»   » ಪ್ರಥಮ್-ಭುವನ್ ಗೆ ಖಡಕ್ ವಾರ್ನಿಂಗ್ ಕೊಟ್ಟ 'ಬಿಗ್ ಬಾಸ್' ಸುದೀಪ್

ಪ್ರಥಮ್-ಭುವನ್ ಗೆ ಖಡಕ್ ವಾರ್ನಿಂಗ್ ಕೊಟ್ಟ 'ಬಿಗ್ ಬಾಸ್' ಸುದೀಪ್

Posted By:
Subscribe to Filmibeat Kannada

ಕಳೆದ ಎರಡ್ಮೂರು ದಿನಗಳಿಂದ ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ಮತ್ತು ಭುವನ್ ನಡುವಿನ ಕಿತ್ತಾಟ ತಾರಕ್ಕೇರಿದೆ. ಪರಸ್ಪರ ಇಬ್ಬರು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದು, ಕಾನೂನು ಸಮರ ನಡೆಸುತ್ತಿದ್ದಾರೆ.

ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪಗಳನ್ನ ಮಾಡುತ್ತಿದ್ದಾರೆ. ಇವರಿಬ್ಬರ ಈ ಬೀದಿ ರಂಪಾಟ ನೋಡಿ ಈಗ 'ಬಿಗ್ ಬಾಸ್' ಸುದೀಪ್ ಇಬ್ಬರಿಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಭುವನ್ ಮತ್ತು ಪ್ರಥಮ್ ಇಬ್ಬರನ್ನ ಇಂದು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸುದೀಪ್ ಸಂಧಾನ ಮಾಡಿಸಿಲು ಪ್ರಯತ್ನಿಸಿದ್ದಾರೆ. ಹಾಗಿದ್ರೆ, ಸುದೀಪ್ ಇಬ್ಬರಿಗೂ ಏನು ಹೇಳಿದ್ದಾರೆ. ಮುಂದೆ ಓದಿ......

ಬುದ್ಧಿವಾದ ಹೇಳಿದ ಸುದೀಪ್

ಪ್ರಥಮ್ ಮತ್ತು ಭುವನ್ ಇಬ್ಬರನ್ನ ಜೆ.ಪಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸುದೀಪ್, ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರಂತೆ. ಈ ವಿವಾದವನ್ನೆಲ್ಲ ಬಿಟ್ಟು ಬೆಳೆಯುವ ಕಡೆ ಗಮನ ಹರಿಸಿ ಎಂದು ಸಂಧಾನ ಮಾಡಿಸಿದ್ದಾರೆ ಎನ್ನಲಾಗಿದೆ.

ಸೇಡಿಗೆ ಸೇಡು: ಭುವನ್ ವಿರುದ್ಧ ಪ್ರಥಮ್ ಪ್ರತಿದೂರು

ಸಿನಿಮಾಗಳ ಕಡೆ ಗಮನ ಹರಿಸಿ

''ನಿಮ್ಮಬ್ಬರಿಗೂ ಜನ ಒಂದು ಸ್ಥಾನ ಕೊಟ್ಟಿದ್ದಾರೆ. ಅದನ್ನ ಉಳಿಸಿಕೊಂಡು ಹೋಗಿ. ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನು ಬೆಳೆಯುತ್ತಿದ್ದೀರಿ. ಒಳ್ಳೊಳ್ಳೆ ಸಿನಿಮಾಗಳು ಕೈಯಲ್ಲಿವೆ. ಕಿತ್ತಾಟಗಳನ್ನ ಬಿಟ್ಟು ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಿ'' - ಸುದೀಪ್

ತೊಡೆ ಕಚ್ಚಿದ್ದ 'ಬಿಗ್ ಬಾಸ್' ಪ್ರಥಮ್ ನ್ಯಾಯಾಲಯಕ್ಕೆ ಹಾಜರು

ಕಾನೂನು ಹೋರಾಟ ಕೈಬಿಡಿ

''ಶೋ ಚೆನ್ನಾಗಿ ಬರ್ತಿದೆ. ಸಿನಿಮಾಗೂ ಒಳ್ಳೆಯದಾಗಲಿ. ಕಾನೂನು ಹೋರಾಟವನ್ನ ಕೈಬಿಡಿ'' ಎಂದು ಸಂಜು ಮತ್ತು ನಾನು ಧಾರಾವಾಹಿಯ ನಟರಿಗೆ ತಿಳಿಸಿದ್ದಾರಂತೆ.

ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?

ಸುದೀಪ್ ಭೇಟಿ ಬಳಿಕ ಪ್ರಥಮ್ ಏನಂದ್ರು

ಸುದೀಪ್ ಅವರನ್ನ ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್ ''ಸುದೀಪ್ ಅವರ ಮನೆ ಶಕ್ತಿ ಕೇಂದ್ರ. ಲಂಡನ್ ನಿಂದ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದರು. ಹಾಗಾಗಿ, ಯೋಗಕ್ಷೇಮ ವಿಚಾರಿಸಲು ಬಂದಿದ್ದೆ. ಶೋ ಚೆನ್ನಾಗಿ ಬರ್ತಿದೆ. ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ರು ಎಂದು ಪ್ರಥಮ್ ತಿಳಿಸಿದರು.

ಪ್ರತಿಕ್ರಿಯೆ ನೀಡದ ಭುವನ್

ಸುದೀಪ್ ಅವರನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಭುವನ್ ತೆರಳಿದರು. ಹೀಗಾಗಿ, ಕಿಚ್ಚನ ಬುದ್ಧಿಮಾತಿನ ನಂತರ ಇಬ್ಬರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ.

ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು

English summary
Bigg Boss Kannada Host Kannada Actor kichcha Sudeep Talks About Bhuvan and Pratham Controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada