ಸಲ್ಮಾನ್ ಖಾನ್‌ ಸಿನಿಮಾ ನಿರ್ದೇಶಿಸಲಿರುವ ಕಿಚ್ಚ ಸುದೀಪ್!

ನಟ ಸುದೀಪ್ ಎಷ್ಟೊಳ್ಳೆ ನಟರೊ ಅಷ್ಟೇ ಒಳ್ಳೆಯ ನಿರ್ದೇಶಕರು ಸಹ. ಈಗಾಗಲೇ ನಿರ್ದೇಶಕರಾಗಿ ಸುದೀಪ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

'ಶಾಂತಿ ನಿವಾಸ', 'ಮೈ ಆಟೊಗ್ರಾಫ್', 'ಜಸ್ಟ್ ಮಾತ್ ಮಾತಲ್ಲಿ' ಅಂಥಹಾ ನವಿರು ಸಿನಿಮಾಗಳ ಜೊತೆಗೆ, 'ಕೆಂಪೇಗೌಡ', 'ವೀರ ಮದಕರಿ', 'ಮಾಣಿಕ್ಯ' ಅಂಥಹಾ ಸಿನಿಮಾಗಳನ್ನೂ ನಿರ್ದೇಶಿಸಿದ್ದಾರೆ. ಇವುಗಳಲ್ಲಿ 'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾಕ್ಕೆ ಸುದೀಪ್‌ ಅವರೇ ಕತೆ ಸಹ ರಚಿಸಿದ್ದಾರೆ.

ಒಳ್ಳೆಯ ನಿರ್ದೇಶಕರಾಗಿದ್ದರೂ 2014ರ 'ಮಾಣಿಕ್ಯ' ಸಿನಿಮಾದ ಬಳಿಕ ಸುದೀಪ್ ಮತ್ಯಾವುದೂ ಸಿನಿಮಾ ನಿರ್ದೇಶನ ಮಾಡಿಲ್ಲ. ಇದೀಗ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಸಂಭ್ರಮದಲ್ಲಿರುವ ಸುದೀಪ್, ಸಿನಿಮಾದ ಪ್ರಚಾರಕ್ಕಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಾವು ಮತ್ತೆ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ, ಅದರಲ್ಲಿಯೂ ಸಲ್ಮಾನ್ ಖಾನ್‌ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ ಹೇಳಿದ್ದಾರೆ.

''ಈಗಾಗಲೇ ಒಂದು ಚಿತ್ರಕತೆಯನ್ನು ಸಿದ್ಧಪಡಿಸಿದ್ದೇನೆ. ಹಿಂದಿ ಹಾಗೂ ದಕ್ಷಿಣ ಭಾರತದ ಭಾಷೆಗಳಲ್ಲಿ ಆ ಸಿನಿಮಾವನ್ನು ಮಾಡಬೇಕೆಂಬ ಉದ್ದೇಶ ಇದೆ. ಸಿನಿಮಾದ ಮುಖ್ಯ ಪಾತ್ರವನ್ನು ದಕ್ಷಿಣ ಭಾರತದ ಭಾಷೆಗಳಲ್ಲಿ ನಾನು ಹಾಗೂ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಮಾಡಿದರೆ ಚೆನ್ನಾಗಿರುತ್ತದೆ. ಹಾಗಾಗಿ ನಾನು ಈಗಾಗಲೇ ಸಲ್ಮಾನ್ ಖಾನ್ ಅವರನ್ನು ಸಂಪರ್ಕ ಮಾಡಿದ್ದೇನೆ'' ಎಂದಿದ್ದಾರೆ ಸುದೀಪ್.

ಸೆಪ್ಟೆಂಬರ್‌ನಲ್ಲಿಯೇ ಕತೆ ಹೇಳಬೇಕಿತ್ತು: ಸುದೀಪ್

ಸೆಪ್ಟೆಂಬರ್‌ನಲ್ಲಿಯೇ ಕತೆ ಹೇಳಬೇಕಿತ್ತು: ಸುದೀಪ್

''ನಾವಿಬ್ಬರೂ ಗೆಳೆಯರು ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ಅವರನ್ನು ಆಯ್ಕೆ ಮಾಡಿಲ್ಲ. ಅವರಿಗೆ ಪಾತ್ರ ನಿಜಕ್ಕೂ ಒಪ್ಪಿಗೆ ಆಗುತ್ತದೆ. ಹಿಂದಿಯಲ್ಲಿ ನಾನೇ ಮಾಡಿದರೆ ಚೆನ್ನಾಗಿರುವುದಿಲ್ಲ. ನನ್ನ ಸಿನಿಮಾಕ್ಕೆ ಒಪ್ಪುವ ನಟ ಈಗಾಗಲೇ ಇರುವಾಗ ಆ ಪಾತ್ರ ನಾನು ಮಾಡುವುದು ಸರಿಯಲ್ಲ. ಸಲ್ಮಾನ್ ಖಾನ್ ಕತೆ ಹೇಳಲು ಆಹ್ವಾನ ನೀಡಿದ್ದರು. ಸೆಪ್ಟೆಂಬರ್ ಅಂತಿಮ ವಾರದಲ್ಲಿಯೇ ಮುಂಬೈಗೆ ಹೋಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಹೋಗಲಾಗಲಿಲ್ಲ. ಕೆಲವೇ ದಿನಗಳಲ್ಲಿ ಸಲ್ಮಾನ್ ಖಾನ್‌ಗೆ ಕತೆ ಹೇಳುವೆ'' ಎಂದಿದ್ದಾರೆ ಸುದೀಪ್.

ದಕ್ಷಿಣದಲ್ಲಿ ನಾನು ಮಾಡುತ್ತೇನೆ, ಹಿಂದಿಯಲ್ಲಿ ಸಲ್ಮಾನ್: ಸುದೀಪ್

ದಕ್ಷಿಣದಲ್ಲಿ ನಾನು ಮಾಡುತ್ತೇನೆ, ಹಿಂದಿಯಲ್ಲಿ ಸಲ್ಮಾನ್: ಸುದೀಪ್

''ಕತೆಯನ್ನು ನನಗಾಗಿ ಬರೆದುಕೊಂಡೆ. ಕತೆಯ ಬಗ್ಗೆ ಜಾಕ್ ಮಂಜು ಬಳಿ ಚರ್ಚಿಸಿದಾಗ ಈ ಸಿನಿಮಾವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು. ನನಗೂ ಸರಿ ಎನಿಸಿತು. ನಾನು ಅವರಿಗೆ ಕತೆ ಹೇಳಲು ಉತ್ಸುಕನಾಗಿದ್ದೇನೆ. ಕತೆ ಹೇಳುತ್ತೇನೆ, ಒಪ್ಪುವುದು-ಬಿಡುವುದು ಅವರಿಗೆ ಬಿಟ್ಟಿದ್ದು. ಅವರು ಕತೆಯನ್ನು ಒಪ್ಪಿದ ಮೇಲಷ್ಟೆ ಇತರೆ ವಿಷಯಗಳನ್ನು ಹೇಳಲು ಸಾಧ್ಯ'' ಎಂದಿದ್ದಾರೆ ಸುದೀಪ್.

ಸಲ್ಮಾನ್ ಜೊತೆ ನಟಿಸಿರುವ ಸುದೀಪ್

ಸಲ್ಮಾನ್ ಜೊತೆ ನಟಿಸಿರುವ ಸುದೀಪ್

ಸುದೀಪ್ ಹಾಗೂ ಸಲ್ಮಾನ್ ಖಾನ್ ಬಹಳ ಒಳ್ಳೆಯ ಗೆಳೆಯರು. ಸುದೀಪ್ ಈಗಾಗಲೇ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ 'ದಬಂಗ್ 3' ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಸಲ್ಮಾನ್ ಗಾಗಿ ಸುದೀಪ್ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಕುತೂಹಲ ಹುಟ್ಟಿಸಿದೆ. 'ಫೂಂಕ್', 'ರಣ್', 'ಫೂಂಕ್ 2', 'ರಕ್ತ ಚರಿತ್ರ', 'ದಬಂಗ್ 3' ಹಿಂದಿ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಹಿಂದಿ ಮಾತ್ರವೇ ಅಲ್ಲದೆ ಹಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ.

