ಧನಂಜಯ್ ಹೊಯ್ಸಳ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

ನಟ ಧನಂಜಯ್ ಅವರ ಸಿನಿ ಜೀವನದ ಮೈಲಿಗಲ್ಲಿನ ಸಿನಿಮಾ ಹೊಯ್ಸಳ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಹೌದು, ಹೊಯ್ಸಳ ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾವಾಗಿದ್ದು, ಚಿತ್ರ ಮಾರ್ಚ್ 30ರಂದು ತೆರೆಗೆ ಬರಲಿದೆ. ವಿಜಯ್ ಎನ್ ನಿರ್ದೇಶನದ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಒಡೆತನದ ಕೆಆರ್‌ಜಿ ಸ್ಟುಡಿಯೊಸ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನು ಕಳೆದ ವರ್ಷ ತೆರೆಕಂಡ ಧನಂಜಯ್ ನಟನೆಯ ಯಾವ ಚಿತ್ರಗಳೂ ಸಹ ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಹೊಯ್ಸಳ ಚಿತ್ರ ಧನಂಜಯ್ ಯಶಸ್ಸಿನ ಹಾದಿಗೆ ಮರಳುವಂತೆ ಮಾಡುವುದು ಖಚಿತ ಎಂಬ ಅಭಿಪ್ರಾಯ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಇನ್ನು ದಿನದಿಂದ ದಿನಕ್ಕೆ ನಿರೀಕ್ಷೆ ಹುಟ್ಟಿಸುತ್ತಿರುವ ಈ ಚಿತ್ರದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗುರುದೇವ್ ಎಂಬ ಪಾತ್ರ ನಿರ್ವಹಿಸಲಿದ್ದಾರೆ.

 Kichcha Sudeep to launch Hoysala movied glimpse of Gurudev

ಇದೇ ಪಾತ್ರದ ಗ್ಲಿಂಪ್ಸ್ ಅನ್ನು ನಾಳೆ (ಫೆಬ್ರವರಿ 5 ) ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದ್ದು, ಈ ವಿಡಿಯೊವನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 9.27ಕ್ಕೆ ಆನ್‌ಲೈನ್‌ನಲ್ಲಿ ಕಿಚ್ಚ ಸುದೀಪ್ ಗ್ಲಿಂಪ್ಸ್ ಆಫ್ ಗುರುದೇವ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ಈ ವಿಡಿಯೊ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನು ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರು ಬಂಡವಾಳ ಹೂಡಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿರುವಾಗಲೇ ಕೆಆರ್‌ಜಿ ಸ್ಟುಡಿಯೊಸ್ ಮತ್ತು ಕಿಚ್ಚ ಸುದೀಪ್ ಹೆಸರು ಪದೇ ಪದೇ ಒಟ್ಟಿಗೆ ಕೇಳಿ ಬರುತ್ತಿರುವುದು ಇದೇ ಬ್ಯಾನರ್ ಕಿಚ್ಚನ ಮುಂದಿನ ಸಿನಿಮಾಗೆ ಬಂಡವಾಳ ಹೂಡುತ್ತಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.

More from Filmibeat

English summary
Kichcha Sudeep to launch Hoysala movie's glimpse of Gurudev. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X