ರನ್ನ ನಿರ್ಮಾಪಕರಿಗೆ ಸುದೀಪ್ ಕೊಟ್ರ ಗುನ್ನ?

By ಜೇಮ್ಸ್ ಮಾರ್ಟಿನ್

2013ರಲ್ಲಿ ತೆಲುಗಿನಲ್ಲಿ ತೆರೆ ಕಂಡ ಅತ್ತಾರಿಂಟಿಕಿ ದಾರೇದಿ ಚಿತ್ರವನ್ನು ಸಮರ್ಥವಾಗಿ ರಿಮೇಕ್ ಮಾಡಿ ಯಶಸ್ವಿಯಾದ ರನ್ನ ಚಿತ್ರ ತಂಡ ಸಂಭ್ರಮದಲ್ಲಿದೆ. ರಾಜ್ಯದ ಹಲವೆಡೆ 50 ದಿನ ಪೂರೈಸಿರುವ ಸಂದರ್ಭದಲ್ಲಿ ಚಿತ್ರ ತಂಡಕ್ಕೆ ಚಿತ್ರದ ನಾಯಕ ಕಿಚ್ಚ ಸುದೀಪ ಅವರು ವಿಶ್ ಮಾಡಿದ್ದಾರೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ರನ್ನ ಚಿತ್ರ ತಂಡಕ್ಕೆ ನನ್ನ ಶುಭ ಹಾರೈಕೆಗಳು, ಇಡೀ ಚಿತ್ರ ತಂಡದ ಯಶಸ್ಸು ಇದಾಗಿದೆ ಎಂದು ಹೇಳಿಕೊಂಡಿದ್ದಾರೆ. ನಂತರ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಕೇಳಿದ ಸಂದೇಹಕ್ಕೆ ಅಲ್ಲೇ ಉತ್ತರಿಸಿದ್ದಾರೆ. ಅದರೆ, ಮತ್ತೊಂದು ಟ್ವೀಟ್ ನಲ್ಲಿ ಚಿತ್ರದ ನಿರ್ಮಾಪಕರು ಹಾಗೂ ವಿತರಕರ ಬಗ್ಗೆ ಹೇಳಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಪುಣ್ಯಕ್ಕೆ ನಿರ್ಮಾಪಕರು ಹಾಗೂ ವಿತರಕರಿಗೆ ಜಗ್ಗೇಶ್ ಅಥವಾ ಉಪೇಂದ್ರರಂತೆ ಫ್ಯಾನ್, ಎಸಿ, ಬಾಲಗಳಿಲ್ಲ. ಇದ್ದಿದ್ದರೆ ಟ್ವೀಟ್ ಗೆ ಪ್ರತಿ ಟ್ವೀಟ್ ಗಳು ಬಂದು ಸಾಮಾಜಿಕ ತಾಣ ಗಳ ನಿಜಾರ್ಥವನ್ನೇ ಗಬ್ಬೆಬ್ಬಿಸುಬಿಡುತ್ತಿತ್ತು. ಸುದೀಪ್ ಅವರು ತಮ್ಮ ಮನದಾಳದ ನೋವನ್ನು ಈ ರೀತಿ ತೋಡಿಕೊಂಡಿರಬಹುದು ಎಂದು ಅರ್ಥೈಸಿಕೊಳ್ಳಬಹುದು. ಸುದೀಪ ಏನೇನು ಹೇಳಿದ್ದಾರೆ. ಅವರ ಟ್ವೀಟ್ ಗಳಲ್ಲೇ ಓದಿ...

ಚಿತ್ರದ ನಿರ್ಮಾಪಕರ ಜೊತೆ ಏನು ಕಿರಿಕ್?

ಚಿತ್ರದ ನಿರ್ಮಾಪಕರ ಜೊತೆ ಏನು ಕಿರಿಕ್?