ಮುಂದೆಯೂ ಗ್ರೇ ಶೇಡ್ ಪಾತ್ರಗಳನ್ನು ಮಾಡುವೆ: ಸುದೀಪ್

ಮುಂದೆಯೂ ಗ್ರೇ ಶೇಡ್ ಪಾತ್ರಗಳನ್ನು ಮಾಡುವೆ: ಸುದೀಪ್

ಸುದ್ದಿಗೋಷ್ಠಿಯಲ್ಲಿ ಗ್ರೇ ಶೇಡ್ ಇರುವ ಪಾತ್ರಗಳ ಬಗ್ಗೆ ಮಾತನಾಡಿದ ಸುದೀಪ್, ''ರಣ್ ಸಿನಿಮಾದಲ್ಲಿ ಮೊದಲ ಬಾರಿಗೆ ಗ್ರೇ ಶೇಡ್ ಇರುವ ಪಾತ್ರದಲ್ಲಿ ನಟಿಸಿದೆ. ಆ ಸಿನಿಮಾದಲ್ಲಿ ನನಗೆ ಅಮಿತಾಬ್ ಬಚ್ಚನ್ ಎದುರು ನಟಿಸುವುದಕ್ಕಿಂತಲೂ ಹಿಂದಿ ಮಾತನಾಡುವುದು ಬಹಳ ದೊಡ್ಡ ಸಮಸ್ಯೆಯಾಗಿತ್ತು. ಅದೇ ಸಿನಿಮಾದಿಂದಾಗಿ ನನಗೆ 'ಈಗ' ಸಿನಿಮಾ ದೊರಕಿತು. 'ಬ್ಯಾಟ್‌ಮ್ಯಾನ್' ಸಿನಿಮಾದಲ್ಲಿ ಜೋಕರ್ ಪಾತ್ರ ಸೂಪರ್ ಹಿಟ್ ಆದಂತೆ ಗ್ರೇ ಶೇಡ್ ಇರುವ ಪಾತ್ರಗಳು ಚೆನ್ನಾಗಿ ಹಿಟ್ ಆಗುತ್ತವೆ. ಜನರಿಗೂ ಆ ರೀತಿಯ ಪಾತ್ರಗಳು ಹಿಡಿಸುತ್ತವೆ. ನಾನೂ ಸಹ ಅವಕಾಶ ಸಿಕ್ಕರೆ ಮುಂದಿನ ದಿನಗಳಲ್ಲಿ ಗ್ರೇ ಶೇಡ್ ಇರುವ ಪಾತ್ರಗಳಲ್ಲಿ ನಟಿಸುವೆ'' ಎಂದಿದ್ದಾರೆ ಸುದೀಪ್.

ಥ್ರಿಬಲ್ ಮನರಂಜನೆ ನೀಡಲಿದೆ 'ಕೋಟಿಗೊಬ್ಬ 3'

ಥ್ರಿಬಲ್ ಮನರಂಜನೆ ನೀಡಲಿದೆ 'ಕೋಟಿಗೊಬ್ಬ 3'

'ಕೋಟಿಗೊಬ್ಬ 3' ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್, ''ಈ ಸಿನಿಮಾ ಪಕ್ಕಾ ಮನೊರಂಜನೆ ಒದಗಿಸಲಿದೆ. ನಿರ್ಮಾಪಕರು ಬಹಳ ರಿಚ್ ಆಗಿ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಶಿವ ಕಾರ್ತಿಕ್, ಡಿಓಪಿ ಎಲ್ಲರೂ ಬಹಳ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆ. 'ಕೋಟಿಗೊಬ್ಬ 2' ಗಿಂತಲೂ ಹೆಚ್ಚಿನ ಮನರಂಜನೆಯನ್ನು 'ಕೋಟಿಗೊಬ್ಬ 3' ನೀಡಲಿದೆ. ನಿರ್ದೇಶಕ ಶಿವ ಕಾರ್ತಿಕ್ ಮೊದಲ ಸಿನಿಮಾದಲ್ಲಿಯೇ ಅನುಭವಿ ನಿರ್ದೇಶಕರ ರೀತಿ ಕೆಲಸ ಮಾಡಿದ್ದಾರೆ. ಎಲ್ಲ ರಾಜ್ಯಗಳಲ್ಲಿಯೂ ಚಿತ್ರಮಂದಿರಗಳು ತೆರೆದಿಲ್ಲ ಹಾಗಾಗಿ ಸಿನಿಮಾ ಬಿಡುಗಡೆ ಆದ ಬಳಿಕ ಬೇರೆ ಭಾಷೆಗಳಿಗೆ ಡಬ್ ಆಗಬಹುದು'' ಎಂದರು.

More from Filmibeat

English summary
Kichcha Sudeep trying to direct movie for Salman Khan. He said I wrote script, Salman invited to narrate story. If he agrees will direct movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X