್ತಿಗಳಾಗಿ ಬೆಳೆದಿರುವ ಅಪ್ರತಿಮ ನಟರು. ಈ ಇಬ್ಬರೂ ಕನ್ನಡದ ಸೂಪರ್ ಸ್ಟಾರ್ ಗಳು. ಇವರಿಬ್ಬರಿಗೂ ಬಹಳಷ್ಟು ಹೆಸರು, ಪ್ರಸಿದ್ಧಿ ಸಿಕ್ಕಿದೆ. ಇಬ್ಬರೂ ಸದ್ಯದ ಪ್ರತಿಭಾನ್ವಿತ ನಟರು, ನಿರ್ದೇಶಕರು. ಇಬ್ಬರಲ್ಲೂ ಬರಹಗಾರನಿದ್ದಾನೆ, ಬೆರಗು ಹುಟ್ಟಿಸುವ ಪ್ರತಿಭೆಯಿದೆ.

  ಹೀಗಿರುವಾಗ ಅವರಿಬ್ಬರಲ್ಲಿ ಒಬ್ಬರಮೇಲೆ ಇನ್ನೊಬ್ಬರಿಗೆ ಯಾವ ಅಭಿಪ್ರಾಯವಿದೆ ಎಂಬ ಸಂಗತಿ ಇಷ್ಟು ದಿನ ರಹಸ್ಯವಾಗಿಯೇ ಇತ್ತು. ಆದರೆ ಮೊನ್ನೆ, ಅಂದರೆ ಸೆಪ್ಟೆಂರ್ 02 ರಂದು ನಡೆದ ಕಿಚ್ಚ ಸುದೀಪ್ ಹುಟ್ಟುಹಬ್ಬದ ವೇಳೆಯಲ್ಲಿ ನಡೆದ ಮಾತುಕತೆಯಲ್ಲಿ ಈ ರಹಸ್ಯ ಬಯಲಾಗಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

  "ನಟ, ನಿರ್ದೇಶಕ ಉಪೇಂದ್ರರ ಬಗ್ಗೆ ಸುದೀಪ್ ಬಹಳಷ್ಟು ಒಳ್ಳೆಯ ಮಾತನ್ನು ಆಡಿದ್ದಾರೆ. ಉಪ್ಪಿ ಅವರೊಬ್ಬ 'ಗ್ರೇಟ್ ರೈಟರ್' ಎಂದು ಪ್ರಾರಂಭಿಸಿರುವ ಸುದೀಪ್ "ಬರಹದ ವಿಷಯಕ್ಕೆ ಬಂದಾಗ ಉಪ್ಪಿ ಅವರೊಬ್ಬ ಮಾಸ್ಟರ್. ಅವರಿಗೆ ಆ ಸಾಮರ್ಥ್ಯ ಹುಟ್ಟಿನಿಂದಲೇ ಬಂದಿದೆ. ಅವರು ಕೊಟ್ಟಂತ ಸೂಪರ್ ಹಿಟ್ ಸ್ಕ್ರಿಪ್ಟ್ ಹೊಂದಿರುವ ಚಿತ್ರಗಳನ್ನು ನನ್ನನ್ನೂ ಸೇರಿ ಯಾರೂ ಇದುವರೆಗೂ ಕೊಟ್ಟಿಲ್ಲ."

  "ನಾನೊಮ್ಮೆ ಉಪೇಂದ್ರ ಅವರಿಗೆ 'ನಿಮ್ಮ ಬರವಣಿಗೆ ಪ್ರತಿಭೆ ನನಗೆ ಹೊಟ್ಟೆಯುರಿ ತಂದಿದೆ. ನೀವೆಂತಾ ಗ್ರೇಟ್ ಬರಹಗಾರರು ಎಂದರೆ ನಾನು ಅದೆಷ್ಟೇ ಪ್ರಯತ್ನಿಸಿದರೂ ನಿಮ್ಮಂತೆ ಬರೆಯಲಾರೆ. ನಿಮ್ಮ ಸ್ವಂತ ನಿರ್ದೇಶನದ ಚಿತ್ರಗಳೇ ನನ್ನ ಆಲ್ ಟೈಮ್ ಫೇವರೆಟ್ ಚಿತ್ರಗಳು' ಎಂದು ಹೇಳಿದ್ದೇನೆ" ಎಂದಿದ್ದಾರೆ. ಜೊತೆಗೆ ಕಿಚ್ಚ ಸುದೀಪ್, ಉಪೇಂದ್ರ ಅವರನ್ನು ತಮ್ಮ ಪ್ರತಿಸ್ಪರ್ಧಿ ಎಂದುಕೊಳ್ಳದೇ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

  ಮುಂದುವರಿದ ಸುದೀಪ್ " ನಿರಂತರ ಕನಸುಗಾರ ರವಿಚಂದ್ರನ್ ತಮಗೆ ಬಹುದೊಡ್ಡ 'ಇನ್ಸ್ಫಿರೇಶನ್' ಎಂದಿದ್ದಾರೆ. ಒಟ್ಟಿನಲ್ಲಿ ಸುದೀಪ್ ಅವರಿಗೆ ಉಪೇಂದ್ರ ಬಗೆಗಿರುವ ಭಾವನೆ, ಅಭಿಪ್ರಾಯ ಅವರ ಹುಟ್ಟುಹಬ್ಬದಂದು ವ್ಯಕ್ತವಾಗಿದೆ. ಹಾಗೇ, ಸುದೀಪ್ ಬಗ್ಗೆ ಉಪೇಂದ್ರ ಅಭಿಪ್ರಾಯ ಸದ್ಯದಲ್ಲೇ ಇರುವ ಉಪ್ಪಿಯ ಹುಟ್ಟುಹಬ್ಬದಂದು (ಸೆಪ್ಟೆಂಬರ್ 18) ಬಯಲಾಗಬಹುದು, ಕಾಯುತ್ತಿರಿ... (ಒನ್ ಇ0ಡಿಯಾ ಕನ್ನಡ)

  English summary
  Kichcha Sudeep talks about Super Star Upendra on his Birthday, 02 September 2012. He told that "Uppi is a master when it comes to writing and I believe he is gifted with that ability. Nobody has ever given him a massive hit than he to himself."
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X