For Quick Alerts
  ALLOW NOTIFICATIONS  
  For Daily Alerts

  ಅಂತರಾಷ್ಟ್ರೀಯ ಚಲನಚಿತ್ರೋತ್ಸವದ, ರಾಯಭಾರಿಯಾಗಿ, ಸುದೀಪ್!!

  By Suneetha
  |

  ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಮೋಸ್ಟ್ ಬ್ಯುಸಿಯೆಸ್ಟ್ ಪರ್ಸನ್ ಅಂದ್ರೆ ಅದು ಕಿಚ್ಚ ಸುದೀಪ್ ಅವರು ಅಂತಾನೇ ಹೇಳಬಹುದು. 'ಆಡು ಮುಟ್ಟದ ಸೊಪ್ಪಿಲ್ಲ' ಅನ್ನೋ ಗಾದೆ ಮಾತಿನಂತೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೈ-ಕಾಲಾಡಿಸದೇ, ಉಳಿದ ಕ್ಷೇತ್ರ ಇಲ್ಲ.

  ಅಷ್ಟರಮಟ್ಟಿಗೆ ಕಿಚ್ಚ ಸುದೀಪ್ ಅವರು ಬ್ಯುಸಿಯಾಗಿದ್ದಾರೆ. ಈಗಾಗಲೇ ನಟನೆ, ನಿರೂಪಣೆ, ಸಿಂಗರ್ ಹಾಗೂ ಇಂಟೆಕ್ಸ್, ಜೋಯ್ ಅಲುಕ್ಕಾಸ್, OLX, ಬೆಂಗಳೂರು ಟ್ರಾಫಿಕ್ ಪೊಲೀಸ್, ಮತ್ತು ತೆರಿಗೆ ಇಲಾಖೆ ಮುಂತಾದ ಜಾಹೀರಾತುಗಳಿಗೆ ರಾಯಭಾರಿ ಆಗಿರುವ ಸುದೀಪ್ ಅವರು ಇದೀಗ ಮತ್ತೊಂದು ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

  ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಅಂತಾನೇ ಫೇಮಸ್ ಆಗಿರುವ ಸುದೀಪ್ ಅವರು ಇದೀಗ ಹೊಸದಾಗಿ ALIIFF (All Lights India International Film Festival & Indywood Film Market) (ಅಂತರಾಷ್ಟ್ರೀಯ ಚಲನಚಿತ್ರೋತ್ಸವ) ಎಂಬ ಕನ್ನಡ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮವು ನವೆಂಬರ್ 15 ರಿಂದ 18 ರವರೆಗೆ ಸಿನಿಪೊಲಿಸ್ (ಸೆಂಟರ್ ಸ್ಕೈರ್ ಮಾಲ್) ಕೊಚ್ಚಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ನೂತನ ಜಾಹೀರಾತಿನಲ್ಲಿ ಸುದೀಪ್ ಅವರು ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಕಿಚ್ಚ ಸುದೀಪ್ ಜೊತೆ ಅನಂತ್ ನಾಗ್, 'ಮಾರಿಬಿಡಿ' ಅಂದ್ರು!!]

  ಒಟ್ನಲ್ಲಿ ಇಡೀ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಕ್ಷೇತ್ರದಲ್ಲೂ ಬ್ಯುಸಿಯಾಗಿರುವ ನಟ ಸುದೀಪ್ ಅವರು ಸದ್ಯಕ್ಕೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 3' ನಡೆಸಿಕೊಡುತ್ತಿದ್ದಾರೆ.

  English summary
  Kichcha Sudeep has become the new brand ambassador of ALIIFF (All Lights India International Film Festival) for representing Kannada Cinema which is all set to run from November 15-18 at Cinepolis (Centre Square Mall) in Kochi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X