ಮತ್ತೊಮ್ಮೆ 'ಮೈ ಆಟೋಗ್ರಾಫ್' ಪುಟ ತೆರೆದ ಸುದೀಪ್: 15 ವರ್ಷದ ನಂತರ ಲತಿಕಾ ಮನೆಗೆ ಭೇಟಿ

ಹೈದರಾಬಾದ್‌ನಲ್ಲಿ ಫ್ಯಾಂಟಮ್ ಸಿನಿಮಾ ಶೂಟಿಂಗ್ ಮುಗಿಸಿರುವ ಕಿಚ್ಚ ಸುದೀಪ್ ಬ್ರೇಕ್‌ನ ನಂತರ ಕೇರಳ ಕಡೆ ಪ್ರಯಾಣ ಬೆಳಸಿದ್ದಾರೆ. ದೇವರನಾಡಿನಲ್ಲಿ ಸುತ್ತಾಡುತ್ತಿರುವ ಅಭಿನಯ ಚಕ್ರವರ್ತಿ ಸುಮಾರು 15 ವರ್ಷದ ಹಿಂದಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

Recommended Video

15 ವರ್ಷ ಹಳೇ ನೆನಪನ್ನು ಹಂಚಿಕೊಂಡ Kichcha Sudeep | Filmibeat Kannada

ಹದಿನೈದು ವರ್ಷದ ಹಿಂದೆ ಶೂಟಿಂಗ್ ಮಾಡಿದ್ದ ಸ್ಥಳಕ್ಕೆ ಭೇಟಿ ನೀಡಿರುವ ಸುದೀಪ್, ಆ ಕಾಲದಲ್ಲಿ ತಾವು ಚಿತ್ರೀಕರಿಸಿದ ದೃಶ್ಯಗಳನ್ನು ಸ್ಮರಿಸಿಕೊಂಡಿದ್ದಾರೆ. 2006ರಲ್ಲಿ ಬಿಡುಗಡೆಯಾಗಿದ್ದ 'ಮೈ ಆಟೋಗ್ರಾಫ್' ಸಿನಿಮಾದ ಶೂಟಿಂಗ್ ನಡೆಸಿದ್ದ ಮನೆಯೊಂದರ ಬಳಿ ಹೋಗಿರುವ ಸುದೀಪ್ ಅಲ್ಲಿ ಸಮಯ ಕಳೆದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಹ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಲತಿಕಾ ಮನೆಗೆ ಭೇಟಿ ನೀಡಿದ ಸುದೀಪ್

ಲತಿಕಾ ಮನೆಗೆ ಭೇಟಿ ನೀಡಿದ ಸುದೀಪ್

ಸುದೀಪ್ ನಾಯಕನಾಗಿ ನಟಿಸಿದ್ದ ಮೈ ಆಟೋಗ್ರಾಫ್ ಚಿತ್ರದಲ್ಲಿ ಎರಡನೇ ನಾಯಕಿ ಲತಿಕಾ. ಲತಿಕಾ ಅವರ ದೃಶ್ಯಗಳು ಕೇರಳದಲ್ಲಿ ನಡೆಯುತ್ತದೆ. ಆ ಚಿತ್ರದಲ್ಲಿ ಲತಿಕಾ ಅವರ ಮನೆಯಾಗಿದ್ದ ಸ್ಥಳಕ್ಕೆ ಈಗ ಸುದೀಪ್ ಹೋಗಿದ್ದಾರೆ. ಸುಮಾರು ಹದಿನೈದು ವರ್ಷದ ನಂತರ ಈ ಮನೆಗೆ ಭೇಟಿ ನೀಡಿರುವ ಸುದೀಪ್ ಎಲ್ಲೆಲ್ಲಿ ಯಾವ ದೃಶ್ಯ ಚಿತ್ರೀಕರಿಸಿದ್ವಿ ಎಂದು ನೆನಪಿಸಿಕೊಂಡಿದ್ದಾರೆ.

ಕಾರಿಡರ್ ಸುತ್ತಾಡಿದ ಸುದೀಪ್

ಕಾರಿಡರ್ ಸುತ್ತಾಡಿದ ಸುದೀಪ್

ಆಟೋಗ್ರಾಫ್ ಚಿತ್ರದ ದೃಶ್ಯವೊಂದರಲ್ಲಿ ನಾಯಕಿಯನ್ನು ಹುಡುಕಿಕೊಂಡು ಈ ಮನೆ ಬಳಿ ಬರುವ ಸುದೀಪ್ ಕಾರಿಡರ್‌ನಲ್ಲಿ ಸುಮಾರು ಬಾರಿ ಸುತ್ತಾಡ್ತಾರೆ. 15 ವರ್ಷದ ಸುದೀಪ್ ಮತ್ತೆ ಆ ಜಾಗಕ್ಕೆ ಭೇಟಿ ನೀಡಿ, ಆ ಕಾರಿಡರ್ ಪರಿಚಯ ಮಾಡಿಕೊಟ್ಟಿದ್ದಾರೆ. ಪ್ರವೇಶದಲ್ಲಿ ಆನೆಗಳು ಇರುತ್ತದೆ, ಅಲ್ಲೇ ಪಕ್ಕದಲ್ಲಿ ಹಿರಿಯ ಅಜ್ಜಿಯೊಬ್ಬರು ಕುಳಿತಿರುತ್ತಾರೆ.

ಮನೆಯೊಳಗೆ ವೀಣೆ ಬಾರಿಸುವ ದೃಶ್ಯ

ಮನೆಯೊಳಗೆ ವೀಣೆ ಬಾರಿಸುವ ದೃಶ್ಯ

ಮನೆಯೊಳಗೆ ಹೋದ ಸಂದರ್ಭದಲ್ಲಿ ಲತಿಕಾ ವೀಣೆ ಬಾರಿಸುವ ದೃಶ್ಯ ಇದೆ. ಆ ಸ್ಥಳಕ್ಕೂ ಸುದೀಪ್ ಹೋಗಿ ಈ ಸ್ಥಳದಲ್ಲಿ ವೀಣೆ ಸೀನ್ ಚಿತ್ರೀಕರಿಸಿದ್ವಿ ಎಂದು ತೋರಿಸಿದ್ದಾರೆ. ಬಹಳ ನೆನಪುಗಳಿವೆ ಈ ಮನೆಯಲ್ಲಿ ಎಂದು ಸುದೀಪ್ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಲತಿಕಾ ಮನೆಯಲ್ಲಿ ಕುಳಿತು ಸಮಯ ಕಳೆದ ಶಂಕರ್

ಲತಿಕಾ ಮನೆ ಹಾಗೂ ಅದರ ಸುತ್ತ ಮುತ್ತ ಚಿತ್ರೀಕರಣ ನಡೆದ ಸ್ಥಳಕ್ಕೂ ಸುದೀಪ್ ಹೋಗಿದ್ದಾರೆ. ಈ ಅನುಭವವನ್ನು ವಿಡಿಯೋದಲ್ಲಿ ಸೆರೆಹಿಡಿದಿರುವ ಕಿಚ್ಚ 15 ವರ್ಷದ ಹಿಂದಿನ ಕಾಲಕ್ಕೆ ಹಿಂತಿರುಗಿದ್ದಾರೆ. ಬಹುಶಃ ಈ ವಿಡಿಯೋ ನೋಡಿದ್ಮೇಲೆ ಸುದೀಪ್ ಅಭಿಮಾನಿಗಳಿಗೆ ಮತ್ತೊಮ್ಮೆ ಮೈ ಆಟೋಗ್ರಾಫ್ ಸಿನಿಮಾ ನೋಡ್ಬೇಕು ಅನಿಸಿದರೂ ಅಚ್ಚರಿ ಇಲ್ಲ.

ಸುದೀಪ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಚಿತ್ರ

ಸುದೀಪ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಚಿತ್ರ

'ಮೈ ಆಟೋಗ್ರಾಫ್' ಚಿತ್ರಕ್ಕೆ ಸ್ವತಃ ಸುದೀಪ್ ಅವರೇ ನಿರ್ದೇಶನ ಮಾಡಿದ್ದರು. ಇದು ಕಿಚ್ಚ ಸುದೀಪ್ ಡೈರೆಕ್ಷನ್ ಮಾಡಿದ ಚೊಚ್ಚಲ ಸಿನಿಮಾ. ಜೊತೆಗೆ ನಿರ್ಮಾಣ ಸಹ ಸುದೀಪ್ ಅವರದ್ದೇ. ತಮಿಳಿನಲ್ಲಿ ತೆರೆಕಂಡಿದ್ದ ಆಟೋಗ್ರಾಫ್ ಸಿನಿಮಾದ ಕನ್ನಡ ರೀಮೇಕ್ ಇದಾಗಿತ್ತು. ರೀಮೇಕ್ ಆಗಿದ್ದರೂ ಕನ್ನಡ ಪ್ರೇಕ್ಷಕರು ಈ ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದರು. ಸುದೀಪ್, ಮೀನಾ, ಶ್ರೀದೇವಿಕಾ (ಲತಿಕಾ), ದೀಪು, ರಶ್ಮಿ ಕುಲಕರ್ಣಿ, ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವರು ನಟಿಸಿದ್ದರು.

More from Filmibeat

English summary
Kannada actor Kichcha Sudeep Visits My Autograph Movie Shooting Location in Kerala after 15 Years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X