Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
10 ಸಾವಿರ ಬುರ್ಜ್ ಖಲೀಫಾ ಕೊಟ್ರು ಆ ಒಂದು ಕ್ಷಣವನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ- ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳು ಪೂರೈಸಿದೆ. 25ನೇ ವರ್ಷದ ಸಂಭ್ರಮವನ್ನು ಕಿಚ್ಚ ಸುದೀಪ್ ದುಬೈನಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಟೀಸರ್ ಅನ್ನು ಬುರ್ಜ್ ಖಲೀಫಾ ಮೇಲೆ ಅನಾವರಣ ಮಾಡಲಾಗುತ್ತಿದೆ.
ಜನವರಿ 31ಕ್ಕೆ ಬುರ್ಜ್ ಖಲೀಫಾ ಮೇಲೆ ಟೀಸರ್ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೆ ಕಿಚ್ಚ ಇಂದು ದುಬೈನಿಂದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಕಿಚ್ಚ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 25 ವರ್ಷದ ಸಿನಿಮಾ ಜರ್ನಿಯ ಏಳು-ಬೀಳಿನ ಬಗ್ಗೆ ಮಾತನಾಡಿದ್ದಾರೆ.

ಹುಚ್ಚ ಸಿನಿಮಾದ ಅನುಭವ ಬಿಚ್ಚಿಟ್ಟ ಕಿಚ್ಚ
ಸಿನಿಮಾ ರಿಲೀಸ್ ಆದ ದಿನ ಚಿತ್ರ ಮಂದಿರಕ್ಕೆ ತೆರಳಿದ್ದಾಗ ಆದ ಅನುಭವದ ಬಗ್ಗೆ ಮಾತನಾಡಿದ ಸುದೀಪ್, 'ಚಿತ್ರಮಂದಿರಕ್ಕೆ ಹೋದಾಗ, 7-8 ಜನ ಇದ್ರು. ಒಬ್ಬ ಹಾರ ಕೈಯಲ್ಲಿ ಹಿಡಿದು ನಿಂತಿದ್ದ. ನಾನು ಹೋಗುತ್ತಿದ್ದಹಾಗೆ ಬಂದು ಹಾರ ಹಾಕಿದ್ರು. ಇರೋದು 8 ಜನ ಅದ್ರಲ್ಲಿ ಒಬ್ಬ ಬಂದು ಹಾರ ಹಾಕಿದ್ದು ನೋಡಿ, ತಿಥಿ ಮಾಡೋಕೆ ಬಂದಿದ್ದಾನಾ ಏನು ಅಂತ ಗೊತ್ತಾಗಿಲ್ಲ. ಕಟೌಟ್ ನೋಡಿದ್ರೆ ಕಾಗೆ ಬಿಟ್ರೆ ಒಂದು ಹಾರನು ಇರಲಿಲ್ಲ.'

ಚಿತ್ರ ಮಂದಿರದಲ್ಲಿ 8 ಜನ ಮಾತ್ರ ಇದ್ದರು
'ನಾನು ನನ್ನ ಸ್ನೇಹಿತ ಚಿತ್ರಮಂದಿರದ ಒಳಗೆ ಹೋದೆವು. ಮ್ಯಾನೇಜರ್ ಬಂದು ಕಾಫಿ ಬೇಕಾ ಅಂತ ಕೇಳಿದ್ರು, ಬೇಡ ಎಂದೆ, ಕಾಫಿ ತಗೊಳ್ಳಿ ಎಂದು ಒತ್ತಾಯ ಮಾಡಿದ್ರು. ಅವರು ನನ್ನ ಸ್ನೇಹಿತನ ಬಳಿ ಕೇಳಿದ್ರು ಏನಾಯಿತು ಎಂದು ಆಗ ಜನ ಇಲ್ಲ ಅದಕ್ಕೆ ಹೀಗೆ ಕುಳಿದ್ದಾರೆ ಎಂದ. ಆಗ ಅವರು ಇದಕ್ಕಿಂತ ಜನ ಬೇಕಾ ಎಂದು ಹೇಳಿದ್ರು. 8 ಜನಕ್ಕೆ ಇವರು ಇಷ್ಟು ದೊಡ್ಡ ಕ್ರೌಡ್ ಅಂತ ಅಂದುಕೊಂಡಿದ್ದಾರಾ ಅಂತ ಅಂದು ಕೊಂಡೆ.
Recommended Video

7 ಗಂಟೆ ಶೋ ಹೌಸ್ ಫುಲ್ ಆಗಿತ್ತು
'ಆಗ ಅವರು ಹೇಳಿದ್ರು ಬೆಳಗ್ಗೆ 7 ಗಂಟೆ ಶೋ ಹೌಸ್ ಫುಲ್ ಆಗಿದೆ ಅಂತ. ಅದನ್ನು ಕೇಳಿ ನನ್ನ ಕಿವಿ ಮ್ಯೂಟ್ ಆಯಿತು. ಬಳಿಕ ಚಿತ್ರಮಂದಿರಕ್ಕೆ ಜನ ಬರಲು ಪ್ರಾರಂಭಿಸಿದರು. ಸಿನಿಮಾ ಮುಗಿತು ಎಲ್ಲರೂ ಸೈಲೆಂಟ್ ಆಗಿದ್ದರು. ನಾನು ಕ್ರೌಡ್ ಜೊತೆ ಕೆಳಗೆ ಇಳಿದು ಬಂದೆ. ಒಬ್ಬ ನೋಡಿ ನನ್ನನ್ನು ಕಿಚ್ಚ ಎಂದು ಕರೆದ. ಆಗ ಎಲ್ಲರೂ ಹಾಗೆ ತಿರುಗಿ ತಿರುಗಿ ನೋಡುತ್ತ ಕಿಚ್ಚ ಕಿಚ್ಚ ಎಂದು ಕರೆಯಲು ಪ್ರಾರಂಭಿಸಿದರು.

ಆ ಕ್ಷಣವನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ
'ನನ್ನನ್ನು ಎತ್ತಿಕೊಂಡು ಹೋಗಿ ಕಾರಿನ ಮೇಲೆ ಕುಳಿಸಿದ್ರು. ಸುತ್ತಲು ಎಲ್ಲರೂ ಕಿಚ್ಚ ಕಿಚ್ಚ ಎಂದು ಕೂಗುತ್ತಿದ್ದರು. ಆ ಕ್ಷಣ ಮರೆಯಲೂ ಸಾಧ್ಯವಿಲ್ಲ. 10 ಸಾವಿರ ಬುರ್ಜ್ ಖಲೀಫಾ ಕೊಟ್ರು ಆ ಒಂದು ಕ್ಷಣವನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಅವತ್ತಿಂದ ಪ್ರಾರಂಭವಾದ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ' ಎಂದು ಹೇಳಿದ್ದಾರೆ.