For Quick Alerts
  ALLOW NOTIFICATIONS  
  For Daily Alerts

  ಸದುದ್ದೇಶಕ್ಕಾಗಿ ವಿಶ್ವವಿಜೇತನಿಗೆ ಕಿಚ್ಚ ಸುದೀಪ್ ಸವಾಲು

  |

  ಸಿನಿಮಾಗಳಲ್ಲಿ ವಿಲನ್‌ಗಳಿಗೆ ಸವಾಲೆಸೆದು ಕೊಚ್ಚಿ, ಕೆಡವಿ, ಪುಡಿ-ಪುಡಿ ಮಾಡುವ ಕಿಚ್ಚ ಸುದೀಪ್ ನಿಜ ಜೀವನದಲ್ಲಿ ವಿಶ್ವಚಾಂಪಿಯನ್‌ಗೆ ಸವಾಲೆಸೆದಿದ್ದಾರೆ.

  ಐದು ಬಾರಿ ಚೆಸ್ ವಿಶ್ವಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ವಿರುದ್ಧ ಕಿಚ್ಚ ಸುದೀಪ್ ಚೆಸ್ ಆಟವಾಡಲಿದ್ದಾರೆ. ಆದರೆ ಈ ಆಟವನ್ನು ಸದುದ್ದೇಶಕ್ಕಾಗಿ ಆಡಲಿದ್ದಾರೆ.

  ಕೋವಿಡ್‌ನಿಂದ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದಿಂದ ವಿಶ್ವನಾಥನ್ ಆನಂದ್ ಅವರು ಇತರ ಕೆಲವು ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸೆಲೆಬ್ರಿಟಿಗಳ ವಿರುದ್ಧ ಚೆಸ್ ಆಡಲಿದ್ದಾರೆ. ಆಟವಾಡುವ ಮೂಲಕ ದೇಣಿಗೆ ಸಂಗ್ರಹ ಮಾಡಲಿದ್ದಾರೆ.

  ಜೂನ್ 13ರಂದು ಪಂದ್ಯ

  ಜೂನ್ 13ರಂದು ಪಂದ್ಯ

  ವಿಶ್ವನಾಥ್ ಆನಂದ್ ಅವರನ್ನು ಜೂನ್ 13 ರಂದು ಸುದೀಪ್ ಎದುರಿಸಲಿದ್ದಾರೆ. ಆಟವು ಸಂಜೆ 5 ಗಂಟೆಗೆ ಪ್ರಾರಂಭವಾಗಲಿದೆ. ಸುದೀಪ್ ಮಾತ್ರವೇ ಅಲ್ಲದೆ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧವೂ ವಿಶ್ವನಾಥನ್ ಆನಂದ್ ಚೆಸ್ ಆಡಲಿದ್ದಾರೆ.

  ಕ್ರಿಕೆಟ್‌ ಬಗ್ಗೆ ಅಪಾರ ಪ್ರೀತಿಯುಳ್ಳ ಸುದೀಪ್

  ಕ್ರಿಕೆಟ್‌ ಬಗ್ಗೆ ಅಪಾರ ಪ್ರೀತಿಯುಳ್ಳ ಸುದೀಪ್

  ಸುದೀಪ್ ಒಳ್ಳೆಯ ಕ್ರಿಕೆಟ್ ಆಟಗಾರ ಆಟದ ಬಗ್ಗೆ ಬಹಳ ಪ್ರೀತಿಯುಳ್ಳ ಸುದೀಪ್ ಸೆಲೆಬ್ರಿಟಿ ಲೀಗ್ ಸೇರಿದಂತೆ ಇನ್ನಿತರೆ ಟೂರ್ನಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಆದರೆ ಬಹಿರಂಗವಾಗಿ ಇದೇ ಮೊದಲ ಬಾರಿಗೆ ತನ್ನ ಚೆಸ್ ಆಟದ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

  ಅಭಿಮಾನಿಗಳ ಸಂಭ್ರಮ

  ಅಭಿಮಾನಿಗಳ ಸಂಭ್ರಮ

  ಸುದೀಪ್ ಅವರ ಹಲವು ಆಸಕ್ತಿಗಳಲ್ಲಿ ಚೆಸ್ ಸಹ ಒಂದು ತಾವು ಚೆನ್ನಾಗಿ ಚೆಸ್ ಆಟ ಆಡುವುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ತಮ್ಮ ಮೆಚ್ಚಿನ ನಟ ವಿಶ್ವನಾಥನ್ ಆನಂದ್ ಜೊತೆ ಚೆಸ್ ಆಡುತ್ತಿರುವ ಹೆಮ್ಮೆಯ ವಿಷಯವನ್ನು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ.

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada
  'ಕೋಟಿಗೊಬ್ಬ 3' ಬಿಡುಗಡೆಗೆ ತಯಾರು

  'ಕೋಟಿಗೊಬ್ಬ 3' ಬಿಡುಗಡೆಗೆ ತಯಾರು

  ಸಿನಿಮಾ ವಿಷಯಕ್ಕೆ ಮರಳುವುದಾದರೆ ಸುದೀಪ್ ನಟಿಸಿರುವ 'ಕೋಟಿಗೊಬ್ಬ 3' ಬಿಡುಗಡೆಗೆ ತಯಾರಾಗಿದೆ. ಜೊತೆಗೆ 'ವಿಕ್ರಾಂತ್ ರೋಣ' ಸಿನಿಮಾವೂ ಪೂರ್ಣಗೊಂಡಿದ್ದು ಡಬ್ಬಿಂಗ್ ಕಾರ್ಯ ಚಾಲ್ತಿಯಲ್ಲಿದೆ. ಜೊತೆಗೆ ಹಿಂದಿಯಲ್ಲಿ ಒಂದು ಹಾಗೂ ಮಲಯಾಳಂನ ಒಂದು ಸಿನಿಮಾಗಳಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  English summary
  Kichcha Suddeep will play chess against five time world Chess champion Vishwanathan Anand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X