ನಟಿ ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಕಿಚ್ಚ ಸುದೀಪ್!

ನಟ ಕಿಚ್ಚ ಸುದೀಪ್ ಇತ್ತೀಚಿಗೆ ಕನ್ನಡದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದ ಕಿಚ್ಚನ ಮಾತಿಗೆ ಬಾಲಿವುಡ್ ನಟ, ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿದ್ದರು. ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು ಹಲವು ದಿನಗಳ ಕಾಲ ಸಾಕಷ್ಟು ಸಿನಿಮಾ ತಾರೆಯರು, ಜನರು ಹಿಂದಿ ರಾಷ್ಟ್ರ ಭಾಷೆಯೇ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದರು.

ಈಗ ಸುದೀಪ್ ಮತ್ತೆ ಕನ್ನಡದ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಅದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಕನ್ನಡದ ಬಗ್ಗೆ ಮಾತನಾಡಿದ್ದಾರೆ.

ಹಾಗಂತ ಸುದೀಪ್ ಮತ್ತು ಜಾಕ್ವಲಿನ್ ಭಾಷೆಯ ವಿಚಾರದಲ್ಲಿ ವಾರ್‌ಗೆ ಇಳಿದಿಲ್ಲ. ಕನ್ನಡ ಮೇಲು ಅಥವಾ ಹಿಂದಿ ಮೇಲು ಎನ್ನುವ ವಾಗ್ವಾದಕ್ಕಿಳಿದಿಲ್ಲ. ಬದಲಿಗೆ ಸುದೀಪ್, ಜಾಕ್ವಲಿನ್‌ಗೆ ಕನ್ನಡ ಕಲಿಸಿದ್ದಾರೆ. ಸುದೀಪ್ ಹೇಳಿದ ಡೈಲಾಗ್ ಹೇಳಿ ಸೈ ಎನಿಸಿಕೊಂಡಿದ್ದಾರೆ ಬಾಲಿವುಡ್ ನಟಿ.

ರಾ..ರಾ.. ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ವೈರಲ್!

ರಾ..ರಾ.. ರಕ್ಕಮ್ಮ ಹಾಡು ಸಿಕ್ಕಾಪಟ್ಟೆ ವೈರಲ್!

ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ವಿಚಾರವಾಗಿ ಸುದೀಪ್ ಮತ್ತು ಜಾಕ್ವಲಿನ್ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ 'ವಿಕ್ರಾಂತ್ ರೋಣ' ಸಿನಿಮಾದ ಗಡಂಗ್ ರಕ್ಕಮ್ಮ ಹಾಡು ರಿಲೀಸ್ ಆಗಿದೆ. ಈ ಹಾಡು ಸಖತ್ ವೈರಲ್ ಆಗಿದ್ದು ಎಲ್ಲರೂ ಇದೇ ಹಾಡಿಗೆ ಹೆಜ್ಜೆ ಹಾಕುತ್ತಾ ಇದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಈ ಹಾಡು ಹಿಟ್ ಲಿಸ್ಟ್ ಸೇರಿದೆ.

ಜಾಕ್ವೆಲಿನ್‌ಗೆ ಕನ್ನಡದ ಚಾಲೆಂಜ್ ಕೊಟ್ಟ ಸುದೀಪ್!

ಜಾಕ್ವೆಲಿನ್‌ಗೆ ಕನ್ನಡದ ಚಾಲೆಂಜ್ ಕೊಟ್ಟ ಸುದೀಪ್!

ಇದೆ ಹಾಡಿನ ವಿಚಾರವಾಗಿ ಸುದೀಪ್ ಜಾಕ್ವಲಿನ್ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದಾರೆ. ಇವರ ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕಾಲ್ ನಲ್ಲಿ ಗಡಂಗ್ ರಕಮ್ಮ ಹಾಡಿನ ಬಗ್ಗೆ ಸುದೀಪ್ ಮತ್ತು ಜಾಕ್ವೆಲಿನ್ ಮಾತನಾಡಿದ್ದಾರೆ. ಈ ವೇಳೆ ಜಾಕ್ವಲಿನ್, ಸುದೀಪ್ ಮುಂದೆ ಬೇಡಿಕೆ ಒಂದು ಇಡುತ್ತಾರೆ. ಗಡಂಗ್ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ನಮ್ಮ ತಂಡ ನಿಮ್ಮ ಡಾನ್ಸ್ ನೋಡಬೇಕಂತೆ ಎಂದು ಒತ್ತಾಯ ಮಾಡುತ್ತಾರೆ. ಆಗ ಸುದೀಪ್ ಜಾಕ್ವೆಲಿನ್‌ಗೆ ಕನ್ನಡ ಮಾತನಾಡುವಂತೆ ಚಾಲೆಂಜ್ ಹಾಕುತ್ತಾರೆ.

ಕನ್ನಡದ ಹೇಳಿಕೊಟ್ಟ ಸುದೀಪ್!

ಇನ್ನು ವೀಡಿಯೋ ಕಾಲ್‌ನಲ್ಲಿ "ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದಿನಿ." ಎಂದು ಕನ್ನಡದಲ್ಲಿ ಹೇಳುವಂತೆ ಜಾಕ್ವೆಲಿನ್‌ಗೆ ಸುದೀಪ್ ಸವಾಲು ಹಾಕುತ್ತಾರೆ. ತೊದಲು ನುಡಿಯಲ್ಲೇ ಜಾಕ್ವೆಲಿನ್ ಸುದೀಪ್ ಹೇಳಿಕೊಟ್ಟ ಕನ್ನಡದ ನುಡಿಗಳನ್ನು ಕನ್ನಡದಲ್ಲೇ ಹೇಳುತ್ತಾರೆ. ಬಳಿಕ ಸುದೀಪ್ ಜಾಕ್ವಲಿನ್ ಹೇಳಿದ ಹಾಗೆ ರಕಮ್ಮ ಹಾಡಿಗೆ ರೀಲ್ಸ್ ಕೂಡ ಮಾಡಿದ್ದಾರೆ.

ಜುಲೈ 28ಕ್ಕೆ 'ವಿಕ್ರಾಂತ್ ರೋಣ' ವಿಶ್ವದಾದ್ಯಂತ ರಿಲೀಸ್!

ಜುಲೈ 28ಕ್ಕೆ 'ವಿಕ್ರಾಂತ್ ರೋಣ' ವಿಶ್ವದಾದ್ಯಂತ ರಿಲೀಸ್!

ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28ಕ್ಕೆ ತೆರೆಗೆ ಬರಲಿದೆ. ಸಿನಿಮಾ ರಿಲೀಸ್‌ಗೆ ಇನ್ನು ಎರಡು ತಿಂಗಳು ಬಾಕಿ ಇದೆ. ಆದರೆ ಅದಾಗಲೇ ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. 'ವಿಕ್ರಾಂತ್ ರೋಣ' ಮೊದಲ ಹಾಡು ರಕಮ್ಮ ಹಿಟ್ ಲಿಸ್ಟ್ ಸೇರಿದೆ. ಚಿತ್ರದ ಮುಂದಿನ ಅಪ್ಡೇಟ್‌ಗಾಗಿ ಸಿನಿಪ್ರೇಕ್ಷಕರು ಕಾಯುತ್ತಾ ಇದ್ದಾರೆ.

More from Filmibeat

English summary
Kichcha Sudeep thought Kannada To actress Jacqueline Fernandez, video viral in social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X