ಶ್ರೀನಿಮಿಷಾಂಬ ಪ್ರೊಡೆಕ್ಷನ್ ನಲ್ಲಿ ನಿರ್ಮಾಣವಾದ ರನ್ನ ಚಿತ್ರದ ನಿರ್ಮಾಪಕರು ಎಂ ಚಂದ್ರಶೇಖರ್ ಹಾಗೂ ವಿತರಣೆ ಶ್ರೀಗೋಕುಲ್ ಫಿಲಮ್ಸ್ ಗೆ ಸೇರಿದೆ. ಕಿಚ್ಚ ಸುದೀಪ್, ರಚಿತಾ ರಾಮ್, ಹರಿಪ್ರಿಯ, ಮಧು, ಪ್ರಕಾಶ್ ರೈ ಸೇರಿದಂತೆ ಬಹು ತಾರಾಗಣವಿರುವ ರಿಮೇಕ್ ಚಿತ್ರವನ್ನು ಕನ್ನಡಿಗರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಚಿತ್ರದ ಯಶಸ್ಸಿಗೆ ಕಾರಣರಾದರು. ಅದರೆ, ನಿರ್ಮಾಪಕರ ಜೊತೆ ನಾಯಕ ನಟ ಸುದೀಪ್ ಅವರಿಗೆ ಏನು ತೊಂದರೆಯಾಗಿದೆಯೋ ಗೊತ್ತಿಲ್ಲ.

ರನ್ನ ತಂಡಕ್ಕೆ ಶುಭ ಹಾರೈಕೆ

ಚಿತ್ರದ ನಾಯಕ ನಟ ಸುದೀಪ್ ಅವರು ತಮ್ಮ ರನ್ನ ಚಿತ್ರ ತಂಡಕ್ಕೆ ಶುಭ ಹಾರೈಕೆ ಮಾಡಿದ್ದು ಹೀಗೆ..

ನಿರ್ಮಾಪಕರು, ವಿತರಕರ ಬಗ್ಗೆ ಸುದೀಪ್

ನಿರ್ಮಾಪಕರು, ವಿತರಕರ ಬಗ್ಗೆ ಸುದೀಪ್ ಟ್ವೀಟ್ ಮಾಡಿ, ಚಿತ್ರ ಬಿಡುಗಡೆಯಾದ ಮೇಲೆ ಅವರೊಟ್ಟಿಗೆ ಮಾತುಕತೆ ಮಾಡಿಲ್ಲ ಎಂದಿದ್ದಾರೆ. ಈ ಟ್ವೀಟ್ ಅರ್ಥ ಏನು ಎಂಬುದನ್ನು ಆಸಕ್ತರು ಸುದೀಪ್ ಅವರಿಗೆ ಟ್ವೀಟ್ ಮಾಡಿ ಕೇಳಬಹುದು.

ತರುಣ್ ಸುಧೀರ್ ಜೊತೆ ಸುದೀಪ್

ತರುಣ್ ಸುಧೀರ್ ಜೊತೆ ಸುದೀಪ್ ಸಂತಸದ ಸಮಯದಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಸುಧೀರ್ ಅವರ ಸುಪುತ್ರರಾದ ನಂದ ಕಿಶೋರ್ ಹಾಗೂ ತರುಣ್ ಸುಧೀರ್ ಅವರ ಏಳಿಗೆಗೆ ಸುದೀಪ್ ಸಾಕಷ್ಟು ನೆರವಾಗಿದ್ದಾರೆ. ರನ್ನ ನಂತರ ನಂದ ಅವರ ಜೊತೆ ಲವ ಎಂಬ ಮತ್ತೊಂದು ಚಿತ್ರ ಮಾಡುವುದಾಗಿಯೂ ಸುದೀಪ್ ಹೇಳಿದ್ದಾರೆ.

ಮುಂದಿನ ಯೋಜನೆ ಬಗ್ಗೆ ಸುದೀಪ್

ತಮಿಳಿನ ಕೆ ಎಸ್ ರವಿಕುಮಾರ್ ಜೊತೆ ಮಾಡುತ್ತಿರುವ ಸಿನಿಮಾ ಹಾಗೂ ಹೆಬ್ಬುಲಿ ಎರಡು ಕೂಡಾ ಏಕಕಾಲಕ್ಕೆ ಶೂಟಿಂಗ್ ನಡೆಯಲಿದೆ ಎಂದ ಸುದೀಪ್.

ಕೋಟಿಗೊಬ್ಬ ಅಲ್ಲ ಎಂದ ಸುದೀಪ

ಕೋಟಿಗೊಬ್ಬ ಚಿತ್ರ ಮಾಡುತ್ತಿಲ್ಲ ಎಂದ ಸುದೀಪ್. ರವಿಕುಮಾರ್ ನಿರ್ದೇಶನದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದು ದೃಢಪಡಿಸಿದರು.

More from Filmibeat

English summary
Actor Kichcha Sudeep took twitter to wish Ranna film team for completion of 50 Days. But, in the next tweet he said "Hvnt heard atall frm th producer or th distributor after th release..wishin them fr th 50 days of Ranna..."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X