»   » ದರ್ಶನ್ 'ಸಂಗೊಳ್ಳಿ ರಾಯಣ್ಣ' ಬಗ್ಗೆ ಬಾಯ್ಬಿಟ್ಟ ಸುದೀಪ್

ದರ್ಶನ್ 'ಸಂಗೊಳ್ಳಿ ರಾಯಣ್ಣ' ಬಗ್ಗೆ ಬಾಯ್ಬಿಟ್ಟ ಸುದೀಪ್

Posted By:
Subscribe to Filmibeat Kannada
<ul id="pagination-digg"><li class="next"><a href="/news/sudeep-twitter-darshan-sangolli-rayanna-duniya-vijay-069261.html">Next »</a></li></ul>
Sudeep Darshan
ಕಿಚ್ಚ ಸುದೀಪ್ ಮತ್ತು ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ಅಪರೂಪ ಎನಿಸುವ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ, ನಾಳೆ (01 ನವೆಂಬರ್ 2012) ಬಿಡುಗಡೆಯಾಗಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಎಂಬ ಕನ್ನಡದ ಅದ್ದೂರಿ ಹಾಗೂ ಐತಿಹಾಸಿಕ ಚಿತ್ರವನ್ನು ನೋಡಿರುವ ಸುದೀಪ್ ಮತ್ತು ವಿಜಯ್, " ಸಂಗೊಳ್ಳಿ ರಾಯಣ್ಣ ಚಿತ್ರ ಅತ್ಯದ್ಭುತವಾಗಿದೆ" ಎಂದು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಸಂಗೊಳ್ಳಿ ರಾಯಣ್ಣ' ಚಿತ್ರ ನೋಡಿದ ನಂತರ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಿಚ್ಚ ಸುದೀಪ್, ತಮ್ಮ ಮಾತಿನಲ್ಲಿ 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಗ್ಗೆ ಬಹಳಷ್ಟು ಹೊಳಿಕೆಯನ್ನು ನೀಡಿದರು. "ದರ್ಶನ್ ಒಬ್ಬ ಮಹಾ ಅದ್ಭುತ ನಟ. ಈ ಚಿತ್ರದಲ್ಲಿ ದರ್ಶನ್ ಪ್ರತಿಭೆಯು ಎಲ್ಲಾ ರೀತಿಯಲ್ಲೂ ಅನಾವರಣವಾಗಿದೆ. ಚಿತ್ರದಲ್ಲಿ ಕುದುರಿ ಸವಾರಿ ಮಾಡಿರುವ ದರ್ಶನ್ ಯುದ್ಧ ಸನ್ನಿವೇಶಗಳಲ್ಲಿ ರೋಮಾಂಚನಗೊಳಿಸುತ್ತಾರೆ.

ಮುಂದುವರಿದ ಸುದೀಪ್, "ಈ ಚಿತ್ರದಲ್ಲಿ ಅತ್ಯದ್ಭುತವಾಗಿ ನಟಿಸಿದ ದರ್ಶನ್ ಅವರಿಗೆ ಹ್ಯಾಟ್ಸ್ ಆಫ್" ಎಂದು ಬೆನ್ನುತಟ್ಟಿದ್ದಾರೆ. ಇದೇ ರೀತಿ ಇನ್ನೊಬ್ಬ ನಟ ದುನಿಯಾ ವಿಜಯ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಈ ಚಿತ್ರದಲ್ಲಿ ದರ್ಶನ್ ಎಲ್ಲರೂ ಮೆಚ್ಚುವಂತೆ ನಟಿಸಿದ್ದಾರೆ. ತಮ್ಮ ವಿಶಿಷ್ಟ ಶೈಲಿಯಿಂದ ಹೆಸರು ಮಾಡಿರುವ ನಿರ್ದೇಶಕ ನಾಗಣ್ಣ, ಈ ಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ.

ನಿರ್ದೇಶಕ ನಾಗಣ್ಣ ಅವರ ಮೇಕಿಂಗ್ ಹಾಗೂ ಬದ್ಧತೆಯ ಬಗ್ಗೆಯೂ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಚಿತ್ರಗಳನ್ನು ಒಪ್ಪಿ ಮಾಡಬಹುದಾಗಿದ್ದ ನಾಗಣ್ಣ, ಈ ಚಿತ್ರಕ್ಕಾಗಿ ಬೇರೆ ಯಾವುದೇ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ. ಈ ಚಿತ್ರದಲ್ಲಿ ಒಬ್ಬ ನಿರ್ದೇಶಕನಾಗಿ ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಿಜಕ್ಕೂ ಒಂದು ದೊಡ್ಡ ಸವಾಲಿನ ಕೆಲಸವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಖಂಡಿತಾ ಈ ಚಿತ್ರ ಸೂಪರ್ ಹಿಟ್ ದಾಖಲಿಸಲಿದೆ" ಎಂದಿದ್ದಾರೆ ಸುದೀಪ್. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/sudeep-twitter-darshan-sangolli-rayanna-duniya-vijay-069261.html">Next »</a></li></ul>
English summary
Kichcha Sudeep told in a TV Interview that, Challenging Star Drashan acted movie, Sangolli Rayanna is Super. He also tweeted and gave lot of appreciation for that movie. Even Duniya Vijay also followed Sudeep. &#13; &#13;
Please Wait while comments are loading...