'ಟ್ವಿಂಟಿ ಒನ್ ಅವರ್ಸ್' ಚಿತ್ರತಂಡಕ್ಕೆ ಕಿಚ್ಚನ ಅತಿಥ್ಯ: ಸಿನಿಮಾ ನೋಡಿ ಕಿಚ್ಚ ಹೇಳಿದ್ದೇನು?

ನಟ ಕಿಚ್ಚ ಸುದೀಪ್ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಸಮಯ ಮಾಡಿಕೊಂಡು ಕನ್ನಡದ ಹೊಸ ಸಿನಿಮಾಗಳನ್ನು ನೋಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸುತ್ತಾರೆ. ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸುತ್ತಾರೆ. ನಿನ್ನೆಯಷ್ಟೇ (ಮೇ 17) 777 ಚಾರ್ಲಿ ಸಿನಿಮಾ ನೋಡಿ ಚಿತ್ರ ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದರು. ಈಗ ನಟ ಧನಂಜಯ್ ಅಭಿನಯದ 'ಟ್ವಿಂಟಿ ಒನ್ ಅವರ್ಸ್' ಸಿನಿಮಾವನ್ನು ವೀಕ್ಷಣೆ ಮಾಡಿ ಚಿತ್ರತಂಡಕ್ಕೆ ಆತಿಥ್ಯ ನೀಡಿ ವಿಶೇಷವಾಗಿ ಶುಭ ಕೋರಿದ್ದಾರೆ.

ಹೌದು ಧನಂಜಯ್ ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್ ಅವರ ಮುಂದಿನ ಚಿತ್ರ 'ಟ್ವಿಂಟಿ ಒನ್ ಅವರ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಮೇ 20 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ. ಯಾವಾಗಲೂ ಹೊಸ ಚಿತ್ರಗಳನ್ನು ವೀಕ್ಷಿಸಿ ಬೆನ್ನು ತಟ್ಟುವ ಕಿಚ್ಚ ಸುದೀಪ್ ಈ ಸಿನಿಮಾವನ್ನು ವೀಕ್ಷಣೆ ಮಾಡಿ ಶುಭ ಹಾರೈಸಿದ್ದಾರೆ.

ಸುದೀಪ್ ಸಾಮಾನ್ಯವಾಗಿ ತಮ್ಮ ನೆಚ್ಚಿನ ಪ್ರೀತಿ ಪಾತ್ರರಿಗೆ ತಾವೇ ಕೈಯಾರೆ ಅಡುಗೆ ಮಾಡಿ ಬಡಿಸುತ್ತಾರೆ. ಇಂತಹ ಎಷ್ಟೋ ಭಾರೀ ತಮ್ಮ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲೂ ನಟ ಸುದೀಪ್ ಮಾಡಿದ್ದಾರೆ. ಹಾಗೇಯೇ ನಟ ಧನಂಜಯ್ ಹಾಗೂ 'ಟ್ವಿಂಟಿ ಒನ್ ಅವರ್ಸ್' ಚಿತ್ರತಂಡಕ್ಕೂ ಕೂಡ ಇದೇ ಪ್ರೀತಿಯ ಆತಿಥ್ಯವನ್ನು ನೀಡಿದ್ದಾರೆ. ಚಿತ್ರ ನೋಡಿ ಒಳ್ಳೆಯ ಮಾತುಗಳನ್ನಾಡಿದ್ದಲ್ಲದೆ, ತಾವೇ ಸ್ವತಃ ದೋಸೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ನಟ ಧನಂಜಯ್ ಟ್ವಿಟರ್‌ನಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಧನಂಜಯ್‌ರನ್ನು ತಬ್ಬಿ ಬರಮಾಡಿಕೊಂಡು ತುಂಬು ಪ್ರೀತಿಯಿಂದ ಇಡೀ ತಂಡಕ್ಕೆ ಕೈಯಾರೆ ದೋಸೆ ಮಾಡಿಕೊಟ್ಟು 'ಟ್ವಿಂಟಿ ಒನ್ ಅವರ್ಸ್' ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನೂ ಹೇಳಿ, ಒಳ್ಳೆಯದನ್ನೇ ಹಾರೈಸಿ ಬೀಳ್ಕೊಟ್ಟ ನಿಮ್ಮ ಅತಿಥ್ಯಕ್ಕೆ ಇಡೀ ತಂಡ ಅಭಾರಿಯಾಗಿದೆ." ಎಂದು ಬರೆದುಕೊಂಡು ಸುದೀಪ್ ಜೊತೆಗಿನ ಪೋಟೊವನ್ನು ಹಂಚಿಕೊಂಡಿದ್ದಾರೆ.

Kichcha Sudeep Watch Actor Dhanajay Starrer 21 Hours Movie

'ಟ್ವಿಂಟಿ ಒನ್ ಅವರ್ಸ್' ಸಿನಿಮಾವನ್ನು ನೋಡಿದ ಕಿಚ್ಚ ಸುದೀಪ್ ತಮ್ಮ ಟ್ವಿಟರ್‌ನಲ್ಲಿ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ.' 'ಟ್ವಿಂಟಿ ಒನ್ ಅವರ್ಸ್' ಚಿತ್ರದ ಕಥೆ ಕುತೂಹಲಕಾರಿಯಾಗಿದೆ. ಬಹಳ ಚೆನ್ನಾಗಿ ಪಾತ್ರ ನಿರ್ವಹಣೆ ಮಾಡಿದ್ದೀರಿ. ವಿಶೇಷವಾಗಿ ಚಿತ್ರದ ಸಂಗೀತ ಬಹಳ ಸೊಗಸಾಗಿ ಮೂಡಿ ಬಂದಿದೆ,' ಎಂದು ಚಿತ್ರದ ಬಗ್ಗೆ ನಟ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.

Kichcha Sudeep Watch Actor Dhanajay Starrer 21 Hours Movie

'ಟ್ವಿಂಟಿ ಒನ್ ಅವರ್ಸ್' ಸಿನಿಮಾ ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುವ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್ ಮೂಲಕ ನೀರಿಕ್ಷೆಯನ್ನು ಹೆಚ್ಚಿಸಿದೆ. ಮೊದಲು ಕನ್ನಡದಲ್ಲಿ ರಿಲೀಸ್ ಆಗಿ ನಂತರ ಸಿನಿಮಾ ಮಲಯಾಳಂನಲ್ಲೂ ಈ ಸಿನಿಮಾ ತೆರೆ ಕಾಣಲಿದೆ.

More from Filmibeat

English summary
Kichcha Sudeep Invited Dhananjay Starrer 21 hours Movie Team To His House And Watched The Movie .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X