ಚಿರಂಜೀವಿ ಸರ್ಜಾ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

'ವರದನಾಯಕ' ಚಿತ್ರದಲ್ಲಿನ ಚಿರಂಜೀವಿ ಸರ್ಜಾರ ಅಭಿನಯ, ಕಿಚ್ಚ ಸುದೀಪ್ ಅವರಿಗೆ ಮೆಚ್ಚುಗೆಯಾಗಿದೆ. ಈ ವಿಷಯವನ್ನು ಯಾರೋ ಹೇಳಿದ್ದಲ್ಲ. ಸ್ವತಃ ಸುದೀಪ್ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಮೊನ್ನೆ (11 ಸೆಪ್ಟೆಂಬರ್) 'ವರದನಾಯಕ' ಚಿತ್ರದ ಡಬ್ಬಿಂಗ್ ಪ್ರಾರಂಭಿಸಿರುವ ಸುದೀಪ್, ಈ ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾ ಅವರಿಗೆ ಅಣ್ಣನಾಗಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಕಿಚ್ಚ ನಾಯಕಿಯಾಗಿ ಸಮೀರಾ ರೆಡ್ಡಿ ನಟಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುದೀಪ್ "Strtn dubbin fr VaradhaNayaka frm today...Jus saw a run thru few days bk,,Chiru has done a grt job ..hope it does him gud..." ಎಂದಿದ್ದಾರೆ. ಡಬ್ಬಿಂಗ್ ಮಾಡುವ ಕಾಲಕ್ಕೆ ಚಿತ್ರದ ದೃಶ್ಯಗಳನ್ನು ನೋಡಿರುವ ಸುದೀಪ್ "ಚಿರಂಜೀವಿ ಸರ್ಜಾ 'ವರದನಾಯಕ' ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ, ಈ ಚಿತ್ರದಿಂದ ಚಿರುಗೆ ಒಳ್ಳೆಯದಾಗಲಿದೆ" ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸ್ವತಃ ಸುದೀಪ್ ಈ 'ವರದನಾಯಕ' ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಅವರೀಗ 'ಸೌತ್ ಇಂಡಿಯಾ'ದ ಹೊಸ 'ಸೂಪರ್ ಸ್ಟಾರ್'. ಹೀಗಿರುವಾಗ ಸುದೀಪ್ ಮಾತಿಗೆ ಭಾರಿ ಬೆಲೆಯಿದೆ ಎಂಬುದು ವಾಸ್ತವ. ಚಿರು ಬಗ್ಗೆ ಸುದೀಪ್ ಹೇಳಿರುವ ಮಾತುಗಳು ಚಿರಂಜೀವಿ ಸರ್ಜಾ ಯಶಸ್ಸಿನ ಬಗ್ಗೆ ಚಿಂತೆಗೀಡಾಗಿದ್ದ ಅವರ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ 'ಗ್ರೇಟ್ ಟಾನಿಕ್' ಆಗುವುದರಲ್ಲಿ ಸಂದೇಹವೇ ಇಲ್ಲ.ಚ

ಕಿಚ್ಚ ಸುದೀಪ್ ಮಾತಿಗೆ ಚಿರಂಜೀವಿ ಸರ್ಜಾ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು. "ಸುದೀಪ್ ನನಗೆ ಗಾಡ್ ಫಾದರ್ ಇದ್ದಂತೆ. ದೊಡ್ಡವರ ದೊಡ್ಡ ಮಾತು ನನಗೆ ಆಶೀರ್ವಾದವಾಗಿದೆ" ಎಂದು ಚಿರು ಸುದೀಪ್ ಹೇಳಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂಬುದು ಚಿರಂಜೀವಿ ಸರ್ಜಾರ ಆಪ್ತರ ಮಾತು. ಒಟ್ಟಿನಲ್ಲಿ 'ಅದ್ದೂರಿ' ಚಿತ್ರದ ನಂತರ ಚಿರು ತಮ್ಮ 'ಧ್ರುವ ಸರ್ಜಾ' ಪ್ರಕಾಶಿಸುತ್ತಿರುವ ಬೆನ್ನಲ್ಲೇ, 'ವರದನಾಯಕ' ಮೂಲಕ ಚಿರಂಜೀವಿ ಸರ್ಜಾ 'ಮಿಂಚಿಂಗ್' ಪ್ರಾರಂಭ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kichcha Sudeep Tweets about his Co-star Chiranjeevi Sarja in Varadanayaka Movie on 11th September 2012. He Tweeted that "Strtn dubbin fr VaradhaNayaka frm today...Jus saw a run thru few days bk...Chiru has done a grt job ..hope it does him gud...".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X